ಹಳಿಯಾಳ : ನಾನು ನನ್ನದು ಎಂಬ ಸ್ವಾರ್ಥತನದಿಂದ ಹೊರಬಂದು ಪರರ ಬಗ್ಗೆ ಚಿಂತಿಸಿ ಪರೋಪಕಾರ ಜೀವನ ನಡೆಸುವುದೇ ಸಾರ್ಥಕ ಜೀವನವಾಗಿದೆ ಮಾತ್ರವಲ್ಲದೇ ವಚನ ಸಾಹಿತ್ಯದ ನಡೆನುಡಿಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಬದುಕು ಉತ್ತಮವಾಗಿರುತ್ತದೆ ಎಂದು ಅಧ್ಯಾತ್ಮೀಕ ಚಿಂತಕ ಎಮ್ ಎನ್ ತಳವಾರ ಹೇಳಿದರು.
ಕನ್ನಡ ಮತ್ತು ಸಂಸ್ಕøತ ಇಲಾಖೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೊಂಗಿರಣ ಸಾಂಸ್ಕøತ ಮತ್ತು ಸಾಮಾಜಿಕ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ತಹಶಿಲ್ದಾರ ಕಛೇರಿಯ ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಆಚರಣೆಯಲ್ಲಿ ಭಾಷಾ ಸೌಹಾರ್ಧತಾ ದಿನಾಚರಣೆಯ ಅಂಗವಾಗಿ ನಡೆದ ಸಂವಾದ ಹಾಗೂ ಕವಿಗೊಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ಮತ್ತು ಸಾಹಿತಿ ಎನ್ ಜಯಚಂದ್ರನ್ ಅವರೊಂದಿಗೆ ನಡೆದ ಸಂವಾದ ಹಾಗೂ ಕವಿ ಗೋಷ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ತಹಶೀಲ್ದಾರ ವಿದ್ಯಾಧರ ಗುಳಗುಳಿ ದೀಪ ಬೆಳಗಿಸಿ ತಮ್ಮದೇ ಕವನ ಓದುವ ಮೂಲಕ ನೇರವೇರಿಸಿದರು.
ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಪೇಂದ್ರ ಗೋರಪಡೆ, ಸುರೇಂದ್ರ ಬಿರ್ಜೆ, ನಿವೃತ್ತ ಪ್ರಾದ್ಯಾಪಕ ಎಸ್ ವಾಯ್ ಹಾದಿಮನಿ, ವಿಜಯ ಸಂದೇಶ ಪತ್ರಿಕೆ ಸಂಪಾದಕರಾದ ಸುಮಂಗಲಾ ಅಂಗಡಿ, ಸುರೇಶ ಕಡೆಮನಿ, ಜೆ.ಡಿ. ಗಂಗಾಧರ, ಭಾರತಿ ನಲವಡೆ, ಇನ್ನಿತರರು ಇದ್ದರು. ಶಿಕ್ಷಕ ಸಿದ್ದಪ್ಪಾ ಬಿರಾದಾರ ಹಾಗೂ ಮಹಾಂತೇಶ ದೇಸಾಯಿ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.
Seems to be good program in Haliyal