ಹಳಿಯಾಳ: ಕಳೆದ 2 ದಿನಗಳಿಂದ ಹಳಿಯಾಳದಲ್ಲಿ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಪಾದುಕಾ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ಹಾಗೂ ಭಿಕ್ಷಾಟನೆ ಕಾರ್ಯಕ್ರಮ ಶ್ರಧ್ದಾಭಕ್ತಿಯಿಂದ ನಡೆಯುತ್ತಿದೆ.
ಕಳೆದ 2 ದಿನಗಳಲ್ಲಿ ನಗರದ ಮುಖ್ಯ ವಾರ್ಡಗಳಲ್ಲಿ ಸಂಚರಿಸಿ ಭವಥಿಃ ಭಿಕ್ಷಾಃ ದೇಃಹಿಃ ಎಂದು ಭಕ್ತರು ಸಲ್ಲಿಸುವ ಭಿಕ್ಷೆಯನ್ನು ಸ್ವೀಕರಿಸಲಾಗುತ್ತಿದೆ. ಕೊನೆಯ ದಿನವಾಗಿರುವ ದಿ.27ರಂದು ದುರ್ಗಾನಗರದಲ್ಲಿ ಭಿಕ್ಷಾಟಣೆ ಕಾರ್ಯಕ್ರಮ ಇದ್ದು ಇಲ್ಲಿಯ ಮಾರುತಿ ದೇವಸ್ಥಾನದಲ್ಲಿ ಪಾದುಕೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ 43 ವರ್ಷಗಳಿಂದ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಈ ಬಾರಿಯ 44ನೇ ಪಾದುಕೆ ಸಂಚಾರ ಹಾಗೂ ಭಿಕ್ಷಾಟನಾ ಕಾರ್ಯಕ್ರಮ ಹಳಿಯಾಳದಲ್ಲಿ ಮೂರನೇಯ ಬಾರಿಗೆ ನಡೆದಿರುವುದು ಭಕ್ತರದಲ್ಲಿ ಸಂತಸ ಮೂಡಿಸಿದೆ ಎಂದು ಹೇಳುವ ಸಂಘಟಕರು ಪ್ರತಿ ವರ್ಷ ಕಾರವಾರ, ಬೆಳಗಾವಿ, ಗದಗ, ಖಾನಾಪೂರ ಹೀಗೆ ಹಲವಾರು ಕಡೆ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಮುಂದಿನ ವರ್ಷ ನಡೆಯುವ ಕಾರ್ಯಕ್ರಮ ಈ ಬಾರಿ ಆಶ್ರಮದಲ್ಲಿ ನಡೆಯುವ ದತ್ತ ಜಯಂತಿಯ ವೇಳೆ ನಿರ್ಧರಿಸಲಾಗುದು ಎಂದು ಹೊನ್ನಾವರ ಪಾದುಕಾಶ್ರಮದ ಮುಖ್ಯಸ್ಥ ಜನಾರ್ಧನ ಅವರು ತಿಳಿಸಿದರು.
ಬೆಳಗಾವಿಯ ಭಕ್ತ ಶೇಶಾಚಲ ಹೊನ್ನಂಗಿ ಮಾತನಾಡಿ ಕಳೆದ 30 ವರ್ಷಗಳಿಂದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬ ಸಮೇತವಾಗಿ ಭಾಗವಹಿಸುತ್ತಿದ್ದು, ಶ್ರೀಧರ ಸ್ವಾಮಿಯವರ ಆಧ್ಯಾತ್ಮದ ವಿಚಾರ ಅವರ ಸಂಸ್ಕಾರಗಳು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
Leave a Comment