ಹಳಿಯಾಳ:- ದೇಶದ ಭವಿಷ್ಯದ ಆಸ್ತಿಯಾಗಿರುವ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಅಂಗನವಾಡಿಗಳಿಂದಲೇ ಉಚಿತ ಶಿಕ್ಷಣ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪಾಲಕರು ಆಸಕ್ತಿ ವಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು.
ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ 3 ಲಕ್ಷರೂ. ವೆಚ್ಚದಲ್ಲಿ ಹಾಗೂ ಹೊರುಗಲ್ಲಿಯಲ್ಲಿ 2016-17ನೇ ಸಾಲಿನ ನಬಾರ್ಡ ಆರ್‍ಐಡಿಎಫ್ 21ರ ಅಡಿಯಲ್ಲಿ 9ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ 2 ಅಂಗನವಾಡಿ ಕಟ್ಟಡಗಳನ್ನು ಮಕ್ಕಳ ಮೂಲಕ ರಿಬ್ಬನ್ ಕಟ್ಟ ಮಾಡಿ ಲೋಕಾರ್ಪಣೆ ಮಾಡಿ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲೆ ನೋಡು ಎನ್ನುವಂತೆ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಶೀಕ್ಷಣ, ಶಿಸ್ತು-ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿಯೂ ಹೆಚ್ಚಿದೆ ಎಂದ ಘೋಟ್ನೇಕರ ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದಂತೆ ಕರೆ ನೀಡಿದರು.
ಇಂದಿರಾನಗರ ವಾರ್ಡನ ಪುರಸಭೆ ಸದಸ್ಯೆ ಸುವರ್ಣಾ ಎಸ್‍ಎಮ್ ಮಾತನಾಡಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮುಂದಾಳತ್ವದಲ್ಲಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗುತ್ತಿವೆ. ಇನ್ನೂ ಹಲವು ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳು ಭಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ತಕ್ಷಣ ಅವುಗಳಿಗೂ ಅನುದಾನ ಮಂಜೂರಿ ಮಾಡಿ ನೂತನ ಕಟ್ಟಡಗಳನ್ನು ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಅನಿಲ ಚವ್ವಾಣ, ಅಜರ ಬಸರಿಕಟ್ಟಿ, ರುದ್ರಪ್ಪಾ ಯಲ್ಲಪ್ಪಾ ಸಾಂಬ್ರೇಕರ, ನವೀನ ಕಾಟಕರ, ಮೋಹನ ಮೆಲಗಿ, ದ್ರೌಪದಿ ಅಗಸರ, ರೂಪಾ ಅನಿಲ ಗಿರಿ, ರಾಜೇಶ್ವರಿ ಹಿರೆಮಠÀ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ತಾಪಂ ಇಓ ಮಹೇಶ ಕುರಿಯವರ, ಸಿಡಿಪಿಓ ಶಾರದಾ ಮರಾಠೆ, ಸೇರಿದಂತೆ ಮೊದಲಾದವರು ಇದ್ದರು.
Leave a Comment