
ಶಿರಸಿ: ತಾಲೂಕಿನ ಬೆಳ್ಳನಕೆರಿ ಯಲ್ಲಿ ಇಂಡಿಯನ್ ದೇವ್ಲಪ್ಮೆಂಟ್ ಪಾರ್ಮೇಶನ್ ಇದರ ಉತ್ತರ ಕನ್ನಡ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನಡೆಯಿತು.
ಸಮಾರಂಭದಲ್ಲಿ ಇಟಲಿ ದೇಶದ ಪ್ರಖ್ಯಾತ ಸಮಾಜಸೇವಕಿ ಮೇರಿಯ ಯೆಂಗೆಲಾ ಕಚೇರಿಯ ನೂತನ ಕಟ್ಟಡ ವನ್ನು ಲೋಕಾರ್ಪಣೆ ಮಾಡಿದರು. ಲೋಯೊಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತ ರವರನ್ನು ಸನ್ಮಾನಿಸಲಾಯಿತು.

Leave a Comment