ಹಳಿಯಾಳ:- ಪಾರ್ಟಿ, ಮಧ್ಯ ಸೇವನೆ, ಮೋಜು-ಮಸ್ತಿ, ಡಾನ್ಸ್ ಹೀಗೆ ಲಕ್ಷಾಂತರ ಜನರು 2019 ಹೊಸ ವರ್ಷವನ್ನು ಸ್ವಾಗತಿಸಿದರೇ, ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ತಾಲೂಕಿಲ್ಲಿಯ ಬಸ್ ತಂಗುದಾನಗಳನ್ನು ಶುಚಿಗೊಳಿಸುವುದರ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಸ್ವಾಗತಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ಪಟ್ಟಣದ ಉದ್ಯೊಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಐಟಿಐ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ವಿ.ಆರ್.ಡಿಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಹಾಗೂ ಕಾಲೇಜಿನ ಪ್ರಾಚಾರ್ಯ ದಿನೇಶ ನಾಯ್ಕ ಮಾರ್ಗದರ್ಶನದಲ್ಲಿ ರಾಷ್ಟ್ರಪೀತ ಮಹಾತ್ಮಾಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲು ಈ ಮಾದರಿ ಕಾರ್ಯ ಕೈಗೊಳ್ಳಲಾಗಿದೆ ಎಂದಿರುವ ಅವರುಗಳು ಈ ಸ್ವಚ್ಚತಾ ಕಾರ್ಯ ದಿ.15 ರ ವರೆಗೆ ಮುಂದುವರಿಯಲಿದೆ ಎಂದು ಪ್ರಕಾಶ ಪ್ರಭು ತಿಳಿಸಿದ್ದಾರೆ.
ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿರುವ ಸುಮಾರು 15ಕ್ಕೂ ಅಧಿಕ ಬಸ್ ತಂಗುದಾನಗಳನ್ನು ಸ್ವಚ್ಚಗೊಳಿಸುವ ಮೂಲಕ ಹೊಸ ವರ್ಷಾಚರಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಟ್ಟಣದಲ್ಲಿರುವ ಯಲ್ಲಾಪುರ ನಾಕೆ, ರುಡಸೆಟ್, ಮೀನು ಮಾರುಕಟ್ಟೆ ಸಮೀಪ, ಸರ್ಕಾರಿ ಆಸ್ಪತ್ರೆ, ತೆಗನಳ್ಳಿ, ಹವಗಿ, ಹುನ್ಸವಾಡ ಗ್ರಾಮಗಳು ಸೇರಿದಂತೆ ಸುಮಾರು 15ಕ್ಕೂ ಅಧಿಕ ಬಸ್ ತಂಗುದಾನಗಳಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡು ಮಾದರಿ ಕಾರ್ಯ ಮಾಡಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
Leave a Comment