
ಇಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ ಟ್ರಸ್ಟ್(ರಿ.) ಗೋಕರ್ಣದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶಾಲೆಯ 15ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಹಾಗೂ ಪಾಲಕರ ದಿನಾಚರಣೆಯು ದಿನಾಂಕ 17/01/2019 ಮತ್ತು 18/01/2019 ರಂದು ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಗಿರೀಶ ಕುಚನಾಡ ಹಾಗೂ ಉದ್ಘಾಟಕರಾಗಿ ಸ್ಥಳಿಯ ಉದ್ಯಮಿಗಳಾದ ಸಿದ್ದಾರ್ಥ ಗಣಪತಿ ನಾಯಕ ಇವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ ವಹಿಸಲಿದ್ದು, ಮೆನೆಜಿಂಗ್ ಟ್ರಸ್ಟಿಗಳಾದ ಡಾ. ಎಮ್.ಡಿ ನಾಯ್ಕ ಇವರು ಉಪಸ್ಥತರಿರುವರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ
ಪಾರಿತೋಷಕ ವಿತರಣೆ,
ಹಾಗೂ ಶೈಕ್ಷಣಿಕವಾಗಿ ಮೇಲ್ಪಂಕ್ತಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ 2 ದಿನ ಜರುಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಆಗಮಿಸಬೇಕಾಗಿ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಪ್ರೀತಿ,ಆದರದಿಂದ ಆಮಂತ್ರಿಸಿರುತ್ತಾರೆ.

Leave a Comment