ಹಳಿಯಾಳ:- ಇತ್ತಿಚೇಗೆ ಸಿದ್ದಾಪೂರದಲ್ಲಿ ನಡೆದ ಪ್ರತಿಭಾವಂತ ಕಬ್ಬಡ್ಡಿ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟುವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ನೆರವಾಗುವ ಭರವಸೆ ನೀಡಿದ್ದಾರೆ.
ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳಿಯಾಳ ತಾಲೂಕಿನ ಅಡಿಕೆ ಹೊಸುರು ಗ್ರಾಮದ ಪ್ರತಿಭಾವಂತ ಉದಯೋನ್ಮೂಖ ಕಬ್ಬಡ್ಡಿ ಪಟು ಬಾಗು ಬಾಬು ಎಡಗೆ ತೀರಾ ಬಡ ಕುಟುಂಬದವರಾಗಿದ್ದು ಇತನ ಶಸ್ತ್ರಚಿಕಿತ್ಸೆಗಾಗಿ ಲಕ್ಷಾಂತರ ರೂ. ವೆಚ್ಚ ತಗುಲಲಿದ್ದು ಸಹಾಯ ಮಾಡುವಂತೆ ಪಾಲಕರು, ಕ್ರೀಡಾಭಿಮಾನಿಗಳು ಹಾಗೂ ಗೌಳಿ ಸಮುದಾಯದವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದರು.
ವಿಷಯ ತಿಳಿದ ಕಂದಾಯ ಸಚಿವ ದೇಶಪಾಂಡೆ ಅವರು ಆಸ್ಪತ್ರೆಗೆ ತೆರಳಿ ಬಾಗುವಿನ ಆರೋಗ್ಯ ವಿಚಾರಿಸಿದರು ಹಾಗೂ ಆತನ ಪಾಲಕರಿಗೆ ಸಾಂತ್ವನ ಹೇಳಿ ಧೈರ್ಯದಿಂದಿರುವಂತೆ ಹೇಳಿದ ಅವರು ಬಾಗುವಿನ ಆರೋಗ್ಯದ ಕುರಿತು ತಜ್ಞ ವೈದ್ಯರೊಂದಿಗೆ ಚರ್ಚಿಸಿ ಉತ್ತಮ ಚಿಕಿತ್ಸೆ ನೀಡುವಂತೆ ಹಾಗೂ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಭರಿಸುವುದಾಗಿ ಸಚಿವರು ಆಸ್ಪತ್ರೆಯವರಿಗೆ ತಿಳಿಸಿದ್ದಾರೆ ಎಂದು ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ತಿಳಿಸಿದ್ದಾರೆ.
Leave a Comment