ಹಳಿಯಾಳ:- ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣಕ್ಕೂ ಭೆಟಿ ನೀಡಿದ್ದರು ಎನ್ನುವುದು ಈಗ ಇತಿಹಾಸವೇ ಸರಿ.
ಪ್ರಸ್ತುತ ಬಸವ ಕೇಂದ್ರದ ಅಧ್ಯಕ್ಷ ಹಾಗೂ ಅಂಗಡಿ ಗ್ಯಾಸ್ ಸೇವಾ ಸಂಸ್ಥೆಯ ಮಾಲಿಕ ಚಂದ್ರಕಾಂತ ಅಂಗಡಿ ಅವರ ನಿವಾಸಕ್ಕೆ 1994ರಲ್ಲಿ ಶ್ರೀಗಳು ಆಗಮಿಸಿದ್ದರು. ಅಂದು ಅವರನ್ನು ಪಟ್ಟಣದ ಹಲವು ಗಣ್ಯರು ಭೆಟಿ ನೀಡಿ ಆಶೀರ್ವಾದ ಪಡೆದಿದ್ದರು ಎಂದು ಅಂಗಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
1994ರಲ್ಲಿ ಜಿಲ್ಲೆಯ ಜೋಯಿಡಾದ ಪುಣ್ಯಕ್ಷೇತ್ರ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ದೇವರ ದರ್ಶನ ಪಡೆದು. ಅಲ್ಲಿಂದ ನೆರವಾಗಿ ಸಾಯಂಕಾಲದ ಹೊತ್ತಿಗೆ ಹಳಿಯಾಳ ಪಟ್ಟಣದ ಧಾರವಾಡ ರಸ್ತೆಯ ಎಪಿಎಮ್‍ಸಿ ಪಕ್ಕದಲ್ಲಿರುವ ಅಂಗಡಿ ಅವರ ಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಬಳಿಕ ಶ್ರೀಗಳು ಇಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೆರಿಸಿಕೊಂಡು ಬಂದ ಭಕ್ತರಿಗೆ ದರ್ಶನ ನೀಡಿ ಬಳಿಕ ಧಾರವಾಡ-ಹುಬ್ಬಳ್ಳಿ ಮಾರ್ಗವಾಗಿ ತುಮಕೂರಿಗೆ ತೆರಳಿದ್ದರು.
ಚಂದ್ರಕಾಂತ ಅವರ ಸಂಬಂಧಿ ನಿವೃತ್ತ ಎಸ್ಪಿಯಾಗಿದ್ದ ಸಿದ್ದಗಂಗಾ ಮಠದ ಆಡಳಿತಾಧಿಕಾರಿಯಾಗಿದ್ದ ದಿ.ಎಸ್‍ಎಸ್ ಹಸಬಿ ಅವರು ಅಂದು ಶ್ರೀಗಳು ಹಳಿಯಾಳಕ್ಕೆ ಭೇಟಿ ನೀಡಲು ಕಾರಣ ಕರ್ತರಾಗಿದ್ದರು. ಅವರು ಕೂಡ ಕಳೆದ ವರ್ಷ ಲಿಂಗೈಕ್ಯರಾಗಿದ್ದಾರೆಂದು ತಿಳಿಸಿದ ಅಂಗಡಿ ಅಂದು ಶ್ರೀಗಳ ದರ್ಶನ ಪಡೆದ ಅನೇಕರು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿರುವುದು ನಿಜಕ್ಕೂ ಅಂದು ದೇವರೇ ನಮ್ಮ ಮನೆಗೆ ಆಗಮಿಸದಂತೆ ಭಾಸವಾಗಿತ್ತು ಎಂದು ತಮ್ಮ ಅನುಭವ ಮಾಧ್ಯಮದವರೊಂದಿಗೆ ಹಂಚಿಕೊಂಡರು.
ಅಂದು ಶ್ರೀಗಳನ್ನು ಭೇಟಿ ಮಾಡಿದ್ದ ಪುಟ್ಟ ಬಾಲಕಿಯಾಗಿದ್ದ ಸವಿತಾ ಹೂಗಾರ ಇಂದು ಗುಲ್ಬರ್ಗಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದಾರೆ. ಉಲ್ಲಾಸ ಅಂಗಡಿ ಲಂಡನ್‍ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದರು. ಅಂದು ಶ್ರೀಗಳು ಭೇಟಿ ನೀಡಿದ ಸಂದರ್ಭದಲ್ಲಿ ಇಂದಿನ ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಶೀವುದೇವ ದೇಸಾಯಿಸ್ವಾಮಿ, ಖ್ಯಾತ ವಕೀಲರಾದ ಮಹಾದೇವಿ, ಪ್ರಕಾಶ ಅಂಗಡಿ ಇನ್ನಿತರರು ಇದ್ದರು ಎಂದು ಹೇಳಿದರು.
Oh super