
ಬೆಂಗಳೂರು :- ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ ಬೆಳಗ್ಗೆ ರಾಜಧಾನಿ ದೆಹಲಿಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದರು.
ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್, 1930 ಜೂನ್ 3 ರಂದು ಜನಿಸಿದ್ದರು.
ಮಾಜಿ ಪ್ರಧಾನಿ ಅಜಾತಶತ್ರು ದಿ.
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಅವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದರು.
ಆಪರೇಷನ್ ವಿಜಯ ಮತ್ತು ಅಣುಬಾಂಬ್ ನ ಯಶಸ್ವಿ ಪರೀಕ್ಷೆಯ ಮೂಲಕ ವಿಶ್ವದಲ್ಲೇ ಭಾರತ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದ
ಜಾರ್ಜ್ ಫರ್ನಾಂಡೀಸ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಪಿಜೆ ಅಬ್ದುಲ್ಕಲಾಮ್ ತಂಡ ದೇಶಕ್ಕಾಗಿ ಮಾಡಿದ ಅಗಾಧ ಸೇವೆಯನ್ನು ಜನಾ ಸ್ಮರಿಸುತ್ತಿದ್ದಾರೆ.
ಅಪರೂಪದ ತ್ರಿವಳಿ ರತ್ನಗಳು ಅಮರ್ – ಅಕ್ಬರ್ – ಅಂಥೋನಿ
ಅಂದರೇ ಅಟಲ್- ಅಬ್ದುಲ್ – ಜಾರ್ಜ್ ..೩ ಅಮೂಲ್ಯ
ಮುತ್ತುಗಳನ್ನು ದೇಶ ಕಳೆದುಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ
ಸಂದೇಶಗಳು ಹರಿದಾಡುತ್ತಿವೆ.


Leave a Comment