ಹಳಿಯಾಳ:- ಕೌಶಲ್ಯಾಭಿವೃದ್ದಿ ಕಾರ್ಯಕ್ರಮ ಭವಿಷ್ಯದ ಚಿಂತನೆಗಳನ್ನು ವಿಕಾಸಗೊಳಿಸುವ ಕಾರ್ಯಕ್ರಮವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವಂತಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಯುವ ಸಮುದಾಯಕ್ಕೆ ಕರೆ ನೀಡಿದರು.
ಪಟ್ಟಣದ ಪಂಡಿತ ದಿನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯಾಭಿವೃದ್ದಿ ಕೇಂದ್ರ, ಆರ್.ವೈಇ ಸ್ಕೀಲ್ ಸೆಂಟರ್‍ಗೆ ಭೇಟಿ ನೀಡಿ ಕೇಂದ್ರವನ್ನು ವಿಕ್ಷೀಸಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಕಂಪ್ಯೂಟರ್ ಲ್ಯಾಬ್ ಉಧ್ಗಾಟಿಸಿ ಮಾತನಾಡಿದರು.
ತಂದೆ ತಾಯಿಗಳ ಒತ್ತಡಕ್ಕೆ ಸಿಲುಕಿ ಅವರ ಇಚ್ಚೆಯ ವಿಚಾರಗಳಲ್ಲಿ ಮುಂದುವರೆಯುವುದಕ್ಕಿಂತ, ತಮ್ಮ ಇಚ್ಚೆಯಂತೆ ಬದುಕು ರೂಪಿಸಿಕೊಳ್ಳುವುದು ಉತ್ತಮವೆಂದು ಸಚಿವರು. ಇಂದಿನ ಈ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಯುವಕ-ಯುವತಿಯರು ತಮ್ಮಲ್ಲಿರುವ ಕೌಶಲ್ಯಗಳನ್ನು ಗುರುತಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸುವಲ್ಲಿ ಗುರಿಹೊಂದಿ ಪರಿಶ್ರಮ ಪಡಬೇಕೆಂದರು.
ಸಂಸ್ಥೆಯ ನಿರ್ದೇಶಕ ನಾರಾಯಣ ಟೋಸುರ ಮಾತನಾಡಿ ಕಳೆದ 3 ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಸುಮಾರು 320 ಹಾಗೂ ಗದಗ, ಧಾರವಾಡ, ಹುಬ್ಬಳ್ಳಿ, ತುಮಕುರ, ಹಾಸನ, ಹಾವೇರಿ, ರಾಯಚೂರ ಇತರ ಭಾಗದಿಂದ ಸುಮಾರು 380 ನಿರುದ್ಯೋಗಿ ಯುವಕ ಯುವತಿಯರಿಗೆ ಈ ಕೌಶಲ್ಯಾಭಿವೃದ್ದಿ ಸಂಸ್ಥೆಯಲ್ಲಿ ತರಬೇತಿ ನೀಡಿ ಈಗಾಗಲೇ ಅವರು ಹಲವು ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆಂದು ವಿವರಿಸಿದರು.
ಇನ್ನೂ ಸಂಸ್ಥೆಯು ಕೈಗಾರಿಕೆ ತರಬೇತಿ, ವಿದೇಶಿ ಭಾಷೆಗಳ ಕಲಿಕೆ ತರಬೇತಿ ಸೇರಿದಂತೆ ಹಲವು ನೂತನ ತರತೇತಿ ನೀಡುವ ಮೂಲಕ ಯುವ ಸಮುದಾಯಕ್ಕೆ ಕೊಡುಗೆ ನೀಡಲು ಹಳಿಯಾಳದ ಪಂಡಿತ ದಿನದಯಾಳ್ ಉಪಾಧ್ಯಾಯ ಕೌಶಲ್ಯ ಅಭಿವೃದ್ದಿ ಕೇಂದ್ರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಸಿಪಿಐ ಲೋಕಾಪುರ, ಆರ್.ಎಸ್.ಎಸ್.ಬ್ಯಾಂಕಿನ ಶಿವಪುತ್ರಪ್ಪಾ ನುಚ್ಚಂಬ್ಲಿ, ಅನಂತ ಘೋಟ್ನೇಕರ, ಸಂಸ್ಥೆಯ ರಾಘವೇಂದ್ರ ಸಾಂಬ್ರೆಕರ, ಸರಿತಾ ಟೋಸುರ, ಜಯಶ್ರೀ, ಅಶ್ವಿನಿ, ಸುರೇಶ, ಅರ್ಚನಾ ಮೊದಲಾದವರು ಇದ್ದರು.
Excellent coverage Yogiraj, keep up the good work