• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯ ವಿ‌ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಹಬ್ಬ ಕಾರ್ಯಕ್ರಮದ ಮೂಲಕ ಮಾಡುತ್ತಿದೆ‌ – ರಾಧಾಬಾಯಿ ದೇಶಪಾಂಡೆ.

February 9, 2019 by Yogaraj SK Leave a Comment

Haliyal habba 2019 started inauguration

ಹಳಿಯಾಳ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಫೆ.9 ಮತ್ತು 10 ರಂದು 2 ದಿನಗಳ ಕಾಲ ಹಳಿಯಾಳ ಪಟ್ಟಣದಲ್ಲಿ ನಡೆಯಲಿರುವ ‘ಹಳಿಯಾಳ ಹಬ್ಬ’ ಕಾರ್ಯಕ್ರಮಕ್ಕೆ ಫೆ.9 ಶನಿವಾರ ಟ್ರಸ್ಟ್‍ನ ಧರ್ಮದರ್ಶಿ ಹಾಗೂ ಸಚಿವ ದೇಶಪಾಂಡೆ ಅವರ ಪತ್ನಿ ರಾಧಾಬಾಯಿ ದೇಶಪಾಂಡೆ ಅವರು ಚಾಲನೆ ನೀಡಿದರು.
ಶನಿವಾರ ಬೆಳಿಗ್ಗೆ ಪಟ್ಟಣದ ತುಳಜಾಭವಾನಿ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಶೃದ್ದಾ ಕೇಂದ್ರಗಳಿಂದ 5 ಜ್ಯೋತಿಗಳನ್ನು ಹಿಡಿದು ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಯ ಮೂಲಕ ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣಕ್ಕೆ ಆಗಮಿಸಿ ಜ್ಯೋತಿ ಬೆಳಗಿಸುವ ಮೂಲಕ ಹಳಿಯಾಳ ಹಬ್ಬಕ್ಕೆ ಚಾಲನೆ ನೀಡಲಾಯಿತು.

Haliyal habba 2019 started inauguration
ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ :-
ಈ ಸಂದರ್ಭದಲ್ಲಿ ಮಾತನಾಡಿದ ರಾಧಾಬಾಯಿ ಅವರು ಹಳಿಯಾಳದಲ್ಲಿನ ಯುವಕ-ಯುವತಿಯರಲ್ಲಿಯ ಪ್ರತಿಭೆಗಳನ್ನು, ಕಲೆಗಳನ್ನು ಬೆಳಕಿಗೆ ತಂದು ಅವರಿಗೆ ವೇದಿಕೆ ಕಲ್ಪಿಸಿಕೊಡಲು ವಿ.ಆರ್.ಡಿಎಮ್ ಟ್ರಸ್ಟ್ ಪ್ರತಿವರ್ಷ ಹಳಿಯಾಳ ಹಬ್ಬವೆಂಬ ಸಾಂಸ್ಕøತೀಕ-ಕ್ರೀಡಾ ಚಟುವಟಿಕೆಗಳ ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಪುರಸಭೆ ಸದಸ್ಯರಾದ ಫಯಾಜ ಶೇಖ, ಅಜರ ಬಸರಿಕಟ್ಟಿ, ಮಾಜಿ ಸದಸ್ಯರಾದ ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ- ಸಂಸ್ಥೆಯ ಸಿಬ್ಬಂದಿಗಳು ಇದ್ದರು.

ವಿವಿಧ ಕಾರ್ಯಕ್ರಮಗಳು :- ಕಾರ್ಯಕ್ರಮಕ್ಕೆ ಚಾಲನೆ ದೊರೆತ ಬಳಿಕ ಶಿವಾಜಿ ಮೈದಾನದಲ್ಲಿ ಹಿರಿಯ ನಾಗರಿಕರಿಗಾಗಿ ವಿವಿಧ ಸ್ಪರ್ಧೆಗಳು ಬಳಿಕ ವಿವಿಧ ಸಮಯಗಳಲ್ಲಿ ಮಿಲಾಗ್ರಿಸ್ ಸಮುದಾಯ ಭವನದಲ್ಲಿ ಮಹಿಳೆಯರಿಗಾಗಿ ಹೇರ್ ಸ್ಟೈಲ್ ಸ್ಪರ್ದೆ, ಕಾರ್ಮೇಲ್ ಶಾಲೆಯಲ್ಲಿ ಪೂಜಾ ಥಾಲಿ ಸ್ಪರ್ದೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ದೇಶಪಾಂಡೆ ಐಟಿಐ ಕಾಲೇಜಿನಲ್ಲಿ ರಸಪ್ರಶ್ನೆ ಸ್ಪರ್ದೆ, ಮಿಲಾಗ್ರಿಸ್ ಭವನದಲ್ಲಿ ಮಧ್ಯಾಹ್ನ ಮಹಿಳೆಯರಿಗಾಗಿ ಮೆಹಂದಿ ಹಚ್ಚುವ ಸ್ಪರ್ಧೆ ಹಾಗೂ ಇದೆ ಸಮಯದಲ್ಲಿ ಕಾರ್ಮೇಲ್ ಶಾಲೆಯಲ್ಲಿ ತರಕಾರಿ ಕೆತ್ತನೆ ಸ್ಪರ್ದೆಗಳು ನಡೆದು ಪಟ್ಟಣದ ನೂರಾರು ಮಹಿಳೆಯರು, ಯುವತಿಯರು ಸ್ಪರ್ದೆಗಳಲ್ಲಿ ಪಾಲ್ಗೊಂಡು ಸಂತಸಪಟ್ಟರು.

watermarked IMG 20190209 WA0181
ದಿ.10 ರಂದು ಏನೆಲ್ಲಾ ನಡೆಯುತ್ತೇ :–
ದಿ.10ರಂದು ಶೀವಾಜಿ ಕ್ರೀಡಾಂಗಣದಲ್ಲಿಯ ಭವ್ಯ ವೇದಿಕೆಯಲ್ಲಿ ಸಮಾರೋಪ ಸಮಾರಂಭವನ್ನು ಭಾರತೀಯ ಸೇನೆಯ ಮಾಜಿ ಸೈನಿಕ, ಕಾರ್ಗಿಲ್ ಹಿರೋ ಕ್ಯಾಪ್ಟನ್ ನವೀನ್ ನಾಗಪ್ಪಾ ಉಧ್ಘಾಟಿಸಲಿದ್ದು. ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.
ದಿ.10 ಭಾನುವಾರದಂದು ಸಿಲ್ಲಿ ಲಲ್ಲಿ ಹಾಗೂ ಪಾಪಾ ಪಾಂಡು ಧಾರವಾಹಿಗಳ ಕಿರುತೆರೆ/ಬೆಳ್ಳಿ ತೆರೆ ನಟರಾದ ವಿಕ್ರಂ ಸೂರಿ ಹಾಗೂ ನಮಿತಾ ರಾವ್ ತಂಡದಿಂದ ನೃತ್ಯ ರೂಪಕ, ಜ್ಯೂನಿಯರ್ ಮೈಕಲ್ ಜ್ಯಾಕ್ಸ್‍ನ್ ಖ್ಯಾತಿಯ ರಜತ ನಾಯ್ಕನಿಂದ ವಿಶಿಷ್ಠ ನೃತ್ಯ ಪ್ರದರ್ಶನ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಬೆಳಗಾವಿ ಎಕ್ಸಪ್ರೇಸ್ ತಂಡದಿಂದ ಮನಮೋಹಕ ನೃತ್ಯ ಪ್ರದರ್ಶನ, ಬಾಲಿವುಡ್‍ನ ಖ್ಯಾತ ಉದಯೋನ್ಮುಖ ಗಾಯಕ ಕಿಂಜಲ್ ಚಟರ್ಜಿ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್‍ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ತಿಳಿಸಿದ್ದಾರೆ.

watermarked IMG 20190209 WA0180 watermarked 9 hly 5 watermarked 9 hly 4

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 5 Jyothi, an unprecedented program of cultural activities like festival, Haliya Festival 'program, Indian Army Army, Kargil Hero Captain, Naveen Nagappa, Nimita Rao, Papa Pandu, platform for talents, radhabai deshpande, Silver Screen Actors, Television Television, the stage for the talents to come out, through the Hallya festival program, Vikram Suri, VR Deshpande Morial Trust, youth talent

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...