
ಹಳಿಯಾಳ :- ಕಾಶ್ಮೀರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಖಂಡಿಸಿ ಹಳಿಯಾಳದ ಎಲ್ಲ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಮುದಾಯದವರು, ಸಾರ್ವಜನಿಕರು ಹಾಗೂ ವಿವಿಧ ಪಕ್ಷದವರು ಪಕ್ಷಾತೀತವಾಗಿ
ಸಮಸ್ತ ದೇಶಭಕ್ತರಿಂದ ಇಂದು ಭಾನುವಾರು ಕರೆ ನೀಡಿದ ಹಳಿಯಾಳ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಸಂಪೂರ್ಣ ವ್ಯಾಪಾರ- ವಹಿವಾಟು, ವಾಹನ ಸಂಚಾರ ಸ್ತಬ್ದವಾಗಿದೆ.
ಪಾಕಿಸ್ತಾನದ ಹೇಡಿ ಕೃತ್ಯವನ್ನು ಖಂಡಿಸಲು, ಕೇಂದ್ರ ಸರ್ಕಾರಕ್ಕೆ
ಪಾಕಿಸ್ತಾನದ ಮೇಲೆ ಕಠೋರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಹಾಗೂ
ಹುತಾತ್ಮರಾದ ವೀರ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು ಪಕ್ಷಾತೀತವಾಗಿ ನಡೆಸುತ್ತಿರುವ
– ಪಂಜಿನ ಮೆರವಣಿಗೆ ಶೃದ್ದಾಂಜಲಿ ಯಾತ್ರೆಯನ್ನು ನಡೆಸಲು ತೀರ್ಮಾನಿಸಲಾಗಿದೆ..
ಹಳಿಯಾಳದ ಇತಿಹಾಸದಲ್ಲಿಯೇ ರವಿವಾರ ವಾರದ ಸಂತೆಯ ಸಮಯದಲ್ಲಿ ಹಳಿಯಾಳ ಸಂಪೂರ್ಣ ಬಂದ್ ಆಗಿರುವುದು ಇತಿಹಾಸವಾಗಿದೆ.



Leave a Comment