• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉತ್ತರ ಕನ್ನಡ ಜಿಲ್ಲೆ ಕಾಂಗ್ರೇಸ್ ಮುಕ್ತವಾಗಿದೆ- ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ – ಸಂಸದ ಅನಂತಕುಮಾರ ಹೆಗಡೆ.

March 16, 2019 by Yogaraj SK Leave a Comment

Aanatkumar hegde BJP karyakartara sabhe

ಹಳಿಯಾಳ:- ದೇಶದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ನೆಲೆ ಇಲ್ಲವಾಗಿದೆ. ಎಲ್ಲೂ ಸಲ್ಲದ ಕೆಲವರ ಜೊತೆ ರಾಹುಲ್ ಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ ಬಿಟ್ಟರೇ ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.
ಪಟ್ಟಣದ ಚೌಹಾನ್ ಪ್ಲಾಟ್, ದೇಸಾಯಿ ಗಲ್ಲಿಯಲ್ಲಿ ಪ್ರಚಾರ ಸಭೆಯ ಬಳಿಕ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ದೇವೆಗೌಡರು ತೊಡಿರುವ ಖೇಡ್ಡಾಕ್ಕು ಕಾಂಗ್ರೇಸ್ ಪಕ್ಷ ಬಿದ್ದಾಗಿದ್ದು ಕಾಂಗ್ರೇಸ್ ಹೆಸರಿಲ್ಲದಂತಾಗುವುದು ಖಚಿತ ಎಂದರು.
ಉತ್ತರ ಕನ್ನಡ ಜಿಲ್ಲೆ ಕಾಂಗ್ರೇಸ್ ಮುಕ್ತವಾಗಿದೆ. ಕಾಂಗ್ರೇಸ್ ಮುಕ್ತ ಚುನಾವಣೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿದೆ. ಕಾಂಗ್ರೇಸ್ ಪಕ್ಷದವರಿಗೆ ಅವರ ಎದುರಿಗೆ ಮತದಾನ ಮಾಡಲು ಪಕ್ಷದ ಚಿಹ್ನೆಯು ಇಲ್ಲವಾಗಿದ್ದು ಭಸ್ಮಾಸುರನ ಕೈ ಮಾಯವಾಗಿದೆ ಎಂದು ಲೇವಡಿ ಮಾಡಿದ ಹೆಗಡೆ ಸಚಿವ ದೇಶಪಾಂಡೆ ಅವರು ಕೂಡ ಬಿಜೆಪಿಗೆ ಮತ ಹಾಕಲಿದ್ದಾರೆಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಬಾರಿಯದ್ದು ಸುಲಭ ಚುನಾವಣೆಯಲ್ಲ ಜೆಡಿಎಸ್ ಅಭ್ಯರ್ಥಿಗೆ ಒಂದು ಮತ ಬಿಳದಂತೆ ಕಾರ್ಯಕರ್ತರು ಶ್ರಮವಹಿಸಿ ಬಿಜೆಪಿ ಗೇಲುವು ಒನ್ ವೇ ಆಗುವಂತೆ ಮಾಡಬೇಕೆಂದು ಕರೆ ನೀಡಿದರು. ಕಾರ್ಯಕರ್ತರೇ ನಮ್ಮ ನಾಯಕರು ಎಂದ ಹೆಗಡೆ ಜನರು ಮುಂದೆ ಹೊಗಿದ್ದಾರೆ ಅವರಿಗಿಂತ ಕಾರ್ಯಕರ್ತರು ಮುಂದೆ ಇರಬೇಕೆಂದರು.
ಕೇಂದ್ರ ಸರ್ಕಾರ ನೀಡಿರುವ ಹಲವಾರು ಯೋಜನೆಗಳ ಬಗ್ಗೆ ಮಾತನಾಡಿದ ಅವರು ಹಿಂದಿನ ಕಾಂಗ್ರೇಸ್ ಸರ್ಕಾರಗಳಲ್ಲಿ ನಡೆದ ಹಾಗೆ ಮೋದಿಯವರ ಆಡಳಿತದಲ್ಲಿ ಎಲ್ಲಿಯಾದರೂ ಕಮಿಷನ್ ವ್ಯವಹಾರಗಳು ನಡೆದಿವೇ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ನಾನು ತಿನ್ನುವುದಿಲ್ಲ ಬೆರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂಬ ಮೊದಿಜಿಯವರ ದಕ್ಷ, ಪ್ರಾಮಾಣಿಕ ಆಡಳಿತ ದೇಶವನ್ನು ಕ್ಷಿಪ್ರ ಅಭಿವೃದ್ದಿ ಪಥದಲ್ಲಿ ಕೊಂಡೊಯ್ದಿದೆ ಎಂದರು. ನಾವು ಸತ್ಯ ಹೆಳ್ತೆವೆ, ರಾಜಿ ಆಗಲ್ಲಾ, ಚುನಾವಣಾ ಗಿಮಿಕ್ ಮಾಡಲ್ಲ- ಹೇಳಿದ್ದನ್ನು ಮಾಡಿ ತೊರಿಸುತ್ತೇವೆ ಹಾಗೂ ಗುರಿ ಇಟ್ಟುಕೊಂಡು ನಡೆಯುತ್ತೇವೆಂದರು.
ಕ್ರಾಂತಿಕಾರಿಗಳು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ ವಿನಃ ಕಾಂಗ್ರೇಸ್ ಪಕ್ಷವಲ್ಲ. ದೇಶದ ವಿಭಜನೆಗೆ ಹಾಗೂ ಪಾಕಿಸ್ತಾನ ದೇಶ ನಿರ್ಮಾಣಕ್ಕೆ ಕಾಂಗ್ರೇಸ್ ಕಾರಣ ಎಂದು ಆರೋಪಿಸಿದರು.
2014 ಚುನಾವಣೆ ಬಳಿಕ ಮೊದಿಜಿಯವರು ದೇಶದ ಅಂತರಾತ್ಮ ಮತ್ತು ಆಸ್ಮಿತೆಯನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಿದ್ದು ಇಂದು ದೇಶದ ಆತ್ಮವಿಶ್ವಾಸ ಜಾಸ್ತಿಯಾಗಿದೆ. ಈ ಮೊದಲು ಜಾತಿ-ವ್ಯಕ್ತಿ-ಪಕ್ಷ-ಹಣ ಈ 4 ಅಂಶಗಳನ್ನು ತೂಗಿ ಮತದಾರ ಮತ ಚಲಾಯಿಸುತ್ತಿದ್ದ ಆದರೇ ಈಗ ದೇಶದ ಚಿತ್ರಣ ಬದಲಾಗಿದೆ. ದೇಶಕ್ಕಾಗಿ ಇಂದು ಜನ ಮತ ಚಲಾಯಿಸುತ್ತಿದ್ದಾರೆಂದರು.
ಮುಂದೆ ದೇಶದಲ್ಲಿ ಹಿಂದೂತ್ವದ್ದೆ ರಾಜಕಾರಣ ನಡೆಯಬೇಕು. ಈ ಮಾತನ್ನು ಯಾವ ಸಂಕೋಚ ಇಲ್ಲದೇ ಹೇಳುತ್ತಿದ್ದೇನೆ. ಸ್ಪಷ್ಟ ಅರಿವು ಹಾಗೂ ಗುರಿ ಹೊಂದಿ ನಾವು ಸುಭದ್ರ ವಿಶ್ವ ಭಾರತಕ್ಕಾಗಿ ಶ್ರಮಿಸುತ್ತಿದ್ದೇವೆಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕಾಂಗ್ರೇಸ್ ಪಕ್ಷದವರು ಜಾತ್ಯಾತಿತ ಎನ್ನುತ್ತಲೇ ಜಾತಿ ಜಾತಿಗಳ, ಧರ್ಮ ಧರ್ಮಗಳ ಮಧ್ಯೆ ಒಡೆದು ಆಳುತ್ತ ದೇಶವನ್ನು 70 ವರ್ಷ ಆಳಿಯು ಅಭಿವೃದ್ದಿ ಪಡಿಸಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ ಅವರು ಚುನಾವಣೆಯಲ್ಲಿ ಮತ ಕೇಳುವ ಯಾವ ನೈತಿಕತೆಯನ್ನು ಕಾಂಗ್ರೇಸ್ ಹೊಂದಿಲ್ಲ ಎಂದರು.
ದೇಶದಲ್ಲಿ ಸೈನ್ಯಕ್ಕೆ ಶಕ್ತಿ ತುಂಬು ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ನಮ್ಮ ಸುರಕ್ಷತೆ, ಭದ್ರತೆ-ದೇಶದ ಭದ್ರತೆಗಾಗಿ ಮತ ಚಲಾಯಿಸಬೇಕಿದ ಎಂದ ಸುನೀಲ್ ಅಬ್ ಕಿ ಬಾರ್ ಫಿರ್ ಮೋದಿ ಸರ್ಕಾರ ಹಾಗೂ ಮತ್ತೊಮ್ಮೆ ಮೊದಿ, ಮತ್ತೊಮ್ಮೆ ಅನಂತಕುಮಾರ ಹೆಗಡೆ ಘೋಷಣೆಯೊಂದಿಗೆ ಚುನಾವಣೆ ಎದುರಿಸೊಣ ಎಂದರು.
ವೇದಿಕೆಯ ಮೇಲೆ ಬಿಜೆಪಿ ಮುಖಂಡರಾದ ಶಿವಾಜಿ ನರಸಾನಿ, ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳ್, ಜಯಲಕ್ಷ್ಮೀ ಚವ್ವಾಣ ಮೊದಲಾದವರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Aanatkumar hegde BJP karyakartara sabhe, cauhān plāṭ, Chauhan Platt, Congress counting its last days, Congress does not settle for Congress, Congress is not in the gimmicky, Cunāvaṇā gimik māḍalla, dēśadalli kāṅgrēs pakṣakke nele illa, Desai Gully, dēsāyi galliyalli pracāra sabhe, hāsya caṭāki, humorous crackdown, kāṅgrēs tanna koneya dinagaḷannu eṇisuttide, MP Ananthakumar Hegde, rāhul gāndhi kāṇisikoḷḷuttiddāre, Rahul Gandhi's presence, sansada anantakumāra hegaḍe, Uttara Kannada District Congress is open, uttara kannaḍa jille kāṅgrēs muktavāgide, ಉತ್ತರ ಕನ್ನಡ ಜಿಲ್ಲೆ ಕಾಂಗ್ರೇಸ್ ಮುಕ್ತವಾಗಿದೆ, ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ, ಚುನಾವಣಾ ಗಿಮಿಕ್ ಮಾಡಲ್ಲ, ಚೌಹಾನ್ ಪ್ಲಾಟ್, ದೇಶದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ನೆಲೆ ಇಲ್ಲ, ದೇಸಾಯಿ ಗಲ್ಲಿಯಲ್ಲಿ ಪ್ರಚಾರ ಸಭೆ, ರಾಹುಲ್ ಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ, ಸಂಸದ ಅನಂತಕುಮಾರ ಹೆಗಡೆ, ಹಾಸ್ಯ ಚಟಾಕಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...