ಹಳಿಯಾಳ:- ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ಘೋಷಿಸದೆ ಇರುವುದರಿಂದ ಉತ್ತರ ಕನ್ನಡ ಜಿಲ್ಲೆ(ಕೆನರಾ) ಲೋಕಸಭಾ ಕ್ಷೇತ್ರದ ಚುನಾವಣೆಯ ಕಾವು ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಕಾಣದೆ ಮಂಕಾಗಿದ್ದ ಕಾಂಗ್ರೇಸ್ಸಿಗರು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಗುಂಪಿನ ಎಂಟ್ರಿಯಿಂದ ಪ್ರಚಾರದಲ್ಲಿ ತೊಡಗಿದ್ದು ಮೈತ್ರಿ ಅಭ್ಯರ್ಥಿಗೆ ಮತಗಳಿಕೆಯಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್‍ನ ಪ್ರಭಾವ ಹೆಚ್ಚಿದ್ದು ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಜಿಲ್ಲೆಯಾದ್ಯಂತ ಕಾಂಗ್ರೇಸ್ಸಿಗರು ಪಟ್ಟು ಹಿಡಿದಿದ್ದರು ಅಲ್ಲದೇ ಕಾಂಗ್ರೇಸ್‍ನ ಹಿರಿಯ ಮುಖಂಡ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಕೂಡ ಕಾಂಗ್ರೇಸ್‍ಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ ಮೇಲೆ ಒತ್ತಡ ಹೇರಿದ್ದರು. ಆದರೂ ಕೊನೆ ಗಳಿಗೆಯಲ್ಲಿ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ ಹೆಸರು ಫೈನಲ್ ಆದ ಮೇಲೆ ತೀವೃವಾಗಿ ಮುನಿಸಿಕೊಂಡಿದ್ದ ಅವರು ಪ್ರಚಾರಕ್ಕೆ ತೆರಳದೆ ತಟಸ್ಥವಾಗಿದ್ದರು.
-: ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಧುಮುಕಿದ ಘೋಟ್ನೇಕರ :-
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಕಾಂಗ್ರೇಸ್-ಜೆಡಿಎಸ್ ಹೈಕಮಾಂಡ ಸಚಿವ ಆರ್.ವಿ.ದೇಶಪಾಂಡೆ ಅವರ ಮೂಲಕ ಶಿರಸಿಯಲ್ಲಿ ಸಭೆ ನಡೆಸಿ ಮುನಿಸಿಕೊಂಡವರಿಗೆ ಸಮಾಧಾನ ಪಡಿಸಿ ಮೈತ್ರಿ ಧರ್ಮ ಪಾಲನೆ ಮಾಡುವಂತೆ ಮನವೊಲಿಸಿದಾಗ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರಮುಖರನ್ನೊಳಗೊಂಡು ಮೈತ್ರಿ ಅಭ್ಯರ್ಥಿ ಆನಂದ ಪರವಾಗಿ ಮತಬೆಟೆಗೆ ಧುಮುಕಿದರು.
ಬಿಡುವಿಲ್ಲದ ಪ್ರಚಾರ:-
ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಮರಾಠಾ ಸಮಾಜದ ಪ್ರಭಲ ನಾಯಕರಾಗಿರುವ ಅವರು ಅವರದೇ ಆದ ಬೆಂಬಲಿಗರನ್ನು ಹೊಂದಿದ್ದು ಗ್ರಾಮಾಂತರ ಭಾಗದಿಂದ ಹಿಡಿದು ಹಳಿಯಾಳ ಕ್ಷೇತ್ರ ಹೊರತು ಪಡಿಸಿ ಖಾನಾಪುರ-ಕಿತ್ತೂರ ಭಾಗದಲ್ಲಿಯೂ ಒಂದು ಸುತ್ತಿನ ಪ್ರಚಾರ ಕಾರ್ಯಕ್ಕೆ ತೆರಳಿ ಬಂದರು. ಅವರ ಮಗ ಹಳಿಯಾಳ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ(ಬಾಳು) ಘೋಟ್ನೇಕರ ಕೂಡ ತಮ್ಮ ಯುವ ಪಡೆಯೊಂದಿಗೆ ಅಸ್ನೋಟಿಕರ ಪರ ಮತಯಾಚನೆಯಲ್ಲಿ ತೊಡಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೆಕೆಂದು ಸಾಕಷ್ಟು ಪ್ರಚಾರವನ್ನು ನಡೆಸಿದ್ದಾರೆ.
-: ಘೋಟ್ನೇಕರ ಪ್ರಚಾರ ಆನಂದಗೆ ವರದಾನ:-
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿರುವ ಪರಿ ನೋಡಿದರೇ ಅವರು ಕೈಗೊಂಡಿರುವ ಪ್ರಚಾರ ಕಾರ್ಯವನ್ನು ಗಮನಿಸಿದರೇ ಬಿಜೆಪಿ ಅಭ್ಯರ್ಥಿಗೆ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ತೀವೃ ಸ್ಪರ್ದೆಯೊಡ್ಡಲಿದ್ದಾರೆ ಹಾಗೂ ಮತಗಳಿಗೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣಲಿದೆ ಎಂಬುದು ಸದ್ಯದ ಜನತೆಯ ಮಾತಾಗಿದೆ.
-: ಹೆಗಡೆ 5 ಬಾರಿ ಸಂಸದರಾಗಿ ಮಾಡಿದ್ದೇನು ? :-
ಇನ್ನೂ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಸ್.ಎಲ್.ಘೋಟ್ನೇಕರ 25 ವರ್ಷಗಳವರೆಗೆ ಸಂಸದರಾಗಿ ಒಂದು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅನಂತಕುಮಾರ ಹೆಗಡೆ ಜಿಲ್ಲೆಗೆ ನೀಡಿರುವ ಕೊಡುಗೆ ಆದರೂ ಏನು ? ಯುವಕರಿಗೆ ಉದ್ಯೋಗ ನೀಡಿದ್ದಾರೆಯೇ ? ಜಿಲ್ಲೆಯ ಅಭಿವೃದ್ದಿಯಲ್ಲಿ ಶ್ರಮಿಸಿದ್ದಾರೆಯೇ ? ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗದ, ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಕುಣಬಿ, ಮರಾಠರಿಗೆ ಮೀಸಲಾತಿ ನೀಡುವಲ್ಲಿಯಾದರೂ ಕೇಂದ್ರ ಸರ್ಕಾರದ ಜೊತೆ ಮಾತು ? ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆಯೇ ? ಎಂದು ಪ್ರಶ್ನೇಗಳ ಸುರಿಮಳೆಗೈದ ಘೋಟ್ನೇಕರ ಯಾಕಾಗಿ ಮತ್ತೇ 6ನೇ ಬಾರಿಗೆ ಅನಂತಕುಮಾರನನ್ನು ಗೆಲ್ಲಿಸಬೇಕೆಂದು ಪ್ರಶ್ನೀಸಿದರು.
ಕೇಲವ ಹಿಂದೂತ್ವದ ಮಾತನಾಡುವ ಹೆಗಡೆಗೆ ಹಿಂದುತ್ವವನ್ನು ಬರೆದು ಕೊಡಲಾಗಿದೆಯೇ ? ಮಾತೆತ್ತಿದರೇ ಹಿಂದುಗಳಿಗಾಗಿ ಸಂಸದನಾಗಿದ್ದೇನೆ, ಧರ್ಮ ರಕ್ಷಣೆಗೆ ಸಂಸದನಾಗಿದ್ದೇನೆ ಎನ್ನುವ ಹೆಗಡೆ ಧರ್ಮ ರಕ್ಷಣೆಯನ್ನೇ ಮಾಡಬೇಕಿದ್ದರೇ ಮಠ ನಿರ್ಮಿಸಿಕೊಂಡು ಅಲ್ಲಿ ಉಳಿಯಲಿ ಹೊರತು ಜಾತಿ-ಧರ್ಮ ಆಧಾರಿತವಾಗಿ ರಾಜಕಾರಣ ಮಾಡುವುದು ಶೋಭೆ ತರುವುದಿಲ್ಲ ಎಂದರು.
– : ಬಿಜೆಪಿಯಲ್ಲಿಯೇ ಮುನಿಸು-ಮೈತ್ರಿ ಅಭ್ಯರ್ಥಿಗೆ ಸಲಿಸು:-
ನಾವು ಹಿಂದೂಗಳೇ ಆದರೇ ನಾವು ರಾಜಕಾರಣದ ಸಮಯದಲ್ಲಿ ಧರ್ಮ ಆಧಾರಿತವಾಗಿ ರಾಜಕಾರಣ ಮಾಡುವುದಿಲ್ಲ ಆದರೇ ಹೆಗಡೆ 5 ಬಾರಿ ಸಂಸದರಾದರೂ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಮಾಡಿದ್ದು, ಅವರಿಗೆ ಮಾತನಾಡಲು ವಿಷಯಗಳೇ ಇಲ್ಲವಾಗಿರುವುದರಿಂದ ಈ ಬಾರಿ ಮತ್ತೇ ಹಿಂದುತ್ವ ಹಾಗೂ ಮೋದಿಯವರ ಹೆಸರು ಹೇಳಿಕೊಂಡು ಮತ್ತೊಮ್ಮೆ ಗೆಲುವು ಸಾಧಿಸುವ ತವಕದಲ್ಲಿದ್ದಾರೆಂದು ವ್ಯಂಗ್ಯವಾಡಿದ ಘೊಟ್ನೇಕರ, ಬಿಜೆಪಿ ಪಕ್ಷದಲ್ಲಿಯೇ ಅವರ ಕಾರ್ಯಕರ್ತರು-ಮುಖಂಡರು ಹೆಗಡೆ ಬಗ್ಗೆ ಮುನಿಸಿಕೊಂಡಿರುವುದು ಹೊರಗೆ ಬಿಜೆಪಿ ಗಾಳಿ ಕಂಡರು ಒಳಗೆ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆಂದು ಘೊಟ್ನೇಕರ ಶಾಕ್ ನೀಡಿದ್ದಾರೆ.
-:ಯುವಕನಾಗಿರುವ ಅಸ್ನೋಟಿಕರ ಗೆಲ್ಲಿಸಿ:-
ಯುವಕನಾಗಿರುವ ಆನಂದ ಅಸ್ನೋಟಿಕರ ಸಣ್ಣ ವಯಸ್ಸಿನಲ್ಲಿಯೇ ಸಚಿವನಾಗಿ ಅಪಾರ ಅನುಭವ ಹೊಂದಿದ್ದಾರೆ. ಅಲ್ಲದೇ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದು ಅವರ ಕನಸು ಸಾಕಾರವಾಗಬೇಕಾದರೇ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಮೈತ್ರಿ ಸರ್ಕಾರಕ್ಕೂ ಬಲ ಬರಬೇಕಾದರೇ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರಗೆ ಮತ ನೀಡಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡುವಂತೆ ಘೊಟ್ನೇಕರ ಮತಯಾಚನೆ ಮಾಡಿದ್ದಾರೆ.
-: ಜಿಲ್ಲೆಯ ಅಭೀವೃದ್ದಿ ಬಯಸಿದರೇ ಮೈತ್ರಿ ಅಭ್ಯರ್ಥಿಗೆ ಮತ ನೀಡಿ:-
ರಾಜ್ಯದ ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ನೇತೃತ್ವದಲ್ಲಿ ತಡವಾಗಿಯಾದರೂ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಭರದ ಪ್ರಚಾರ ಕಾರ್ಯ ಮಡಲಾಗಿದೆ. ಕಡಿಮೆ ಅವಧಿಯಲ್ಲಿ ಮತದಾರರನ್ನು ತಲುಪಿ ಮೈತ್ರಿ ಅಭ್ಯರ್ಥಿ ಪರ ಮತಬೇಟೆಯಾಡಲಾಗಿದೆ. 5 ಬಾರಿ ಅನಂತಕುಮಾರ ಹೆಗಡೆಗೆ ಅವಕಾಶ ನೀಡಿರುವ ಮತದಾರರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಪಕ್ಷದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರಗೆ ಈ ಬಾರಿ ಮತ ನೀಡಿ ಆಯ್ಕೆ ಮಾಡಿದರೇ ಜಿಲ್ಲೆಯಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ. ಅತಿಕ್ರಮಣ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂಬುದು ಘೋಟ್ನೇಕರ ಅವರ ಮಾತಾಗಿದ್ದು ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರಗೆ ಮತ ನೀಡುವಂತೆ ವಿನಂತಿಸಿದ್ದಾರೆ.
Leave a Comment