ಹಳಿಯಾಳ:- ಹಲವಾರು ಸಾಮಾಜಿಕ ಕಾರ್ಯಗಳಲ್ಲಿ, ಸ್ವಚ್ಚತಾ ಆಂದೋಲನದಲ್ಲಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಶಂಕ್ರಯ್ಯಾ ಬೆಂಡಿಗೇರಿಮಠ ಅವರು ಸುವರ್ಣಶ್ರೀ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾಒಕ್ಕೂಟ, ಸುವರ್ಣ ಚಾರಿಟೇಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡಮಾಡುವ ‘ಸುವರ್ಣಶ್ರೀ’ 2018-198ನೇ ಸಾಲಿನ ರಾಜ್ಯ ಪ್ರಶಸ್ತಿ ಬಸವರಾಜ ಅವರಿಗೆ ಲಭಿಸಿದೆ.
ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಉಪಸ್ಥಿತಿಯಲ್ಲಿ ರಾಜ್ಯಾಧ್ಯಕ್ಷ ಶ್ರೀನಿವಾಸ ಬಾಬು ಎಂ., ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾಒಕ್ಕೂಟದ ಅಧ್ಯಕ್ಷರು, ಸುವರ್ಣ ಚಾರಿಟೇಬಲ್ ಟ್ರಸ್ಟ್‍ನ ಸಿ.ಎಸ್. ಭಾಸ್ಕರ್ ರೆಡ್ಡಿ, ಡಾ. ಶ್ರೀಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ತುಮಕೂರು ಇವರ ದಿವ್ಯ ಸಾನಿಧ್ಯದಲ್ಲಿ ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡ್ರು ಮತ್ತು ಹಲವಾರು ಗಣ್ಯರಿದ್ದ ವೇದಿಕೆಯಲ್ಲಿ
ಬಸವರಾಜ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಮ್ಮ ನಾಡು ಭವ್ಯ ಸಂಸ್ಕøತಿಕ ನೆಲೆಬೀಡು ಹಲವಾರು ಜನ ಪ್ರತಿಭಾವಂತರು ವಿಭಿನ್ನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದು ದೇಶ-ವಿದೇಶಗಳಲ್ಲಿ ನಮ್ಮ ನಾಡಿನ ಕೀರ್ತಿ-ಗೌರವವನ್ನು ಇಮ್ಮಡಿಗೊಳಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರನ್ನು ಗುರುತಿಸಿ ಪ್ರತಿವರ್ಷ ಸಂಸ್ಥೆಯು ಪ್ರಶಸ್ತಿ ನೀಡುತ್ತದೆ ಅದರಂತೆ ಸಮಾಜ ಸೇವೆ ಹಾಗೂ ಸ್ವಚ್ಛತಾ ಅಭಿಯಾನ ಮತ್ತು ಇತರೆ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಗುರುತಿಸಿ ನನಗೆ 2018-19 ನೇ ಸಾಲಿನ ‘ಸುವರ್ಣಶ್ರೀ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ತುಂಬಾ ಸಂತೋಷದ ಸಂಗತಿಯಾಗಿದೆ ಅಲ್ಲದೇ ಪ್ರಶಸ್ತಿಯು ಮತ್ತೇ ಹೆಚ್ಚಿನ ಸೇವೆ ಸಲ್ಲಿಸುವಲ್ಲಿ ಪ್ರೋತ್ಸಾಹ ನೀಡಿದೆ ಎಂದು ಬಸವರಾಜ ಬೇಂಡಿಗೇರಿಮಠ ಮಾಧ್ಯಮದವರಿಗೆ ಹೇಳಿದರು.
Leave a Comment