
ಹಳಿಯಾಳ:- ಯಾವ ಪಕ್ಷ ಅಭಿವೃದ್ದಿ ಪರ ಇದೆಯೋ ಆ ಪಕ್ಷಕ್ಕೆ ಜನ ಮನ್ನಣೆ ಇಲ್ಲವೆಂಬುದು ಮತ್ತೊಮ್ಮೆ ಸಾಭಿತಾಗಿದೆ ಎಂದಿರುವ ಉಕ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಲೋಕಸಮರ ತೀರ್ಪಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡದೆ ಇರುವವರು ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಪ್ರಧಾನಿ ಮೋದಿ ಹವಾ ಮೇಲೆ ಆಯ್ಕೆಯಾಗಿದ್ದಾರೆ. ಮೋದಿ ಗಾಳಿಯೇ ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎಂದ ಘೋಟ್ನೇಕರ ಮೋದಿ ಹವಾ ಬಹಳ ದಿನ ಉಳಿಯುವುದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಸೋಲು ಗೆಲುವು ಇದ್ದೆ ಇರುತ್ತೇ ಆದ್ದರಿಂದ ಸೋತ ಅಭ್ಯರ್ಥಿ ಹಾಗೂ ಕಾರ್ಯಕರ್ತರು ನಿರಾಶೆಗೊಳ್ಳಬಾರದು. ಬದಲಾಗಿ ಜನರ ಹತ್ತಿರ ಹೋಗಿ ಇನ್ನೂ ಹೆಚ್ಚಿನ ಕೆಲಸ ಮಾಡುವುದರ ಮೂಲಕ ಜನರ ವಿಶ್ವಾಸ ಗಳಿಸುವ ಕಾರ್ಯ ಮಾಡಬೇಕೆಂದರು.
ಕಾಲ ಚಕ್ರ ಹೀಗೆ ಇರುವುದಿಲ್ಲ ಹಿಂದೆ ಇಂದಿರಾಗಾಂಧಿಯವ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಭೂರ್ತ ಗೆಲುವು ಸಾಧಿಸುತ್ತಿತ್ತು ಇಂದು ಬಿಜೆಪಿಗೆ ಮೋದಿ ಹವಾ ವರದಾನವಾಗಿದೆ ಆದ್ದರಿಂದ ತಿರುಗುವ ಈ ಕಾಲ ಚಕ್ರದಲ್ಲಿ ಕಾಂಗ್ರೇಸ್ ಪಕ್ಷ ಮತ್ತೊಮ್ಮೆ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂಪೂರ್ಣ ವಿಶ್ವಾಸವಿದೆ ಎಂದರು ಘೋಟ್ನೇಕರ.
Leave a Comment