• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ನಡೆದ‌ ಮಕ್ಕಳ ಬೇಸಿಗೆ ಶಿಬಿರ ಸಂಪನ್ನ

May 28, 2019 by Yogaraj SK Leave a Comment

watermarked IMG 20190528 WA0066

ಹಳಿಯಳ : ಮಕ್ಕಳು ಮತ್ತು ಜನರು ದೇಶದ ಆಸ್ತಿಯಾಗಿದ್ದಾರೆ. ಅವರಿಗೆ ಉತ್ತಮ ಸಂಸ್ಕಾರ ಮತ್ತು ಮಾರ್ಗದರ್ಶನ ಮಾಡುವುದರಿಂದ ದೇಶದ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳ ರಕ್ಷಣೆಯು ಎಲ್ಲರ ಹೊಣೆಯು ಆಗಿದ್ದು ಪಾಲಕರು ಹೆಚ್ಚಿನ ಮುತವರ್ಜಿ ವಹಿಸಿ ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರ ಶೈಕ್ಷಣಿಕ ಅಭಿವೃದ್ದಿಗೆ ಕೈ ಜೋಡಿಸಬೇಕಾಗಿದೆ ಎಂದು ಸಿಪಿಐ ಬಿ.ಎಸ್. ಲೋಕಾಪೂರ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಹಳಿಯಾಳ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಬಾಲಭವನ ಸೊಸೈಟಿ ವತಿಯಿಂದ ಇಲ್ಲಿಯ ಶ್ರೀ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಆಯೋಜನೆ ಮಾಡಲಾಗಿರುವ ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಲಿಸ್ ಇಲಾಖೆಯು ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಬರುವ ದೂರುಗಳನ್ನು ಅತ್ಯಂತ ಗಂಬೀರವಾಗಿ ಪರಿಗಣಿಸುವುದರ ಮೂಲಕ ಅವುಗಳನ್ನು ಪರಿಹರಿಸಲು ಮುಂದಾಗಿದೆ. ಅಲ್ಲದೇ ವಿಶೇಷ ತಂಡಗಳನ್ನು ರಚಿಸಿ ಅವುಗಳ ತನಿಖೆಗೆ ಮುಂದಾಗಿದ್ದು ಮಕ್ಕಳು ದೇಶದ ಸಂಪತ್ತಾಗಿದ್ದು ಅದರ ರಕ್ಷಣೆ ಎಲ್ಲರೂ ಮಾಡಬೇಕಾಗಿದೆ ಎಂದರು.
ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ ಮಾತನಾಡಿ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಅವರಲ್ಲಿಯ ಪ್ರತಿಭೆಗಳನ್ನು ಹೊರಗೆ ತರಲು ಮತ್ತು ಮಾರ್ಗದರ್ಶನ ಮಾಡಲು ಅನುಕೂಲವಾಗುತ್ತದೆ. ಮಕ್ಕಳು ಹಾಗೂ ಮಹಿಳೆಯರು ದೇಶÀಕ್ಕಾಗಿ ಪ್ರಾಮಾಣಿಕವಾಗಿ ದುಡಿಯಲು ಮುಂದಾದರೇ ದೇಶದ ಅಭಿವೃದ್ದಿಯು ಉನ್ನತ ಮಟ್ಟದಲ್ಲಿ ಆಗಲು ಸಾಧ್ಯವಾಗುತ್ತದೆ. ಮಕ್ಕಳ ಶ್ರೇಯೋಭಿವೃದ್ದಿಯು ಸಮಾಜದ ಅಂಗವಾಗಿದ್ದು ಅದನ್ನು ಎಲ್ಲರು ಮಾಡಬೇಕಾಗಿದೆ ಎಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅಂಬಿಕಾ ಕಟಕೆ ಮಾತನಾಡಿ, ಬೇಸಿಗೆಯ ಕಾಲದಲ್ಲಿ ಮಕ್ಕಳು ಮೊಬೈಲ್‍ದಲ್ಲಿ ತಮ್ಮ ಸಮಯವನ್ನುÀ ವ್ಯರ್ಥ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಭಾಗವಹಿಸಿದರೇ ಅವರಿಗೆ ಉಚಿತವಾಗಿ ಡಾನ್ಸ್, ಸಂಗೀತ,ಚಿತ್ರಕಲೆ, ಕರಾಟೆ, ಜೇಡಿ ಮಣ್ಣಿನ ಕಲೆ, ಪೇಪರ್ ಕ್ರಾಪ್ಟ್, ಸಮೋಹ ನೃತ್ಯ ಸೇರಿದಂತೆ ಇನ್ನಿತರ ಕಲೆಗಳನ್ನು ಸಹ ಕಲಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಅವರು ತಮ್ಮ ಶೈಕ್ಷಣಿಕ ಅಬಿವೃದ್ದಿ ಜೊತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜೀಜಾಮಾತಾ ಮತ್ತು ಸಾಂತ್ವನ ಕೇಂದ್ರದ ಅಧ್ಯಕ್ಷೆ ಮಂಗಲಾ ಕಶೀಲ್ಕರ ಅವರು ಭಾಗವಹಿಸಿ, ಮಕ್ಕಳಿಗೆ ತಾಯಿಂದರು ಉತ್ತಮ ಗುಣಗಳನ್ನು ಬೆಳೆಸಲು ಸಹಾಯ ಮಾಡಿದರೇ ಮಾತ್ರ ಮುಂದಿನ ದಿನಗಳಲ್ಲಿ ಮಕ್ಕಳು ಸಂಸ್ಕಾರವನ್ನು ಕಲಿಯಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಕಲಿಕೆಯು ನಿರಂತರವಾಗಿದ್ದು ಪಾಲಕರು ಆದಷ್ಟು ಮೊಬೈಲ್‍ದಿಂದ ದೂರ ಉಳಿಯುವಂತಹ ಹವ್ಯಾಸಗಳನ್ನು ಕಲಿಸಬೇಕಾಗಿದ್ದು ಇದರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ 10 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ವಿವಿಧ ಕಲೆಗಳನ್ನು ಕಲಿತ ಮಕ್ಕಳು ಡಾನ್ಸ್, ಚಿತ್ರಕಲೆ, ಜೇಡಿ ಮಣ್ಣಿನ ಕಲಾಕೃತಿಗಳು ಸೇರಿದಂತೆ ಇನ್ನಿತರ ಕಲೆಗಳ ಪ್ರದರ್ಶನ ಮಾಡಿದರು.ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ಸಹ ವಿತರಿಸಲಾಯಿತು. ಅಲ್ಲದೇ ತಮ್ಮ ಅನಿಸಿಕೆಗಳನ್ನು ಸಹ ವ್ಯಕ್ತಪಡಿಸಿದರು.
ಮಂಜುನಾಥ ಮಾದರ, ಕೃಷ್ಣಾ ಪುರೋಹಿತ, ನಾಗಲಿಂಗ ಚಲವಾದಿ, ಗೋವಿಂದ ಗಡಾದ, ವಿಷ್ಣು, ಮಾರುತಿ ಖಾನಾಪೂರಕರ, ಮೇಲ್ವಿಚಾರಕಿಯರಾದ ಸುವರ್ಣ ಗುರವ, ಅನುಸೂಯಾ ರೇಡೆಕರ, ರಾಜೇಶ್ವರಿ ಗವಿಮಠ, ಚೇತನ ಮತ್ತು ಜಬ್ಬಾರ ಸೇರಿದಂತೆ ಇನ್ನಿತರರು ಹಾಜರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: children's development department, Children's Summer Camp, Clay, Dance, Department of Education, Department of Kannada and Culture, guidance, Haliya, karate, music, painting, Paper Crop, People's Own Country. Good funeral, Samoan Dance, Sultan, Youth Affiliation, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರ ಕನ್ನಡ, ಕರಾಟೆ, ಚಿತ್ರಕಲೆ, ಜನರು ದೇಶದ ಆಸ್ತಿಯಾಗಿದ್ದಾರೆ. ಉತ್ತಮ ಸಂಸ್ಕಾರ, ಜೇಡಿ ಮಣ್ಣಿನ ಕಲೆ, ಡಾನ್ಸ್, ಪೇಪರ್ ಕ್ರಾಪ್ಟ್, ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ಬೇಸಿಗೆ ಶಿಬಿರ, ಮಾರ್ಗದರ್ಶನ, ಯುವ ಸಬಲಿಕರಣ, ಶಿಕ್ಷಣ ಇಲಾಖೆ, ಸಂಗೀತ, ಸಂಪನ್ನ, ಸಮೋಹ ನೃತ್ಯ ಸೇರಿದಂತೆ ಇನ್ನಿತರ ಕಲೆ, ಹಳಿಯಾಳದಲ್ಲಿ ನಡೆದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...