ಹಳಿಯಾಳ:- ಹಿರಿಯರು ಆಲದ ಮರವಿದ್ದಂತೆ. ಸದಾ ಅವರ ಆಶೀರ್ವಾದ ಎಲ್ಲರಿಗೂ ಇರಬೇಕು ಎಂದು ಹಳಿಯಾಳದ ವಿಮಲ ವಿ.ದೇಶಪಾಂಡೆ ಸೂಲ್ಕ್ ಆಫ್ ಎಕ್ಸಲೆನ್ಸನ್ ಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಸಂಗೀತಾ ಮೇಲಗೆರಿ ಹೇಳಿದರು.
ವಿ.ಆರ್.ಡಿಎಮ್ ಟ್ರಸ್ಟ್‍ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶಿಷ್ಟ, ವಿನೂತನವಾಗಿ ಅಜ್ಜ, ಅಜ್ಜಿಯಂದಿರ ದಿನವನ್ನು ಎಕ್ಸಲೆನ್ಸ್ ಶಾಲೆಯಲ್ಲಿ ದಿವಂಗತ ವಿಶ್ವನಾಥರಾವ್ ದೇಶಪಾಂಡೆ ದಂಪತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ಲೇಹೋಮ ಮಕ್ಕಳ ಸುಮಾರು 40ಜನ ಅಜ್ಜ-ಅಜ್ಜಿಯಂದಿರು ಭಾಗವಹಿಸಿದ್ದರು.
ಶಿಕ್ಷಕಿ ಜಿ.ಎಮ್.ಯಾಜಿ ಮಾತನಾಡಿ ಮಕ್ಕಳು ಹೆಚ್ಚು ಇಷ್ಟ ಪಡುವುದು ಅಜ್ಜ ಅಜ್ಜಿಯಂದಿರನ್ನು ನಾವು ನಮ್ಮ ಮೊಮ್ಮಕ್ಕಳಿಗಾಗಿ ಆಸ್ತಿ ಅತಂಸ್ತು ದುಡ್ಡನ್ನು ಬಳುವಳಿಯಾಗಿ ನೀಡದೆ, ಉತ್ತಮಗುಣ, ಉತ್ತಮ ಮೌಲ್ಯಗಳನ್ನು ನೀಡಬೇಕೆಂದರು.
ಈ ಸಂದರ್ಭದಲ್ಲಿ ಅಜ್ಜ-ಅಜ್ಜಿಯಂದಿರಿಗಾಗಿ ಮನರಂಜನಾ ಆಟಗಳನ್ನು ಏರ್ಪಡಿಸಲಾಗಿತ್ತು. ಮನರಂಜನಾ ಆಟದಲ್ಲಿ ವಿಜೇತರಾದವರಿಗೆ ಶಾಲೆಯ ಪ್ರಾಚಾರ್ಯರು ಬಹುಮಾನ ವಿತರಿಸಿದರು. ಕಾರ್ಯಕ್ರಮನ್ನು ನಾಗರತ್ನಾ ಇಟಗಿ ಹಾಗೂ ಗೀತಾ ಮಳಕ ನಿರ್ವಹಿಸಿದರು.
Leave a Comment