
ಜೋಯಿಡಾ ತಾಲೂಕಿನ ರಾಮನಗರದಲ್ಲಿ ಮಳೆಯಿಂದಾಗಿ ಗಟಾರಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರು ಕೂಡಾ ಇಲ್ಲಿನ ಗ್ರಾಮ ಪಂಚಾಯತಿಯವರು ಮಾತ್ರ ಇಲ್ಲಿನ ಪರಿಸ್ಥಿತಿಯನ್ನು ನೋಡಿಯು ಸುಮ್ಮನೆ ಕುಳಿತಿರುವುದು ವಿಪರ್ಯಾಸವಾಗಿದೆ.
ಜೋಯಿಡಾ ತಾಲೂಕಿನಲ್ಲೇ ರಾಮನಗರ ದೊಡ್ಡ ಭಾಗವಾಗಿದ್ದು ತಾಲೂಕಿನಲ್ಲಿಯೇ ಹೆಚ್ಚು ಜನತೆ ಇಲ್ಲಿದ್ದಾರೆ, ಸುಪಾ ಪುರ್ನವಸತಿ ಕೇಂದ್ರದ ಜನರು ಇಲ್ಲಿ ವಾಸವಾಗಿದ್ದು ಒಟ್ಟಾರೆಯಾಗಿ ಜೋಯಿಡಾ ತಾಲೂಕಿನ ಒಂದು ದೊಡ್ಡ ಭಾಗವಾದ ರಾಮನಗರದಲ್ಲಿ ಸ್ವಚ್ಚತೆ ಮಾತ್ರ ಇಲ್ಲವಾಗಿದೆ, ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಎಸೆಯುವುದು, ತ್ಯಾಜ್ಯ ಎಸೆಯುವುದು ಇಲ್ಲಿ ಸರ್ವೆ ಸಾಮನ್ಯವಾಗಿದೆ,
ಸುಮ್ಮನೆ ಕುಳಿತ ಗ್ರಾ,ಪಂ, –
ತಾಲೂಕಿನಲ್ಲಿ ಈ ವಾರ ಜೋರಾಗಿ ಮಳೆ ಸುರಿಯುತ್ತಿದ್ದು , ಈ ಮಳೆಯಿಂದಾಗಿ ಇಲ್ಲಿನ ಗಟಾರಗಳೆಲ್ಲಾ ತುಂಬಿ ಮನೆಗಳಿಗೆ ನೀರು ನುಗ್ಗುವಂತಾಗಿದೆ, ಗ್ರಾಮ ಪಂಚಾಯತ ರಾಮನಗರದವರು ಗಟಾರ ಮಳೆಗಾಲದ ಪೂರ್ವದಲ್ಲಿಯೇ ಸರಿಪಡಿಸಿದ್ದರೆ ಈ ರೀತಿ ತೊಂದರೆಯನ್ನು ಅನುಭವಿಸುವ ಪ್ರಸಂಗ ರಾಮನಗರದ ಜನಕ್ಕೆ ಬರುತ್ತಿರಲಿಲ್ಲ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
Leave a Comment