ತುಂಬಿ ಹರಿದ ಯಡೋಗಾ ಹಳ್ಳ- ಮುಳುಗಿದ ಹಳೆ ಸೇತುವೆ
ಹಳಿಯಾಳ:- ತಾಲೂಕಿನಲ್ಲಿ ಕಳೆದ 8-10 ದಿನಗಳಿಂದ ಉತ್ತಮ ವರ್ಷಧಾರೆಯಾಗುತ್ತಿದ್ದು ಬಹುತೇಕ ಕೆರೆಗಳು ತುಂಬುವ ಹಂತಕ್ಕೆ ತಲುಪಿವೆ ಅಲ್ಲದೇ ಯಡೋಗಾ ಸೇತುವೆ ತುಂಬಿ ಹರಿದಿದೆ.
ತಾಲೂಕಿನ ಕಳಸಾಪುರ, ಯಡೋಗಾ ಸೇತುವೆ, ಕೆಸರೊಳ್ಳಿ ಮಾರ್ಗವಾಗಿ ಭಾಗವತಿಯ ತಟ್ಟಿಹಳ್ಳ ಆಣೆಕಟ್ಟಿಗೆ ಸೇರುವ ಈ ಹಳ್ಳದಲ್ಲಿ ಕಳೆದ ಅನೇಕ ವರ್ಷಗಳಿಂದ ಈ ಪ್ರಮಾಣದಲ್ಲಿ ನೀರು ಹರಿದಿರಲಿಲ್ಲ ಎಂಬುದು ಈ ಭಾಗದ ಜನರ ಮಾತಾಗಿದೆ.
ಈ ಬಾರಿ ಈ ಹಳ್ಳ ತುಂಬಿ ಹಳೆಯ ಸೇತುವೆ ಮುಳುಗಡೆಯಾಗಿದೆ.
ಶನಿವಾರ ಮತ್ತೇ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ.
Leave a Comment