
ಜೋಯಿಡಾ;
ಏಶ್ಯಾದಲ್ಲಿಯೇ ಎರಡನೇ ಎತ್ತರದ ಜಲಾಶಯವೆಂದು ಹೆಗ್ಗಳಿಕೆ ಹೊಂದಿತ್ತ ಸೂಪಾ ಜಲಾಶಯ ತುಂಬುವ ಹಂತ ತಲುಪಿದ್ದರಿಂದ ಮುನ್ನೇಚ್ಚರಿಕೆ ಕ್ರಮವಾಗಿ ಜಲಾಶಯದಿಂದ 5000 ಕ್ಯೂಸೆಕ್ಸ್ ನೀರು ಹೋಬಡಿಲಾಯಿತು.
ಸೂಪಾ 556.10 ಮೀ ತುಂಬಿದ್ದು, 98500 ಕ್ಕೂ ಹೆಚ್ಚು ಕ್ಯುಸೆಕ್ಸ್ ಒಳಹರಿವು ಇದ್ದು, ದಿನೆದಿನೆ ಒಳಹರಿವು ಹೆಚ್ಚುತ್ತಿದೆ. ಇದರಿಂದಾಗಿ ಸೂಪಾ ತನ್ನ ಗರಿಷ್ಟ ಮಟ್ಟ ಮೀರುವ ಸೂಚನೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಳಹರಿವಿನ ಮಟ್ಟ ಇಳಿಕೆಯಾಗುವವರೆಗೂ ನೀರಿನ ಒತ್ತಡ ತಡೆಯುವ ಕಾರಣಕ್ಕಾಗಿ ಇಂದಿನಿಂದ 5000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದಾಗಿ ಕೆ.ಪಿಸಿ. ಮುಖ್ಯ ಅಭಿಯಂತರ ಲಿಂಗಣ್ಣ ಪತ್ರಿಕೆಗೆ ತಿಳಿಸಿರುತ್ತಾರೆ.
ಕೆಳಸ್ಥರದ ಗ್ರಾಮಗಳಿಗೆ ಎಚ್ಚರಿಕೆ ನೋಟಿಸ್ : ಸೂಪಾ ಕೆಳಸ್ಥರದ ಗ್ರಾಮಗಳಾದ ಮಾವಳಿಂಗೆ, ಹಳೆ ದಾಂಡೇಲಿ ಸೇರಿದಂತೆ ಸೂಪಾ ಕೇಳಸ್ಥರದ ನದಿ ತೀರದ ವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಾಳಾಂತರ ಗೋಳುವಂತೆ ಎಚ್ಚರಿಕೆ ನೀಡಿದ್ದಾಗಿ ತಿಳಿದುಬಂದಿದೆ.

Leave a Comment