
ಹಳಿಯಾಳ :- ಹಳಿಯಾಳದಲ್ಲಿ ಎಲ್ಲ ಬಡವರಿಗೆ ಉತ್ತಮ ಗುಣಮಟ್ಟದ ಮನೆಗಳು ದೊರಕಲಿ ಎಂಬ ಉದ್ದೇಶದಿಂದ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅರ್ಹ ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ ಅಲ್ಲದೇ ಫಲಾನುಭವಿಗಳು ಸ್ಲಂ ಬೊರ್ಡಗೆ ಕಟ್ಟಬೇಕಾದ 50 ಸಾವಿರ ರೂ. ವಂತಿಗೆಯನ್ನು ಕೆಡಿಸಿಸಿ ಬ್ಯಾಂಕ್‍ನಿಂದ ಸಾಲದ ರೂಪದಲ್ಲಿ ನೀಡುವುದರ ಮೂಲಕ ಬಡವರಿಗೆ ಸಹಾಯ-ಸಹಕಾರ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ ಹೇಳಿದರು.
ಪಟ್ಟಣದ ತಮ್ಮ ಬ್ಯಾಂಕ್ ಕಾರ್ಯಾಲಯದಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಳಿಯಾಳ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಈ ಮನೆಗಳ ನಿರ್ಮಾಣದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಒಂದಾನುವೇಳೆ ಅವ್ಯವಹಾರಗಳು ನಡೆದಿದ್ದೇ ಆದಲ್ಲಿ ಕಾನೂನು ಪ್ರಕಾರ ತನಿಖೆ ನಡೆಯಲಿ, ತಾವು ಕೂಡ ತನಿಖೆಗೆ ಆಗ್ರಹಿಸುವುದಾಗಿ ಘೊಟ್ನೇಕರ ಸ್ಪಷ್ಟಪಡಿಸಿದರು.
ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಬಗ್ಗೆ ಸುನೀಲ್ ಹೆಗಡೆ ಅವರು ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸೋಸೈಟಿಗಳಲ್ಲಿ ಕಾರ್ಯದರ್ಶಿಗಳಿಂದ ತಪ್ಪುಗಳು ನಡೆದರು ನೇರವಾಗಿ ಕೆಡಿಸಿಸಿ ಬ್ಯಾಂಕಿನ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಬ್ಯಾಂಕಿನ ಹಿತರಕ್ಷಣೆ ನಮ್ಮ ಕರ್ತವ್ಯವಾಗಿರುವುದರಿಂದ ಅರ್ಹತೆಗೆ ತಕ್ಕಂತೆ ಸಾಲ ಮಂಜೂರು ಮಾಡಲಾಗುತ್ತದೆ. ಇಗಾಗಲೇ ಶೇ95 ರಷ್ಟು ರೈತರಿಗೆ ಸಾಲ ಸೌಲಭ್ಯ ನೀಡುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿಯೇ ನಂ1 ಸ್ಥಾನವನ್ನು ಕೆಡಿಸಿಸಿ ಬಾಂಕ್ ಪಡೆದಿದೆ ಎಂದು ಘೊಟ್ನೆಕರ ಹೇಳಿದರು.
ಈಗಾಗಲೇ ಕುಮಟಾದ ಬರಗದ್ದೆ ಸೇರಿದಂತೆ ಇನ್ನಿತರ ಸಹಕಾರಿ ಸಂಘಗಳಲ್ಲಿ ಕಾರ್ಯದರ್ಶಿಗಳಿಂದ ನಡೆದ ಅವ್ಯವಹಾರಗಳ ಕುರಿತು ಸಹಕಾರಿ ಸಂಘಗಳ ಮೇಲಾಧಿಕಾರಿಗಳಿಗೆ ತನಿಖೆ ನಡೆಸುವಂತೆ ಕೆಡಿಸಿಸಿ ಬ್ಯಾಂಕ್‍ನಿಂದ ದೂರು ನೀಡಲಾಗಿದೆ. ಸೊಸೈಟಿಗಳು ಬಾಕಿ ಲೆಕ್ಕ ಸರಿಯಾಗಿ ತೊರಿಸದ ಕಾರಣ ಕೆಲವು ರೈತರ ಸಾಲಮನ್ನಾ ಹಣ ಕೆಡಿಸಿಸಿ ಬ್ಯಾಂಕ್ ಬಳಿ ಭದ್ರವಾಗಿದ್ದು ರೈತರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ ಎಂದರು.
ನಾವು ರಾಜಕೀಯಕ್ಕೂ ಮೊದಲು ಗುತ್ತಿಗೆದಾರನಾಗಿರುವ ಕಾರಣ ಸರ್ಕಾರದ ನಿಯಮಾವಳಿಯಂತೆ ಟೆಂಡರ್‍ಗಳನ್ನು ಪಡೆದು ಕಾಮಗಾರಿ ಮಾಡುತ್ತೇವೆ. ಆದರೇ ಮಾಜಿ ಶಾಸಕ ಸುನೀಲ್ ಹೆಗಡೆ ಮೊದಲು ಗುತ್ತಿಗೆದಾರರಾಗಿದ್ದರು ಆದರೇ ಗುಣಮಟ್ಟದ ಕೆಲಸ ಮಾಡಲು ಆಗದೆ ಹಿಂದೆ ಸರಿದರು ಇಂತಹವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು ಘೋಟ್ನೇಕರ.
ಸುದ್ದಿಗೊಷ್ಠಿಗೂ ಮೊದಲು ಮನೆ ಬಿದ್ದು ಹಾನಿಗೊಳಗಾದವರಿಗೆ, ಬೆಂಕಿ ಅವಘಡದಿಂದ ನಷ್ಟ ಅನುಭವಿಸಿದವರಿಗೆ ಹಾಗೂ ಅಪಘಾತಕ್ಕೀಡಾದ ಕುಟುಂಬದವರಿಗೆ ಸುಮಾರು 6 ಜನರಿಗೆ ಕೆಡಿಡಿಸಿ ಬ್ಯಾಂಕನಿಂದ ಆರ್ಥಿಕ ಸಹಾಯದ ಚೆಕ್‍ಗಳನ್ನು ಘೊಟ್ನೇಕರ ಅವರು ಫಲಾನುಭವಿಗಳಿಗೆ ವಿತರಿಸಿದರು.
ಸುದ್ದಿಗೊಷ್ಠಿಯಲ್ಲಿ ಹಳಿಯಾಳ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಪುರಸಭಾ ಸದಸ್ಯರಾದ ಅನಿಲ್ ಚವ್ವಾಣ, ಸುರೇಶ ವಗ್ರಾಯಿ, ನವೀನ ಕಾಟಕರ ಇದ್ದರು.
Leave a Comment