
ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಪ್ರಯುಕ್ತ ಪ್ರತ್ಯೇಕವಾಗಿ ಎರಡು ಭಜನಾ ಸಂಘದವರು, ಎರಡು ದೇವಸ್ಥಾನಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು, ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
ಶ್ರೀ ನಂದಿಶ್ವರ ಗಜಾನನ ಭಜನಾ ಸಂಘದ ವತಿಯಿಂದ ಶ್ರೀ ನಂದಿಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ ಅವರು “ಶ್ರೀ ಬಬಲಾದೀಶ್ವರ ಮಹಾತ್ಮೇ” ಕುರಿತು ಪ್ರವಚನ ನಡೆಸಿಕೊಟ್ಟರು. ಶನಿವಾರದಂದು ಪ್ರವಚನ ಕಾರ್ಯಕ್ರಮದ ಕೊನೆಯ ದಿನವಾದರಿಂದ ಮದ್ಯಾಹ್ನ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿಸಿ, ತದನಂತರ ಪ್ರವಚನ ಕಾರ್ಯ ನಡೆಸಿಕೊಟ್ಟ ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ, ಅನ್ನಪ್ರಸಾದದ ಅಡುಗೆ ಸೇವೆ ಮಾಡಿದ ರಾಚನ್ನಾ ಮಾಟೋಳ್ಳಿ ಹಾಗೂ ಅನೇಕರಿಗೆ ಸಂಘದ ಸದಸ್ಯರು ಶಾಲು ಹೊದಿಸಿ ಸತ್ಕರಿಸಿದರು.
ಇದೇ ತರಹ ಗ್ರಾಮದ ಶ್ರೀ ಚನ್ನಬಸವೇಶ್ವರ ಭಜನಾ ಸಂಘದ ವತಿಯಿಂದ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ನೀಲಕಂಠ ಉಳವಿ ಅವರು “ಶ್ರೀ ಸಿದ್ಧಾರೂಡರ ಮಹಾತ್ಮೇ” ಕುರಿತು ಪ್ರವಚನ ನಡೆಸಿಕೊಟ್ಟರು. ಶನಿವಾರದಂದು ಪ್ರವಚನ ಕಾರ್ಯಕ್ರಮದ ಕೊನೆಯ ದಿನವಾದರಿಂದ ರಾತ್ರಿ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿಸಿ, ತದನಂತರ ಪ್ರವಚನ ಕಾರ್ಯ ನಡೆಸಿಕೊಟ್ಟ ನೀಲಕಂಠ ಉಳವಿ ಹಾಗೂ ಅನೇಕರಿಗೆ ಸಂಘದ ಸದಸ್ಯರು ಶಾಲು ಹೊದಿಸಿ ಸತ್ಕರಿಸಿದರು.
Leave a Comment