• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜ್ಯದಲ್ಲಿ‌ ನೆರೆ ಹಾವಳಿಯಿಂದ ಲಕ್ಷಾಂತರ ಜನ ನಿರಾಶ್ರಿತರಾಗಿರುವ ಕಾರಣ‌ ಕೇಂದ್ರ ಸರ್ಕಾರ “ರಾಷ್ಟ್ರೀಯ ವಿಪತ್ತು” ಎಂದು ಘೋಷಿಸಲಿ – ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ ಆಗ್ರಹ.

September 17, 2019 by Yogaraj SK Leave a Comment

sugar cane growers association state president Kurubur Shantkumar

ಹಳಿಯಾಳ:- ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದ ಹಾನಿಗೆ ಒಳಗಾಗಿ 8 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು 7 ಲಕ್ಷಕ್ಕೂ ಹೆಚ್ಚು ಜನರು ಇದರಿಂದ ನಿರಾಶ್ರಿತರಾಗಿರುವುದರಿಂದ ಈ ಭೀಕರ ಪ್ರವಾಹವನ್ನು ಕೇಂದ್ರ ಸರ್ಕಾರ “ರಾಷ್ಟ್ರೀಯ ವಿಪತ್ತು” ಎಂದು ಘೋಷಿಸಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದ್ದಾರೆ.
ಪಟ್ಟಣದ ಲೋಕೊಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಶತಮಾನಗಳಲ್ಲೇ ಕಾಣದ ಭೀಕರ ಜಲಪ್ರವಾಹದಿಂದ 22 ಜಿಲ್ಲೆಗಳಲ್ಲಿ 52 ಸಾವಿರ ಕೋಟಿಯಷ್ಟು ಹಾನಿಯಾಗಿದೆ. 2.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿಯ ಕಬ್ಬು ಬೆಳೆ ನಾಶವಾಗಿದೆ. ಕಾರಣ ಈ ಬಗ್ಗೆ ರಾಜ್ಯದ ಎಲ್ಲ ಸಂಸದರು ಒಗ್ಗೂಡಿ ನಿಯೋಗದೊಂದಿಗೆ ಪ್ರಧಾನಮಂತ್ರಿ ಮೋದಿಯವರ ಬಳಿಗೆ ತೆರಳಿ ರಾಷ್ಟ್ರೀಯ ವಿಪತ್ತು ಘೊಷಣೆ ಹಕ್ಕೊತ್ತಾಯ ಮಂಡಿಸಲಿ ಎಂದು ಕರೆ ನೀಡಿದರು.
ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ನೆರೆ ಪರಿಹಾರಕ್ಕಾಗಿ ಹಣ ಬಿಡುಗಡೆಯಾಗಿಲ್ಲ. ರಾಜ್ಯದ ಸಂಸದರು ಪ್ರಧಾನಿ ಮೋದಿಯವರಲ್ಲಿ ನೆರೆ ಪರಿಹಾರಕ್ಕಾಗಿ ಆಗ್ರಹಿಸಲು ಹೆದರುತ್ತಿದ್ದಾರೆ. ಇವರು ಜನರ ಗುಲಾಮರಲ್ಲ ಹೊರತು ಮೋದಿಯ ಗುಲಾಮರಂತೆ ವರ್ತಿಸುತ್ತಿದ್ದಾರೆಂದು ಕಿಡಿ ಕಾರಿದರು.
ನೆರೆ ಸಂತ್ರಸ್ಥರಿಗೆ ಸರಕಾರ ನೀಡುತ್ತಿರುವ ಪರಿಹಾರದ ಎನ್.ಡಿ.ಆರ್‍ಎಫ್ ನ ಮಾನದಂಡ ಅವೈಜ್ಞಾನಿಕವಾಗಿದೆ. ಎಕರೆಗೆ 2500/-ರೂ. ಮಳೆ ಆಶ್ರಯಕ್ಕೆ 5,500/- ರೂ. ನೀರಾವರಿ ಪ್ರದೇಶದ ಬೆಳೆಗಳಿಗೆ ನೀಡುವುದು ಭೀಕ್ಷಾ ರೂಪದ ಪರಿಹಾರವಾಗಿದೆ ಎಂದು ಕಿಡಿ ಕಾರಿದ ಅವರು 10 ವರ್ಷಗಳಿಂದಲೂ ಎನ್.ಡಿ.ಆರ್‍ಎಫ್ ಮಾನದಂದ ಬದಲಾಗಿಲ್ಲ. ಆದರೇ ಎಮ್.ಪಿ.ಎಮ್.ಎಲ್.ಎಗಳ ಸಂಬಳದ ಭತ್ಯೆ ತಿದ್ದುಪಡಿಯಾಗಿ ಬೇಗನೆ ಅನುಮೊದನೆ ಕೂಡ ಗೊಳ್ಳುತ್ತದೆ ಆದರೇ ಬಡವರ ಕುರಿತು ಯಾವುದೇ ಮಸೂದೆ ಬೇಗನೆ ತಿದ್ದುಪಡಿಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಂತಕುಮಾರ ಕೇಂದ್ರ ಸರ್ಕಾರÀ ಈ ಬಗ್ಗೆ ತಿದ್ದುಪಡಿ ಮಾಡಲು ತುರ್ತ ಕ್ರಮಕೈಗೊಳ್ಳಬೇಕೆಂದರು.
ರಾಜ್ಯ ಸರ್ಕಾರ ತಕ್ಷಣವೇ ನೆರೆ ಸಂತ್ರÀಸ್ಥ ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು, ಅಲ್ಲದೇ ಹೊಸದಾಗಿ ದೀರ್ಘಾವದಿ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ತಕ್ಷಣವೇ ಜಾರಿಗೆ ತರುವ ಮೂಲಕ ಸರ್ಕಾರ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಆಶಿಸಿದರು.
ನೆರೆ,ಬರ, ಅತಿವೃಷ್ಠಿ ಯಾದಾಗ ಬೆಳೆ ನಷ್ಟ ಕೊಡುವ ಬದಲು ಎಲ್ಲ ಬೆಳೆಗಳನ್ನು ಎಲ್ಲಾ ಪ್ರದೇಶಗಳಿಗೂ ಅನ್ವಯವಾಗುವಂತಹ ಪ್ರಧಾನಿ ಫಸಲ್ ಭೀಮಾ ಯೋಜನೆ ಜಾರಿಗೆ ತರಬೇಕು ಎಂದರು.
ರಾಜ್ಯದ ನೆರೆ ಸಂತ್ರಸ್ಥ ಕಬ್ಬು ಬೆಳೆಗಾರ ರೈತರ ನೆರೆ ಸಮಸ್ಯೆಗಳ ಸಮಾವೇಶವನ್ನು ಅಕ್ಟೋಬರ 15 ರಂದು ಬೆಂಗಳೂರಿನಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಈ ಸಮಾವೇಶಕ್ಕೆ ರಾಜ್ಯದ ಮುಖ್ಯಮಂತ್ರಿ, ಪ್ರತಿಷ್ಠಿತ ಮಠಾಧೀಶರನ್ನು ಆಹ್ವಾನಿಸಿ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುವುದಕ್ಕೆ ಈಗಾಗಲೇ ತೀರ್ಮಾನಿಸಲಾಗಿದೆ ಎಂದರು.
ರಾಜ್ಯದ ಕೆಲವು ಭಾಗದಲ್ಲಿ ಯೂರಿಯಾ ಗೊಬ್ಬರÀದ ಅಭಾವ ಸೃಷ್ಠಿಯಾಗುತ್ತಿದೆ. ಕಾಳ ಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟವಾಗುತ್ತಿದೆ ಆದ್ದರಿಂದ ತಕ್ಷಣವೇ ಕೇಂದ್ರದ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ರಾಜ್ಯಕ್ಕೆ ಹೆಚ್ಚುವರಿಯಾಗಿ ಯೂರಿಯಾ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಮ್.ವಿ. ಘಾಡಿ, ಸುರೇಶ ಎಮ್ ಪಾಟೀಲ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ರಾಜ್ಯ ಸಂಟನಾ ಕಾರ್ಯದರ್ಶಿ ಅತ್ತಹಾಳು ದೇವರಾಜ, ರಾಜ್ಯ ಮುಖಂಡರಾದ ಲಕ್ಷ್ಮಣ ಪಾಟೀಲ್, ವಿ.ಕೆ.ಬೊಬಾಟಿ, ತಾಲ್ಲೂಕು ಅಧ್ಯಕ್ಷ ಶಂಕರ ಕಾಜ್‍ಗಾರ, ಶ್ರೀಕಾಂತ್ ಪಾಟೀಲ್, ಮಂಜು ಬಡಡೊಳಕರ್ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಎಂದು ಘೋಷಿಸಲಿ, ಕಾರಣ‌, ಕೇಂದ್ರ ಸರ್ಕಾರ, ರಾಜ್ಯದಲ್ಲಿ‌ ನೆರೆ ಹಾವಳಿ, ರಾಷ್ಟ್ರೀಯ ವಿಪತ್ತು, ಲಕ್ಷಾಂತರ ಜನ ನಿರಾಶ್ರಿತರಾಗಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...