
ಹಳಿಯಾಳ:- ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಕಿಲ್ಲಾ ಕೋಟೆ ಎದುರುಗಡೆಯ ಕಿಲ್ಲಾ ವೃತ್ತದಲ್ಲಿಯ ಅಶ್ವಾರೂಢ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಪಟ್ಟಣದ ಕಿಲ್ಲಾ ಪ್ರದೇಶದ ಜನರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಕಿಲ್ಲಾ ಪ್ರದೇಶದಲ್ಲಿರುವ ಮಾರೇಮ್ಮಾದೇವಿ ದೇವಸ್ಥಾನದಲ್ಲಿ ಪಟ್ಟಣದ ಸಂಜೀವಿನಿ ಆಸ್ಪತ್ರೆಯ ಡಾ.ಚಂದರಗಿಮಠ ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 100ಕ್ಕೂ ಅಧಿಕ ಜನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಬಿಜೆಪಿ ಪುರಸಭೆ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಪ್ರಮುಖರಾದ ಬಾಬು ರೆಂಟಿ, ನಾರಾಯಣ ಜಾಧವ, ನಾರಾಯಣ ಪೂಜಾರಿ, ಮೋಹನ ಮಾವಳಂಗಿ, ಕಿರಣ ಪೂಜಾರಿ, ಮಾರುತಿ ಪೂಜಾರಿ, ಚೂಡಪ್ಪಾ ಬೊಬಾಟಿ, ನಾಗೇಂದ್ರ ಜಾಧವ, ಸುಭಾಷ ಸಾಳುಂಕೆ, ರುದ್ರಪ್ಪಾ ಪೂಜಾರಿ, ಲಕ್ಷ್ಮಣ ಅರಿಶಿನಗೇರಿ, ಮಂಜು ಪಂಡಿತ, ಅನಿಲ ಮುತ್ನಾಳ, ಮೊದಲಾದವರು ಇದ್ದರು.
Leave a Comment