
ಸರ್ಕಾರಿ ಕೆಲಸ ದೇವರ ಕೆಲಸ ಎಂದು ಎಲ್ಲಾ ಸರ್ಕಾರಿ ಕಾರ್ಯಾಲಯಗಳಲ್ಲಿ ಉಪದೇಶವನ್ನು ಕೊಡುವ ಈ ಸಂದರ್ಭದಲ್ಲಿ ಖಾನಾಪೂರ ತಾಲೂಕಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತನ್ನ ಜೀವವನ್ನೇ ಒತ್ತಿ ಇಟ್ಟು ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ-ಹಳಿಯಾಳ ರಸ್ತೆಯ ಮೇಲೆ ಬೇಕವಾಡ ಕ್ರಾಸ್ ಬಳಿ ಇಂತಹದೊಂದು ಪ್ರಯತ್ನಕ್ಕೆ ವಿದ್ಯಾರ್ಥಿಗಳು ಕೈ ಹಾಕಿರುವುದು ಕಂಡು ಬಂದಿದೆ.ತಮ್ಮ ಶಾಲಾ ಕಾಲೇಜುಗಳಿಗೆ ಇಲ್ಲಿಯ ಸುಮಾರು 30 ರಿಂದ 40 ವಿದ್ಯಾರ್ಥಿಗಳು ನಂದಗಡ, ಖಾನಾಪೂರ, ಬೆಳಗಾವಿಗೆ ಪ್ರತಿದಿನ ಹೋಗಿ ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಈ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತಿದೆ.
ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ತಮ್ಮ ಜೀವವನ್ನೆ ಒತ್ತಿಇಟ್ಟು ನಮ್ಮ ಕರ್ನಾಟಕದ ಸರ್ಕಾರದ ಸರ್ಕಾರಿ ಬಸು ಹಿಡಿಯಲು ಓಟನ ಒಂದು ಪ್ರಸಂಗಸೋಮವಾರ ಬೆಳ್ಳಿಗೆ 8.30 ಕ್ಕೆ ಬೇಕವಾಕ ಕ್ರಾಸ್ ಬಳಿ ಕಾಲೇಜಿನ ವಿದ್ಯಾರ್ಥಿಗಳು *ಕೆ.ಎ.೪೨/ಎಫ್ ೧೦೯೬* ಬಸ್ಸು ಹಿಡಿಯಲು ಮಾಡಿದ ಸಾಹಸ ನೋಡಿ ನಮ್ಮ ರಾಜ್ಯದಲ್ಲಿ ಶಿಕ್ಷಣ ಪಡೆಯಬೇಕಾದರೆ ಹೀಗೆ ಜೀವ ಪಣಕ್ಕಿಟ್ಟು ಕಲಿಯಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಮಾರ್ಗವಾಗಿ ಬರುವ ಬಸ್ಸಿಗೆ *ಬೇಕವಾಡ ಕ್ರಾಸ್ ಗೆ ನಿಲ್ಲಿಸುವ ಪ್ರಯತ್ನ ಮಾಡಿದ ವಿದ್ಯಾರ್ಥಿಗಳು* ಇದನ್ನು ನೋಡಿ ಸಿನಿಮೆಯ ರೀತಿಯಲ್ಲಿ ಬಚಾವಾಗಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಬಸ್ಸ ಚಾಲಕ ಬಸ್ ನ್ನು ಯಾವುದೇ ಪರಿಸ್ಥಿತಿಯೂ ನಿಲ್ಲಿಸಿ, ಕಾಲೇಜು ವಿದ್ಯಾರ್ಥಿಗಳ ಸಾಹಸ ಇದು ಯಾವ ಸಿನಿಮಾದಲ್ಲೂ ನೊಡದ ಪ್ರಸಮಗ ಇದು. ಮಾನವಿಯತೆ ಎನ್ನೆ ಮರೆತ ಬಸ್ ಚಾಲಕನ ವರ್ತನೆ ಇದು.
ನಮ್ಮ ಖಾನಾಪೂರ ತಾಲೂಕಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಪಡುತ್ತಿರುವ ಪರದಾಟ ಇದನ್ನು ನಮ್ಮ ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಗಮನಿಸುತ್ತಾರೊ ಇಲ್ಲವೋ ಕಾದುನೋಡಬೇಕು.
Leave a Comment