
ಜೋಯಿಡಾ –
ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಧನಾ ಶಶಿಕಾಂತ ಹೆಗಡೆ ಮುಂಡಗೋಡದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚೆಸ್ ಪಂದ್ಯಾಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಇವಳ ಈ ಸಾಧನೆಗೆ ಪಾಲಕರು ಮತ್ತು ಶಾಲೆಯ ಮುಖ್ಯ ಶಿಕ್ಷಕ ಫಕೀರಪ್ಪ ದರಿಗೊಂಡ,ಹಾಗೂ ಎಸ,ಡಿ,ಎಮ್,ಸಿ, ಅದ್ಯಕ್ಷ ಸದಾನಂದ ಉಪಾಧ್ಯ, ಹಾಗೂ ಸಹಶಿಕ್ಷಕರು ಅಭಿನಂದಿಸಿದ್ದಾರೆ.


Leave a Comment