
ಖಾನಾಪುರ
ನಂದಗಡ-ಖಾನಾಪೂರ ನಡುವಿನ ಕೌಂದಲ್ ಗ್ರಾಮದ ಹತ್ತಿರ ಹೆದ್ದಾರಿ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾನಾಪುರ ವಲಯ ಅರಣ್ಯ ಇಲಾಖೆ ನಿರ್ಮಿಸಿದ ಟ್ರೀ ಪಾರ್ಕಗೆ ವರ್ಷ ಕಳೆದರು ಅರಣ್ಯ ಇಲಾಖೆ ನಿರ್ಲಕ್ಷದಿಂದ ಇನ್ನು ಬಿಡುಗಡೆ ಭಾಗ್ಯ ಕಂಡಿಲ್ಲ್ಲ.
ಅರಣ್ಯ ಇಲಾಖೆ ಇದನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿತ್ತು. ಚುನಾವಣೆ ಮುಗಿದ ನಂತರ ಲೋಕಾರ್ಪಣೆಗೊಳಿಸಬೇಕಾಗಿತ್ತು. ಆದರೆ ಇವತ್ತಿಗೂ ಯಾವ ಅಧಿಕಾರಿಗಳು ಇದನ್ನು ಉಧ್ಘಾಟಿಸಬೇಕು ಎನ್ನುವತ್ತ ಗಮನ ಹರಿಸುತ್ತಿಲ್ಲ. ಅರಣ್ಯ ಇಲಾಖೆ ನೀಡಿದ ಅನುದಾನ ಏನೊ ಬಳಿಕೆಯಾಗಿದೆ. ಆದರೆ ಸಾರ್ವಜನಿಕರಿಗೆ ಅದನ್ನು ಮುಕ್ತ ಗೊಳಿಸಿಲ್ಲ. ಬಿಡುಗಡೆ ಭಾಗ್ಯ ಕಾಣದೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹಲವು ಸಾಮಗ್ರಿಗಳು ತುಕ್ಕು ಹಿಡಿಯುತ್ತ ಸಾಗಿವೆ.
ಅರಣ್ಯ ಇಲಾಖೆ ಇಲ್ಲಿ 41 ಹೆಕ್ಟರ ಭೂಮಿ ಹೊಂದಿದ್ದು ಅಂದರೆ ಕನಿಷ್ಟ 102 ಏಕರ ಇದರ ಸ್ವಾಧಿನದಲ್ಲಿದೆ. ಇಷ್ಟು ವಿಸ್ತೀರಣದಲ್ಲಿ 5 ಎಕರ ಮಾತ್ರ ಬಳಿಸಿ ಟ್ರೀ ಪಾರ್ಕ ನಿರ್ಮಾಣ ಮಾಡಲಾಗಿದೆ.
ಈ ಯೋಜನೆಗೆ ಅರಣ್ಯ ಇಲಾಖೆಯ ಹಿಂದಿನ ಹಿರಿಯ ಆಧಿಕಾರಿ ಎಸಿಎಫ್ ಸಿ.ಬಿ.ಪಾಟೀಲ ಮತ್ತು ಹಿಂದಿನ ಆರ್‍ಎಫ್‍ಒ ಎಸ್.ಎಸ್.ನಿಂಗಾಣ ಅವರ ಪ್ರಾಮಾಣಿಕ ಪರಿಶ್ರಮ ಬಹಳವಿದೆ. ಈ ಯೋಜನೆಗೆ ಇಲಾಖೆ ಅನುದಾನ ಮಾತ್ರ ದೊರಕಿದ್ದು ಕೇವಲ 20 ಲಕ್ಷ ರೂಪಾಯಿಗಳಲ್ಲಿ ಇದಕ್ಕೊಂದು ಒಳ್ಳೆಯ ರೂಪ ನೀಡಿದ್ದಾರೆ. ಇಲಾಖೆ ಯೋಜನೆಗಳಿಗೆ ಬಳಿಸಿ ಉಳಿಸಿದ ಹಣ ಕೂಡ ಇಲ್ಲಿ ಬಳಿಸಿ ಇನ್ನಷ್ಟು ಮೆರಗು ನೀಡಲಾಗಿದೆ. ಇದಕ್ಕೆ ಚಾಲನೆ ನೀಡಿದ ಎಸಿಎಫ್ ಸಿ.ಬಿ.ಪಾಟೀಲ ನಿವೃತ್ತರಾದರು ಟ್ರೀ ಪಾರ್ಕ ಕನಸು ಕಟ್ಟಿ ಕೊಟ್ಟಿದ್ದಾರೆ. ಈ ಕನಸಿಗೆ ರೂಪ ನೀಡಿದ ಆರ್‍ಎಫ್‍ಒ ನಿಂಗಾಣಿ ಲೋಂಡಾಕ್ಕೆ ವರ್ಗಾವಣೆಯಾದರು. ಇದರಿಂದ ಟ್ರೀ ಪಾರ್ಕ ಕೆಲಸಗಳು ನಿಧಾನ ಗತಿಯಲ್ಲಿ ಸಾಗಿದವು ಎನ್ನಬಹುದು.

ಇಲ್ಲಿ ಏನೇನಿದೆ ;
ಟ್ರೀ ಪಾರ್ಕ ಒಳಗಡೆ ಕಾಲಿಟ್ಟರೆ ದಟ್ಟ ಅರಣ್ಯ ಪರಿಸರ ಅನುಭವವಾಗುತ್ತದೆ. ಟ್ರೀ ಪಾರ್ಕನಲ್ಲಿ ಹಲವು ವಿವಿದ ಆಯುರ್ವೆದ ದಿವ್ಯ ಜೌಷಧಿಗಳ ಸಸಿಗಳನ್ನು ಬೆಳಿಸಿ ಪೋಷಣೆ ಮಾಡಲಾಗಿದೆ. ಒಳಗೆ ಕಾಲಿಟ್ಟರೆ ಹಲವು ದಿವ್ಯ ಜೌಷಧಿಗಳ ಪರಿಚಯ ಜನರಿಗೆ ಆಗುತ್ತದೆ. ಟ್ರೀ ಪಾರ್ಕನಲ್ಲಿ ಬರುವ ಮಕ್ಕಳು ಸಾಹಸದಲ್ಲಿ ತೊಡಗಿ ಕೊಳ್ಳಲು ಹಲವು ರೋಚಕ ಆಟದ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದರಲ್ಲಿ ಪ್ರಮುಖವಾಗಿ ಹಗ್ಗ ನಡಿಗೆ ಮತ್ತು ಕಟ್ಟಿಗೆ ತುಂಡಿನ ಮೇಲಿನ ಸಾಹಸಗಳು ರೋಚಕವಾಗಿವೆ. ಮಕ್ಕಳಿಗೆ ಮಜವಾಗಿ ಆಡಲು ಜೋಕಾಲಿ ತಿರುಗಣಿ ಮತ್ತು ಜಾರು ಬಂಡಿ ಕೂಡನಿರ್ಮಿಸಲಾಗಿದೆ. ಕುಟುಂಬ ಸಮೇತ ತೆರಳಿದರೆ ಮಜವಾಗಿ ಸಮಯ ಕಳೆಯಬಹುದಾಗಿದೆ. ಮಕ್ಕಳಂತು ಇಲ್ಲಿ ಬಂದರೆ ಅವರಿಗೆ ಅದು ಸ್ವರ್ಗವೆ ಸರಿ.
ನಿತ್ಯ ಪರಿಸರ ಮಾಲಿನ್ಯದಲ್ಲಿ ಸಂಚರಿಸುವರಿಗೆ ಶುದ್ಧ ಆಮ್ಲಜನಕ ಸೇವನೆ ಇಲ್ಲಿ ಮಾಡಬಹುದು. ಪಾರ್ಕ ಒಳಗಡೆ ಒಂದು ಬಂಡೆಯನ್ನು ಸುತ್ತಲಿನ ಹಳ್ಳಿ ಗ್ರಾಮಸ್ಥರು ಹೊಂಡ ದೇವರು ಎಂದು ಪೂಜಿಸುತ್ತಾರೆ. ಇಲ್ಲಿ ಗ್ರಾಮೀಣ ಜನಪದ ಸೊಬಗಿನ ಸೊಗಡು ತೋರಿಸುವ ರಾಕ್ ಗಾರ್ಡನ ನಿರ್ಮಾಣ ಮಾದರಿ ಮಾಡಿದರೆ ಇದು ಇನ್ನು ಹೆಚ್ಚು ಆಕರ್ಷಣೆಯಾಗುತ್ತದೆ.

ನೂತನವಾಗಿ ಆಗಮಿಸಿರುವ ಎಸಿಎಫ್ ಶಶಿಧರ ಇದಕ್ಕೆ ಮುತುವರ್ಜಿ ವಹಿಸಿದ್ದಾರೆ. ಸರಕಾರದ ಹಣ ಇದಕ್ಕೆ ಸದಬಳಕೆಯಾಗಿದೆ. ಈಗಿನ ಅಧಿಕಾರಿಗಳು ಉದ್ಘಾಟನೆಗೆ ಯಾಕೆ ಮುಂದಾಗುತ್ತಿಲ್ಲ. ಇವರಿಗೆ ಯಾವುದಾದರೂ ರಾಜಕೀಯ ಒತ್ತಡವಿದೆಯೋ? ಬೆಳಗಾವಿ ಹಿರಿಯ ಅಧಿಕಾರಿಗಳಾದ ಸಿಸಿಎಫ್ ಮತ್ತು ಡಿಎಫ್‍ಒ ಇದರತ್ತ ಚಿತ್ತ ಹರಿಸ ಬೇಕಿದೆ.
ಕೋಟ್ಸ್;
“ಟ್ರೀ ಪಾರ್ಕನಲ್ಲಿ ಟಿಕೇಟ್, ಪುಡ್ ಕೋಟ್ ತಾಯಾರಿಸಲಾಗುತ್ತಿದೆ. ಈಗಾಗಲೇ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲಿಯೇ ಟ್ರೀ ಪಾರ್ಕ ಉದ್ಘಾಟಿಸಲಾಗುವುದೆಂದು” ಖಾನಾಪುರ ವಲಯ ಎಸಿಎಫ್ ಶಶಿಧರ ತಿಳಿಸಿದ್ದಾರೆ”.
“ಟ್ರೀ ಪಾರ್ಕ ನಿರ್ಮಾವಾಗಿದ್ದರು ಅರಣ್ಯ ಇಲಾಖೆ ಉದ್ಘಾಟನೆಗೆ ಯಾಕೆ ಮುಂದಾಗುತಿಲ್ಲ. ತಕ್ಷಣ ಟ್ರೀ ಪಾರ್ಕ ಲೋಕಾರ್ಪಣೆಗೊಳಿಸಿ ಸಾರ್ವಜನಿಕರಿಗೆ ವಾಯು-ವಿಹಾರ ಕೈಗೊಳ್ಳಲು ಅನುವು ಮಾಡಿಕೊಡಬೇಕು.
ಈಶ್ವರ.ಜಿ.ಸಂಪಗಾವಿ, ಗೌರವ ಅಧ್ಯಕ್ಷರು ಕಸಾಪ ಖಾನಾಪುರ
Leave a Comment