
ಹಳಿಯಾಳ:- ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಓದು ಮತ್ತು ಅಧ್ಯಯನಕ್ಕೆ ವಯಸ್ಸಿನ ಮೀತಿ ಇರದ ಕಾರಣ ಪ್ರತಿಯೊಬ್ಬರು ಅಧ್ಯಯನ ನಿರತರಾಗಿರಬೇಕು. ಇನ್ನೋಬ್ಬರ ಅನುಭವಗಳನ್ನು ಓದಿ ಅನುಭಾವಿಗಳಾಗಬೇಕೆಂದು ಕರ್ನಾಟಕ ರಾಜ್ಯ ಕಾರ್ಯನೀರತ ಪತ್ರಕರ್ತರ ಸಂಘದ ಹಿರಿಯ ಸದಸ್ಯೆ ಹಾಗೂ ಹಳಿಯಾಳ ಸಂಘದ ಮಾಜಿ ಅಧ್ಯಕ್ಷೆ ಸುಮಂಗಲಾ ಅಂಗಡಿ ಕರೆ ನೀಡಿದರು.

ಪಟ್ಟಣದ ಅಂಚಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ” ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಚರ್ಚೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದರು.
ಸರ್ಕಾರದ ಏಳು-ಬಿಳುಗಳಲ್ಲೂ ಮಹತ್ವದ ಪಾತ್ರ ವಹಿಸುವ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ತನ್ನದೇ ಆದ ಮಹತ್ವವಿದೆ. ದೃಶ್ಯ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮ ಸಾರ್ವಜನೀಕ ಜನಜೀವನದಲ್ಲಿ ಸಾಕಷ್ಟು ಪಾತ್ರ ವಹಿಸುತ್ತದೆ. ಪ್ರಮುಖವಾಗಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಹೊಸದನ್ನು ಕಲಿಯುವ ಹುಮ್ಮಸ್ಸು ಇರಬೇಕು ಜೀವನದಲ್ಲಿ ಹಿಂದೆ ಗುರು ಮುಂದೆ ಗುರಿಯನ್ನು ಇಟ್ಟುಕೊಂಡು ಪ್ರಯತ್ನಶೀಲರಾಗಿ ಕಠಿಣ ಶ್ರಮಪಟ್ಟರೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದರು.
ಹಳಿಯಾಳ ಕಾರ್ಯನೀರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಯೋಗರಾಜ ಎಸ್.ಕೆ. ಮಾತನಾಡಿ ಇಂದು ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದರು ಸಹಿತ ದಶಕಗಳಿಂದ ಗ್ರಾಮಾಂತರ ಭಾಗದಿಂದ ಹಿಡಿದು ದೇಶ ವಿದೇಶಗಳ ಸುದ್ದಿಯನ್ನು, ಅಂಕಣಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಮಾಹಿತಿಗಳನ್ನು ಹೊತ್ತು ಪತ್ರಿಕೆಗಳು ಬೆಲೆ ಏರಿಕೆ ಮಾಡದೆ ಕೇವಲ 3 ರಿಂದ 5 ರೂ. ವೆಚ್ಚದಲ್ಲಿ ಸಾರ್ವಜನೀಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದರು ಸಹಿತ ಜನರು ಪತ್ರಿಕೆಗಳನ್ನು ಖರೀದಿಸಿ ಓದಲು ಆಸಕ್ತಿ ತೊರದೆ ಇರುವುದು ಬೇಸರದ ಸಂಗತಿ ಎಂದರು.

ಇನ್ನೂ ರಾಜ್ಯದಲ್ಲಿರುವ ನೂರಾರು ಪತ್ರಿಕೆಗಳಲ್ಲಿ ಎಸ್.ಎಸ್.ಎಲ್.ಸಿ ಯಿಂದ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೇ ಪತ್ರಿಕೆಗಳು ಹಾಗೂ ಆಯ್ದ ಪ್ರಮುಖ ವಿಷಯಗಳ ಕುರಿತು ಪ್ರತಿದಿನ ಪ್ರಕಟಿಸಲಾಗುತ್ತದೆ ಇವುಗಳನ್ನು ಸಂಗ್ರಹಿಸಿದರೇ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದ ಯೋಗರಾಜ ಎಲ್ಲ ಕ್ಷೇತ್ರಗಳ ಕುರಿತು ಮಾಹಿತಿ ನೀಡುವ ಪತ್ರಿಕೆಗಳ ಸದುಪಯೋಗ ಪಡೆಯಿರಿ ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಿಜಯ ಸಂದೇಶ ವಾರಪತ್ರಿಕೆಯ ಗೌರವ ಸಂಪಾದಕರಾದ ಚಂದ್ರಕಾಂತ ಅಂಗಡಿ ಹಾಗೂ ವರದಿಗಾರ ಕೃಷ್ಣಾ ಕಟ್ಟಿ ಅವರು ಮಾತನಾಡಿ ಜೀವನದಲ್ಲಿ ಪತ್ರಿಕೆಗಳ ಮಹತ್ವ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ಲಮಾಣಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿನ ಪ್ರಮುಖ ವಿಷಯಗಳನ್ನು ಸಂಗ್ರಹ ಮಾಡಿ ಕಾಲಕಾಲಕ್ಕೆ ಅವುಗಳನ್ನು ಮೆಲಕು ಹಾಕಿದರೇ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಸಾಕಷ್ಟು ಸಹಾಯವಾಗುತ್ತದೆ ಎಂದರು.

ಸಂವಾದದಲ್ಲಿ ವಿದ್ಯಾರ್ಥಿಗಳು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಸೆಲೆಬ್ರೆಟಿಗಳ ಕುರಿತು ಹೆಚ್ಚು ಸುದ್ದಿ ಪ್ರಕಟವಾಗುತ್ತವೆ, ಕೆಲವರನ್ನು ಮಾತ್ರ ವೈಭವಿಕರಿಸುವ ಕೆಲಸವಾಗುತ್ತದೆ ಸೇರಿದಂತೆ ಅನೇಕ ಪ್ರಶ್ನೇಗಳನ್ನು ಕೇಳಿದರು ಇದಕ್ಕೆ ಪತ್ರಕರ್ತರು ಸಮಂಜಸ ಉತ್ತರಗಳನ್ನು ನೀಡುವ ಮೂಲಕ ಸಂವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಕಾಲೇಜಿನ ಪ್ರೊ.ಡಾ.ಮಾಲತಿ ಸಿ ಹಿರೇಮಠ, ಪತ್ರಕರ್ತರಾದ ಮಧುರಾ ಬಡಿಗೇರ, ನಿಲೇಶ ಮಹಾಜನ, ಮಾರುತಿ ಖಾನಾಪುರ ಇದ್ದರು.

Leave a Comment