
ಹಳಿಯಾಳ:- ಪಟ್ಟಣದ ರೈತರ ಸೇವಾ ಸಹಕಾರಿ (ಆರ್‍ಎಸ್‍ಎಸ್) ಸಂಘದÀಲ್ಲಿ ಅವ್ಯವಹಾರ ನಡೆದಿದ್ದು ಕಲಂ 64ರ ಅಡಿ ತನಿಖೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ತಾವು ಹಾಗೂ ಉಳಿದ ಸದಸ್ಯರು ಯಾವುದೇ ತನಿಖೆಗೂ ಹೆದರುವುದಿಲ್ಲ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಹಳಿಯಾಳದ ಆರ್.ಎಸ್.ಎಸ್.ಸಂಘದ ಸದಸ್ಯರು ಆಗಿರುವ ಎಸ್.ಎಲ್.ಘೊಟ್ನೇಕರ ಸ್ಪಷ್ಟಪಡಿಸಿದರು.
ಪಟ್ಟಣದ ರೈತರ ಸೇವಾ ಸಹಕಾರಿ ಸಂಘ(ಆರ್‍ಎಸ್‍ಎಸ್) ಬ್ಯಾಂಕನಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಆರ್.ಎಸ್.ಎಸ್.ಸೊಸೈಟಿಯು ನಿರಂತರ ಲಾಭದಲ್ಲಿ ನಡೆದಿರುವುದನ್ನು ಸಹಿಸದ ಕೆಲವರು ರೈತರಿಗೆ ತಪ್ಪು ಮಾಹಿತಿ ನೀಡಿ ಅವರಿಂದ ಸಹಿಗಳನ್ನು ಪಡೆದು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ಇದು ರೈತರ ಆರೋಪವಲ್ಲ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ದುರುದ್ದೇಶ ಅಡಗಿದೆ ಎಂದು ಕಿಡಿ ಕಾರಿದ ಘೊಟ್ನೇಕರ ಈ ಸೊಸೈಟಿಯಿಂದ ತಾನು ಸ್ಪರ್ದೆ ಮಾಡಿ ಆಯ್ಕೆಯಾಗಿ ಕೆಡಿಸಿಸಿ ಬ್ಯಾಂಕಗೆ ಹೊಗುತ್ತಿರುವುದನ್ನು ತಪ್ಪಿಸುವ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಈಗಾಗಲೇ ಈ ಸೊಸೈಟಿಯು ತನ್ನ ವಾರ್ಷಿಕ ಅಡಾವೆ ಪತ್ರಿಕೆಯಲ್ಲಿ ಬ್ಯಾಂಕನ ವ್ಯವಹಾರ-ಲಾಭ-ನಷ್ಟದ ಕುರಿತು ಮಾಹಿತಿ ನೀಡಲಾಗಿದೆ. ರೈತರು ಬಂದು ಪರಿಶೀಲನೆ ಮಾಡಿನೊಡಲಿ ಇಲ್ಲಿ ಯಾರೊಬ್ಬರಿಗೂ ಮೊಸ ಮಾಡುವ ಪ್ರಶ್ನೇಯೇ ಇಲ್ಲ ಎಂದ ಘೊಟ್ನೇಕರ ಈ ಸೊಸೈಟಿಯ ಬಿಜೆಪಿ ಬೆಂಬಲಿತ ಸದಸ್ಯ ಹಾಗೂ ಹಾಲಿ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ಹಿಂದೆ ಸಂಘದ ಮೇಲೆ ಆರೋಪ ಮಾಡಿ ಅದನ್ನು ಸಾಬಿತು ಮಾಡಲಾಗದೆ ಸದಸ್ಯತ್ವದಿಂದ ಅನರ್ಹಗೊಂಡಿದ್ದನ್ನು ಸದ್ಯ ಆರೋಪ ಮಾಡುತ್ತಿರುವವರು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದರು.
ಇನ್ನೂ ಬಿಜೆಪಿ ಬೆಂಬಲಿತರ, ಮಾಜಿ ಶಾಸಕರ ತೆಕ್ಕೆಯಲ್ಲಿರುವ ಪಟ್ಟಣದ ಪಿಎಲ್‍ಡಿ ಬ್ಯಾಂಕ್ ನವರು ವಾರ್ಷಿಕ ಅಡಾವೆ ಪತ್ರಿಕೆ ಹೊರಡಿಸಲಿ ಇಲ್ಲದಿದ್ದರೇ ಅವರ ವಿರುದ್ದ ಹಾಗೂ ಸಹಕಾರಿ ಸಂಘ(ಸೊಸೈಟಿ)ಗಳ ವಿರುದ್ದ ವಿನಾಃಕಾರಣ ತಪ್ಪು ಹೊರಿಸುತ್ತಾ, ಸುಳ್ಳು ಆಪಾದನೆಗಳನ್ನು ಮಾಡುತ್ತಾ ಹೊದರೇ, ಅಂತಹವರ ವಿರುದ್ದವೂ ಹಳಿಯಾಳ ತಾಲೂಕಿನ 13 ಸೊಸೈಟಿಗಳಿಂದ ತಮ್ಮ ನೇತೃತ್ವದಲ್ಲಿ ಊಗ್ರ ಹೋರಾಟ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಆರ್‍ಎಸ್‍ಎಸ್ ಸಂಘದ ಅಧ್ಯಕ್ಷ ಶಿವಪುತ್ರಪ್ಪ ನುಚ್ಚಂಬ್ಲಿ ಮಾತನಾಡಿ ಶತಮಾನೋತ್ಸವ ಆಚರಿಸಿರುವ ಈ ಸಂಘವು 3900ಕ್ಕೂ ಹೆಚ್ಚು ಶೇರುದಾರರನ್ನು ಹಾಗೂ 13 ಸದಸ್ಯರನ್ನು ಹೊಂದಿದ್ದು ಹಳಿಯಾಳ ಪಟ್ಟಣ ಸೇರಿ 19 ಗ್ರಾಮಗಳನ್ನು ಒಳಗೊಂಡಿದ್ದು ವಾರ್ಷಿಕ 26 ಕೋಟಿ ವಹಿವಾಟು ನಡೆಸುತ್ತಿದ್ದು ಯಾವುದೇ ಪಕ್ಷ ಭೇದವಿಲ್ಲದೇ ಎಲ್ಲ ರೈತರಿಗೂ ಸಾಲ ಸೌಲಭ್ಯ ನೀಡುವ ಮೂಲಕ ಸತತ ಲಾಭದಲ್ಲಿದೇ ಎಂದರು.

ಇನ್ನೂ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಕೆಡಿಡಿಸಿ ಬ್ಯಾಂಕ್‍ಗೆ ಹೊದ ಬಳಿಕ ತಾಲೂಕಿನ ಎಲ್ಲ ಸೊಸೈಟಿಗಳ ಚಿತ್ರಣವೇ ಬದಲಾಗಿದ್ದು ಎಲ್ಲ ರೈತರಿಗೂ ವಿವಿಧ ರೀತಿಯ ಸಾಲಸೌಲಭ್ಯಗಳನ್ನು ನೀಡುವ ಮೂಲಕ ಪ್ರೊತ್ಸಾಹನ ನೀಡಲಾಗುತ್ತಿದೆ ಎಂದರು.
14 ಕೋಟಿ 6ಲಕ್ಷ ರೂ. ಸಾಲ ಮನ್ನಾ ಹಣದಲ್ಲಿ 2154 ರೈತರು ಫಲಾನುಭವಿಗಳಿದ್ದು ಅದರಲ್ಲಿ ಈಗಾಗಲೇ 1714ರೈತರಿಗೆ 10ಕೋಟಿ 80ಲಕ್ಷಕ್ಕೂ ಅಧಿಕ ಹಣ ನೆರವಾಗಿ ಖಾತೆಗೆ ಜಮೆಯಾಗಿದ್ದು ಬಾಕಿ ಉಳಿದ 434 ರೈತರಿಗೆ 3ಕೋಟಿ 26 ಲಕ್ಷ ರೂ. ಬಿಡುಗಡೆಯಾಗಬೇಕಿದೆ ಎಂದರು.
ಸುದ್ದಿಗೊಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಸುಭಾಷ ಶಿಂಧೆ, ಅನಂತ ಘೊಟ್ನೇಕರ, ಪ್ರಭಾಕರ ಗಜಾಕೋಶ, ರುಕ್ಮಾ ಭಗವತಕರ, ರೇಷ್ಮಾ ಪಾಟೀಲ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಬಿ.ವೈ ಪವಾರ ಇದ್ದರು.
Leave a Comment