
ಹಳಿಯಾಳ:- ಇತಿಹಾಸದಲ್ಲೇ ಕಂಡು ಕೆಳರಿಯದ ಜಲಪ್ರವಾಹಕ್ಕೆ ಅರ್ಧಕ್ಕೂ ಹೆಚ್ಚು ರಾಜ್ಯ ತತ್ತರಿಸಿದೆ ಅದರಲ್ಲೂ ಉತ್ತರ ಕನ್ನಡ ಜಿಲ್ಲೆ 2 ರಿಂದ 3 ಬಾರಿ ಪ್ರವಾಹಕ್ಕೆ ತುತ್ತಾಗಿರುವ ಕಾರಣ ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ತಕ್ಷಣ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ವರುಣ ದೇವನ ಅವಕೃಪೆಯಿಂದ ಸಾವಿರಾರು ಕೋಟಿ ರೂ. ಆಸ್ತಿಪಾಸ್ತಿ ಹಾನಿಗಿಡಾಗಿದೆ ಅಲ್ಲದೇ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು ಕೂಡ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೊರುತ್ತಿದೆ ಎಂದು ಆಪಾದಿಸಿದರು.
ಕೇಂದ್ರ ಸಕಾರಕ್ಕೆ ರಾಜ್ಯದ ಬಗ್ಗೆ ಕರುಣೆಯೇ ಇಲ್ಲವಾಗಿದೆ ಎಂದ ಅವರು ರಾಜ್ಯದ 26 ಲೋಕ ಸಭಾ ಸಂಸದರು ರಾಜ್ಯದ ವಿಪತ್ತಿನ ಬಗ್ಗೆ ಕೇಂದ್ರದ ಗಮನ ಸೆಳೆಯಲು ವಿಫಲರಾಗಿದ್ದಾರೆಂದರು. ಇನ್ನೂ ಇಂತಹ ದೊಡ್ಡ ವಿಪತ್ತು ಬಂದು ತಿಂಗಳುಗಳೇ ಕಳೆದರು ಪರಿಹಾರ ಹಣ ನೀಡಲು ಮಿನಮೇಷ ಮಾಡುತ್ತಿರುವ ಕೇಂದ್ರದ ನಡೆ ನೋಡಿದರೇ ರಾಜ್ಯ ಸರ್ಕಾರದ ಜೊತೆ ಜೊತೆಗೆ ಕೇಂದ್ರ ಸರ್ಕಾರದ ಖಜಾನೆಯು ಖಾಲಿ ಆಗಿದೆಯೇ ಎಂಬ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಘೊಟ್ನೇಕರ ವ್ಯಂಗ್ಯವಾಡಿದರು.
ನೋಟ ಅಮಾನ್ಯ ಹಾಗೂ ಜಿಎಸ್‍ಟಿಯಿಂದ ದೇಶ ಸಾಕಷ್ಟು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದೆ. ಉದ್ದಿಮೆ ರಂಗ ಸಾಕಷ್ಟು ನಷ್ಟದಲ್ಲಿ ನಡೆಯುತ್ತಿದ್ದು ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಜನಸಾಮಾನ್ಯರ ಬದುಕು ದುಸ್ತರವಾಗಿದೆ ಅಲ್ಲದೇ ಸಾವಿರಾರು ಕಂಪೆನಿಗಳು ಬಾಗಿಲು ಮುಚ್ಚುತ್ತಿರುವುದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆದರೇ ಆಶ್ಚರ್ಯ ಪಡಬೇಕಿಲ್ಲ ಎಂದ ಘೊಟ್ನೇಕರ ಮೋದಿ ಹಾಗೂ ಬಿಜೆಪಿ ಕೇವಲ ಭಾಷಣ ಶೂರರು ಇವರು ಅಭಿವೃದ್ದಿ ಮಾಡುವವರಲ್ಲ ಹಾಗೂ ಜನರಿಗೆ ರೇಷನ್ ಕೊಡುವವರಲ್ಲ ಎಂದು ಟಿಕಿಸಿದ ಅವರು ಈಗಾಗಲೇ ಬಿಜೆಪಿ ಆಡಳಿತಕ್ಕೆ ಬೆಸತ್ತು ಹರಿಯಾಣಾ ಹಾಗೂ ಮಹಾರಾಷ್ಟ್ರದಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಮುಂದೆ ಕರ್ನಾಟಕದಲ್ಲಿ ಮತ್ತೇ ಕಾಂಗ್ರೇಸ್ ಪಕ್ಷವೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಘೋಟ್ನೇಕರ ಭವಿಷ್ಯ ನುಡಿದರು.
ಹಳಿಯಾಳ ಪಟ್ಟಣ ಎಲ್ಲಾ ರಂಗದಲ್ಲಿಯೂ ವೇಗವಾಗಿ ಪ್ರಗತಿ ಹೊಂದುತ್ತಿರುವ ಕಾರಣ ಇಲ್ಲಿ ಎಲ್ಲ ಸೌಲಭ್ಯಗಳನ್ನು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿರುವ ಕಾರಣ ಹಳಿಯಾಳ ಪಟ್ಟಣಕ್ಕೆ ಒಳಚರಂಡಿ(ಯುಜಿಡಿ) ತೀರಾ ಅವಶ್ಯಕವಾಗಿದೆ. ಈಗಾಗಲೇ ಯುಜಿಡಿ ಕಾಮಗಾರಿ ಆರಂಭವಾಗಬೇಕಿತ್ತು ಆದರೇ ಕೆಲವರು ಇದಕ್ಕೆ ಅಪಸ್ವರ ಎತ್ತಿರುವುದು ಖಂಡನೀಯ ಎಂದರು.
ಸರ್ಕಾರದಿಂದ ಅನುದಾನ ಮಂಜೂರಿ ಮಾಡಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು ಈಗಾಗಲೇ ಯುಜಿಡಿ ಕಾಮಗಾರಿಗೆ 76 ಕೋಟಿ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿ ಅಡ್ಡಗಾಲು ಹಾಕಿರುವುದು ಸರಿಯಲ್ಲ. ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ತಾಕತ್ತಿದ್ದರೇ ರಾಜ್ಯ ಮತ್ತು ಕೇಂದ್ರದಲ್ಲಿ ಅವರದೇ ಬಿಜೆಪಿ ಸರ್ಕಾರವಿರುವುದರಿಂದ ಬೇಡವಾಗಿರುವ ಈ ಕಾಮಗಾರಿಯನ್ನು ರದ್ದುಗೊಳಿಸಿಕೊಂಡು ಬರಲಿ ನೋಡೊಣ ಎಂದು ಸವಾಲ್ ಹಾಕಿದರು.

Leave a Comment