
ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.ತುಂಬಿದೆ ಪ್ರಕೃತಿಯ ಹಸಿರು,ಉಸಿರಾಡುತಿದೆ ನನ್ನೆದೆಯ ಉಸಿರು.ಹುಟ್ಟು ಎಂದರೆ ಇಲ್ಲಿ ಪಡೆಯುವೆನು,ಎದೆ ತಟ್ಟಿ ಹೇಳುವೆನು ಎಂದಿಗೂ ಗೋಕರ್ಣಿಗನು ನಾನು.
ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.
ಲೋಕ ಸಂಚಾರಿ ನಾರದ ಮುನಿಗಳ ಜಾಣತನವು,ಆದಿ ಪೂಜಿತ ಗಣಪನು ಧರಿಸಿ ಬಂದ ವಟು ವೇಷವು.ರಾವಣನಿಗೆ ನೀಡಿದ ಆತ್ಮಲಿಂಗವುಈ ವಲಯದಿ ಭೂ ಸ್ಪರ್ಶವಾಗಿದೆ,ಪರಶಿವನ ಲೀಲೆ ಈ ಕ್ಷೇತ್ರಕ್ಕೆ ತುಂಬಿದೆ.ಲಂಕೆಗೆ ಹೋಗದ ಆತ್ಮಲಿಂಗವು,ಈಗ ಪುರಾಣ ಪ್ರಸಿದ್ಧಕ್ಷೇತ್ರ ಗೋಕರ್ಣವು.
ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.
ಭೂಕೈಲಾಸ ಎಂಬ ಹೆಸರಿನ ಸುಂದರ ತಾಣವಿದು,ಗ್ರಾಮ ದೇವತೆ ಭದ್ರಕಾಳಿ ದೇವಿ ನೆಲೆಸಿದ ಕ್ಷೇತ್ರವಿದು.ಉಪವಾಸ ಜಾಗರಣೆ ಶಿವಪೂಜೆ ಮಾಡುವ ಶಿವರಾತ್ರಿ,ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸುವ ನವರಾತ್ರಿ.ದೈವ ಆರಾಧನೆಯ ಭಕ್ತಿಗೆ ಇರುವ ಹಲವಾರು ದೇವಾಲಯಗಳು,ಒಂದಕ್ಕಿಂತ ಒಂದು ಸುಂದರವಾಗಿ ಕಾಣುವ ಕಡಲತೀರಗಳು.
ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.
ಗ್ರಾಮೀಣ ಬದುಕಿನ ಸೊಗಡಿನ ಮೌಲ್ಯದಹಾಲಕ್ಕಿ ಒಕ್ಕಲಿಗರ ಸುಗ್ಗಿಹಬ್ಬ,ಚಿನ್ನಾಭರಣ ಭೂಷಿತವಾದ ಪುಷ್ಪಾಲಂಕರಿತ ಕಳಸವನ್ನು ಸಂಚರಿಸುವ ಭದ್ರಕಾಳಿ ಬಂಡಿಹಬ್ಬ.ಗೋಕರ್ಣ ಜನತೆ ಈ ಗ್ರಾಮಕ್ಕೆ ಎದೆತುಂಬಿದೆ,ಅತಿಥಿಗಳನ್ನು ಗೌರವಿಸಿ ಮಾತನಾಡಿಸುವ ಗುಣಹೊಂದಿದೆ.ಪ್ರವಾಸದ ಹೆಸರಿಗೆ ನೀ ವಿಳಾಸವಾದರೆ,ಬೇಸರ ಮೂಡುವುದು ಮರಳಿ ಹೋದರೆ.
ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.
ಖ್ಯಾತ ಸಾಹಿತಿ ವಿಜ್ಞಾನಿಗಳ ಹುಟ್ಟುರು ಇದಾಗಿದೆ,ವಿಶ್ವದಾದ್ಯಂತ ಇವರುಗಳ ಹೆಸರಾಗಿದೆ.ಅಂದ ಚೆಂದದ ನನ್ನ ಊರಿನ ಲಾವಣ್ಯಕ್ಕೆ ನಾ ಮರಳಾಗುವೆ,ಮನಸಿನ ಪುಟದಲಿ ಎಂದೂಗೋಕರ್ಣದ ನೆನಪನೆ ಬರೆಯುವೆ.ಇಂತ ಪುಣ್ಯ ಮಣ್ಣಿನಲ್ಲಿ ಹುಟ್ಟಿದಈ ನನ್ನ ಜನ್ಮ ಪಾವನ,ಎಂದಿಗೂ ಮನಸಾರೆ ಪ್ರೀತಿಸುವೆನುಈ ನನ್ನಯ ಗೋಕರ್ಣ.
Leave a Comment