
ಜೋಯಿಡಾ –
ಜೋಯಿಡಾ ತಾಲೂಕಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವಜನ ಮೇಳದ ಪೂರ್ವ ಸಿದ್ಧತೆಯ ಕುರಿತು, ಬುಧವಾರದಂದು ತಾಲೂಕಿನ ಶ್ರೀರಾಮ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಶೈಲಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೋಯಿಡಾದಲ್ಲಿ ಪ್ರ ಪ್ರಥಮವಾಗಿ ನಡೆಯುವ ಯುವಜನ ಮೇಳವನ್ನು ಯಶಸ್ವಿಯಾಗಿ ನಡೆಯುವಂತೆ ಚರ್ಚಿಸಲಾಯಿತು. ಯುವಜನಮೇಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಖಾರಿ ಜಿ ಗಾಯತ್ರಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಾಗೆಯೆ ವೇದಿಕೆ ಸಮೀತಿ, ಊಟೋಪಚಾರ ಸಮೀತಿ, ವಸತಿ ಸಮೀತಿ ವಿವಿದ ಸಮಿತಿಗಳ ಕುರಿತು ಚರ್ಚಿಸಲಾಯಿತು. ಪಾಲ್ಗೊಳ್ಳುವ ವಿವಿಧ ತಾಲೂಕುಗಳ ಸ್ಪರ್ಧಾಳುಗಳಿಗೆ ವಸತಿ ಊಟ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಅಚ್ಚು ಕಟ್ಟಾಗಿ ನಡೆಯುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ತಾಲೂಕಾ ಪಂಚಾಯತ ಸದಸ್ಯೆ ಅಲಕಾಂಜಾ ಮಂಥೆರೋ, ಗ್ರಾಮ ಪಂಚಾಯತ ಸದಸ್ಯ ಸಂತು ಮಂಥೆರೋ, ಕಾರ್ಯನಿರ್ವಣಾಧಿಕಾರಿ ಆನಂದ ಬಡಕುಂದ್ರಿ, ಶಿಕ್ಷಣ ಇಲಾಖೆಯ ವ್ಯವಸ್ಥಾಪಕರಾದ ಸಂತೋಷ ಸಾಳುಂಕೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ, ಜೋಯಿಡಾ ಸಿಪಿಐ ಬಾಬಾ ಸಾಹೇಬ ಹುಲ್ಲನ್ನವರ. ಹಿರಿಯರಾದ ಪ.ವಿ ದೇಸಾಯಿ, ರಫಿಕ್ ಖಾಜಿ, ಶಕುಂತಲಾ ಹಿರೇಗೌಡರ, ಮಲ್ಹಾರ ಗೆಳೆಯರ ಬಳಗದ ಆಧ್ಯಕ್ಷ ಆಕಾಶ ಪವಾರ, ಶ್ರೀ ಕೃಷ್ಣ ಕ್ರೀಡಾ ಹಾಗೂ ಸಾಂಸ್ಕøತಿಕ ಸಂಘದ ಆಧ್ಯಕ್ಷ ರವಿ ಗೋಕಾಳಕರ, ಯುವ ಒಕ್ಕೂಟದ ಅಧ್ಯಕ್ಷ ವಿಶ್ವನಾತ ನಾಯ್ಕ ಹಾಗೂ ಇತರ ಗಣ್ಯರು ಉಪಸ್ತಿತರಿದ್ದರು. ಕ್ರೀಡಾಂಗಣ ಮೇಲ್ವಿಚಾರಕ ಸಚಿನ ತಳೇಕರ ಸ್ವಾಗತಿಸಿದರೆ ತರಬೇತುದಾರ ಪ್ರಕಾಶ ರೇವಣಕರ ವಂದಿಸಿದರು

Leave a Comment