
ಜೋಯಿಡಾ –
ದಟ್ಟವಾದ ಕಾಡು ,ಎತ್ತನೋಡಿದರತ್ತ ಹಚ್ಚ ಹಸಿರು,ಪಕ್ಷಿಗಳ ಕಲರವ,ಕಾಳಿನದಿಯ ಹರಿಯುವ ಪಕ್ಕದಲ್ಲಿಯೇ ಇದೆ ಬೃಹದಾಕಾರದ ಶಿವ ದೇವನ ಪ್ರಸಿದ್ದ ಜೋಯಿಡಾ ತಾಲೂಕಿನ ಕವಳಾ ಗುಹೆ.
ಜೋಯಿಡಾ ತಾಲೂಕಿನ ಪ್ರಸಿದ್ಧ ಕ್ಷೇತ್ರದಲ್ಲಿ ಒಂದಾದ ಕವಳಾ ಗುಹೆಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಶಿವರಾತ್ರಿಯ ದಿನದಂದು ಇಲ್ಲಿ ಪ್ರವೇಶ ಇರುವುದು ವಿಶೇಷವಾಗಿದೆ. ಶಿವರಾತ್ರಿಯಂದು ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಶಿವನ ದರ್ಶನ ಪಡೆದು ತಮ್ಮ ಕಷ್ಟಗಳನ್ನು ಪರಿಹರಿಸು ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.
ಗುಹೆಯೊಳಗೆ ಶಿವ –
ಕವಳಾ ಗುಹೆಯಲ್ಲಿ ವರ್ಷಕ್ಕೆ ಒಂದು ಬಾರಿ ಶಿವರಾತ್ರಿಯಂದು ಮಾತ್ರ ಶಿವನ ದರ್ಶನಕ್ಕೆ ಅವಕಾಶವಿದ್ದು,ಇಲ್ಲಿಗೆ ಬರಲು ಭಕ್ತರು ಮುಗಿಬೀಳುತ್ತಾರೆ, ಬೃಹದಾಕಾರದ ಕಲ್ಲಿನ ಗುಹೆಯಲ್ಲಿ ಶಿವಲಿಂಗವಿದ್ದು ,ಕಪ್ಪು ಮತ್ತು ನೆರಳೆ ಬಣ್ಣದಿಂದ ಕೂಡಿದ ಲಿಂಗವಾಗಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ಈ ಜಾತ್ರೆಗೆ ತಾತ್ಕಾಲಿಕ ವಿದ್ಯುತ್ ನೀಡಲಾಗಿದೆ.

ಇಕ್ಕಟ್ಟಾದ ದಾರಿ –
ಕವಳಾ ಗುಹೆಗೆ ಸಾಗಲು ಎರಡು ಮಾರ್ಗಗಳಿದ್ದು ಒಂದು ಜೋಯಿಡಾ ತಾಲೂಕಿನ ಪಣಸೋಲಿಯಿಂದ ಕಾಡಿನ ಮದ್ಯೆ ಸಾಗುವ ದಾರಿಯಾದರೇ ಇನ್ನೊಂದು ಅಂಬಿಕಾನಗರದ ನಾಗಝರಿಯಿಂದ ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಸಾಗಬಹುದಾಗಿದೆ ,ಅಲ್ಲದೇ ಕವಳಾ ಗುಹೆಯೊಳಗೆ ಶಿವನ ದರ್ಶನ ಪಡೆಯಲು ಇಕ್ಕಟ್ಟಾದ ದಾರಿ ಇದ್ದು ,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿವರಾತ್ರಿಗೆ ಬಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಕಾಯಬೇಕು ಶಿವನ ದರ್ಶನಕ್ಕೆ, ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯಲು ಸಾವಿರಾರು ಜನರು ಭಕ್ತಿಯಿಂದ ಕಾಯುವುದು ವಿಶೇಷ.ಪಣಸೋಲಿಯ ದಾರಿಯಿಂದ ಕವಳಾಗೆ ಬಂದರೆ ಬರುವಾಗ ಇಳಿಜಾರು ಹಾಗೂ ಹೋಗುವಾಗ ಘಟ್ಟವಾಗಿದೆ. ಆದರೆ ಅಂಬಿಕಾನಗರದಿಂದ ಬಂದರೆ ಬರುವಾಗ ಘಟ್ಟ ಹೋಗುವಾಗ ಇಳಿಜಾರು ಇದೆ. ಹೀಗಾಗಿ ಕೆಲ ಭಕ್ತರು ಖಾಸಗಿ ವಾಹನದಲ್ಲಿ ಪಣಸೋಲಿ ಯಿಂದ ಬಂದು ಅಂಬಿಕಾನಗರದ ಮೂಲಕ ಸಾಗುತ್ತಾರೆ. ಹೀಗೆ ಮಾಡುವುದರಿಂದ ಘಟ್ಟ ಎರುವ ಸಮಸ್ಯೆ ಇರುವುದಿಲ್ಲ.
ಅರಣ್ಯ ಇಕಾಕೆಯಿಂದ ನೀರಿನ ವ್ಯವಸ್ಥೆ-
ಜೋಯಿಡಾ ತಾಲೂಕು ಹೆಚ್ಚಿನ ಪ್ರದೇಶ ಅರಣ್ಯವೇ ಆಗಿದ್ದರಿಂದ ಇಲ್ಲಿ ಅರಣ್ಯ ಇಲಾಕೆ ಕಾಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಶಿವರಾತ್ರಿ ಯಂದು ಕವಳಾಗೆ ಸಾಗುವ ಭಕ್ತರಿಗೆ ನೀರು ಹಾಗೂ ಬೆಲ್ಲ ವಿತರಿಸುತ್ತಾರೆ. ಘಟ್ಟ ಪ್ರದೇಶದಲ್ಲಿ ಭಕ್ತಾಧಿಗಳಿಗೆ ನೀರಿನ ವ್ಯವಸ್ಥೆ ಅರಣ್ಯ ಇಲಾಕೆ ಕಲ್ಪಿಸಿದೆ. ಅರಣ್ಯಕ್ಕೆ ಯಾರು ಬೆಂಕಿ ಹಾಕಬಾರದು ಎಂದು ತಿಳುವಳಿಕೆ ನೀಡಿದೆ.ಕಾಡಿನ ಮದ್ಯದಲ್ಲಿ ಅರಣ್ಯ ಇಲಾಕೆ ಸಿಬ್ಬಂದಿಗಳು ಬೆಂಕಿಯಿಂದ
ಸಾವಿರಾರು ಭಕ್ತರ ಆಗಮನ –
ಜೋಯಿಡಾ ಹಾಗೂ ದಾಂಡೇಲಿಯಿಂದ ಅಷ್ಟೇ ಅಲ್ಲದೆ ಹೊರ ಜಿಲ್ಲೆ,ರಾಜ್ಯಗಳಿಂದಲೂ ಶಿವರಾತ್ರಿಯಂದು ಜನರು ಇಲ್ಲಿಗೆ ಆಗಮಿಸುತ್ತಾರೆ. ಹಿಂದೆ ಜಾತ್ರೆಗೆ ಒಂದೆರಡು ಸಾವಿರ ಸಂಖ್ಯೆಯಲ್ಲಿ ಆಗುತ್ತಿದ್ದ ಜನರ ಸಂಖ್ಯೆ ಈಗ ಐವತ್ತು ಸಾವಿರ ಜನರ ಆಸುಪಾಸಿದೆ.

ಸಂಗಮೇಶ ಪಾಟೀಲ್ – ವಲಯ ಅರಣ್ಯಾಧಿಕಾರಿ ,ಫಣಸೋಲಿ
ಕವಳಾದಲ್ಲಿ ಶಿವರಾತ್ರಿ ದಿನದಂದು ಜಾತ್ರೆ ನಡೆಯುತ್ತದೆ. ಅರಣ್ಯ ಇಲಾಕೆಯಿಂದ ಭಕ್ತರಿಗೆ ಬೆಲ್ಲ,ನೀರು.ಕಡಲೆಕಾಯಿ ವಿತರಿಸಲಾಗುತ್ತದೆ, ಈ ಬಗ್ಗೆ ಜಾತ್ರೆಯಲ್ಲಿ ಏನು ತೊಂದರೆ ಆಗದಂತೆ ಪಣಸೋಲಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದೇವೆ.
ಪ್ರಭು ಗಂಗೋಳ್ಳಿ – ಸಿ.ಪಿ.ಐ.ದಾಂಡೇಲಿ
ವರ್ಷಕ್ಕೆ ಒಮ್ಮೆ ನಡೆಯುವ ಕವಳಾ ಜಾತ್ರೆಗೆ ,ಅರಣ್ಯ ಇಲಾಕೆ,ಹಾಗೂ ಸಂಭಂದಪಟ್ಟ ಎಲ್ಲಾ ಇಲಾಕೆಗಳು ಸೇರಿ ಸಭೆ ನಡೆಸಿದ್ದೇವೆ. ನಮ್ಮ ಪೋಲಿಸ್ ಇಲಾಕೆಯಿಂದ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದೆ . ಜಾತ್ರೆಯಲ್ಲಿ ತಂಟೆ ತಕರಾರು ಆಗದಂತೆ ನಮ್ಮ ಇಲಾಕೆ ನೋಡಿಕೊಳ್ಳುತ್ತದೆ.
[…] Suggested Read: ದಟ್ಟ ಕಾಡಿನ ಮದ್ಯೆ ಶಿವನ ದರ್ಶನ. […]