
ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯಾಗೆ 14 ದಿನ #ನ್ಯಾಯಾಂಗ #ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದ ಅಮೂಲ್ಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಮೂಲ್ಯಾಳ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರ ಗ್ರಾಮದ ವಾಜಿ ಅವರ ಮನೆಗೆ ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಅಮೂಲ್ಯಾಳ ದೇಶವಿರೋಧಿ ಘೋಷಣೆಯಿಂದ ಆಕ್ರೋಶಗೊಂಡ ಜನರು ವಾಜಿ ಅವರ ಮನೆ ಕೀಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ಮನೆ ಮುಂಭಾಗ ಹಾಗೂ ಹಿಂಭಾಗದ ಕಿಟಕಿ ಗಾಜುಗಳಿಗೆ ಕಲ್ಲು ತೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮುಂಜ್ರಾಗತಾ ಕ್ರಮವಾಗಿ ಮನೆಯ ಸುತ್ತಲೂ ಪೊಲೀಸ್ ಕಾವಲು ನಿಯೋಜನೆ ಮಾಡಲಾಗಿದೆ. ಈ ನಡುವೆ ಅಮೂಲ್ಯಾ ಲಿಯೋನಾ ತಂದೆ ವಾಜಿ ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ.

Leave a Comment