
ಬ್ಯಾಂಕಾಕ್: ಕೇಂದ್ರ ಥಾಯ್ಲೆಂಡ್ನ ಕಂಪೇಂಗ್ ಫೆಟ್ನಲ್ಲಿರುವ ಪಿಂಗ್ ನದಿಯಲ್ಲಿ ಮಿನುಗಾರಿಕೆಗೆ ತೆರಳಿದ್ದ ಮಿನುಗಾರನಿಗೆ ತೇಲುತ್ತಿದ್ದ ಕಪ್ಪು ಬಣ್ಣದ ಸೂಟ್ಕೇಸ್ಕಂಡಿದ್ದು ಅದನ್ನು ತೆರೆದು ನೋಡಿ ಆತ ಸುಸ್ತಾಗಿದ್ದಾನೆ.
ಈ ಸೂಟಕೆಸ್ ನಲ್ಲಿ ಯಾವುದೇ ವಸ್ತುಗಳಿರದೇ ವ್ಯಕ್ತಿಯ ದೇಹವೊಂದು ಪತ್ತೆಯಾಗಿದ್ದು ಮೃತನನ್ನು ವಾಂಗ್ ಜುನ್ ಎಂದು ಗುರುತಿಸಲಾಗಿದೆ.
ಇದು ಕೊಲೆ ಎಂದು ಶಂಕಿಸಲಾಗಿದ್ದು, ವಾಂಗ್ ಜುನ್ ಪತ್ನಿ ಜುಹಾ ಬಿಂಗ್(28) ಕೂಡ ಸಾವಿಗೀಡಾಗಿದ್ದಾಳೆ ಎಂದು ತಿಳಿದುಬಂದಿದೆ.
ಚೀನಾದ ಯುವ ದಂಪತಿಯ ಕೈಕಾಲು ಕಟ್ಟಿ ಜೀವಂತವಾಗಿ ಸೂಟ್ಕೇಸ್ ಒಳಗಡೆ ಹಾಕಿ ನದಿಗೆ ಎಸೆದಿರುವುದಾಗಿ ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ದೇಹಕ್ಕಾಗಿ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ. ಮತ್ತೊಂದು ಸೂಟ್ಕೇಸ್ನಲ್ಲಿ ಆಕೆಯನ್ನು ನೀರಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ..
ಮೃತ ದಂಪತಿಯು ಇತರೆ 13 ಚೀನಾದ ಪ್ರವಾಸಿಗರೊಂದಿಗೆ ಫೆ. 12ರಂದು ಬ್ಯಾಂಕಾಕ್ಗೆ ಆಗಮಿಸಿದ್ದರು. ಬಳಿಕ ಪಟ್ಟಾಯದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದರು. ಪ್ರವಾಸಕ್ಕೆ ಮುಗಿಸಿ ಇನ್ನುಳಿದ ಚೀನಾ ಪ್ರವಾಸಿಗರು ಈಗಾಗಲೇ ತವರಿಗೆ ಮರಳಿದ್ದಾರೆ. ಆದರೆ, ದಂಪತಿ ಮಾತ್ರ ಹಿಂದಿರುಗಿರಲಿಲ್ಲ. ಹೀಗಾಗಿ ನಾಪತ್ತೆ ಪ್ರಕರಣ ದಾಖಲಾಗಿತ್ತು
Leave a Comment