
ಜೋಯಿಡಾ :- ತಾಲೂಕಿನ ಗಣೇಶಗುಡಿ ಕಾಳಿ ನದಿಯ ಬಳಿ ಪಿಕನಿಕ್ ಗೆ ತೆರಳಿದ್ದ ಯುವಕನೋರ್ವ ಕಾಲು ಜಾರಿ ನದಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
ದಾಂಡೇಲಿಯ ಸುಭಾಷ ನಗರದ ರಿಯಾಜ್ ಅಬ್ದುಲ್ ಜುಂಜುವಾಡಕರ ಮೃತ ವ್ಯೆಕ್ತಿಯಾಗಿದ್ದು, ಗಣೇಶಗುಡಿ ವಿಜಿಲಿಂಗ್ ವುಡ್ ರೆಸಾರ್ಟ್ ಹೋಗುವ ರಸ್ತೆಯ ಪಕ್ಕದಲ್ಲಿ ನದಿ ನೀರಿನ ಬಳಿ ಊಟ ಮಾಡಿ ಕೈ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ನದಿ ನೀರಿಗೆ ಬಿದ್ದು ಈಜಲು ಬರದೆ ಸುಳಿಗೆ ಸಿಕ್ಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ರಾಮನಗರ ಪೋಲಿಸ್ ಇಲಾಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಕನಿಕ್ ನೆಪದಲ್ಲಿ ಯುವಕನ ಪ್ರಾಣ ಹೋಗಿರುವುದು ಬೇಸರದ ಸಂಘತಿಯಾಗಿದೆ. ನದಿ ಪಕ್ಕದಲ್ಲಿ ಈ ರೀತಿ ಮೋಜು ಮಸ್ತಿ ಮಾಡದೇ ಇರುವ ರೀತಿಯಲ್ಲಿ ಸಂಭಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Leave a Comment