
ಹಳಿಯಾಳ: ಪಟ್ಟಣದ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯನ್ನು ಕಳೆದ ವರ್ಷ ನಾನೇ ಉದ್ಘಾಟನೆ ಮಾಡಿದ್ದೆ. ಅದಾಗಿ ವರ್ಷ ತುಂಬುವ ಮೊದಲೇ ಶಾಲೆ ಗಮನಾರ್ಹ ಮಟ್ಟಕ್ಕೆ ಬೆಳೆದು ನಿಂತಿರುವುದು ಉತ್ತಮ ಸಂಗತಿಯಾಗಿದ್ದು ಈ ಸಂಸ್ಥೆ ರಾಜ್ಯದಲ್ಲಿ ಸಿದ್ಧಗಂಗಾ ಸಂಸ್ಥೆಯಂತೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ವಿ.ಪ. ಸದಸ್ಯ ಎಸ್.ಎಲ್. ಘೋಟ್ನೇಕರ ಹಾರೈಸಿದರು.
ಪಟ್ಟಣ ವೀರಕ್ತಮಠದಲ್ಲಿ ಆಯೋಜಿಸಲಾಗಿದ್ದ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಚನ್ನಬಸವೇಶ್ವರ ಶಾಲೆ ಇಲ್ಲಿನ ವೀರಕ್ತಮಠದ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಇಂತಹ ಸಂಸ್ಥೆಗಳು ಬೆಳೆದರೆ ಅದರಿಂದ ವ್ಯವಸ್ಥೆಯ ಕಟ್ಟಕಡೆಯ ಮಗುವಿಗೂ ಸಹ ಪ್ರಯೋಜನ ದೊರೆಯುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಡಿಸೋಜಾ ಮಾತನಾಡಿ, “ಮಠ, ಮಂದಿರಗಳು ನಡೆಸುವ ಶಾಲೆಗಳು ಸಾಮಾನ್ಯವಾಗಿ ಸಂಪ್ರದಾಯ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಈ ಶಾಲೆ ಸಂಪ್ರದಾಯದಷ್ಟೇ ಪ್ರಗತಿಪರ ವಿಚಾರಗಳಿಗೂ ಸಹ ಮಾನ್ಯತೆ ನೀಡಿದೆ ಎನ್ನುವುದಕ್ಕೆ ಇವತ್ತಿನ ಈ ಆಯೋಜನೆ ಸಾಕ್ಷಿ ನುಡಿಯುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಸಾನಿಧ್ಯ ವಹಿಸಿದ್ದ ವಿರೂಪಾಕ್ಷೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, “ಈ ನೆಲದ ಜನಸಾಮಾನ್ಯರ ಮನೆಯ ಮಕ್ಕಳಿಗೂ ಸಹ ಆಂಗ್ಲ ಶಿಕ್ಷಣ ಶಿಸ್ತು ಬದ್ಧವಾದ ರೀತಿಯಲ್ಲಿ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಈ ಶಾಲೆಯನ್ನು ಆರಂಭಿಸಿದೆವು. ಆದರೆ ಇಂದು ಶಾಲೆ ತನ್ನಷ್ಟಕ್ಕೆ ತಾನು ನಡೆದು ಹೋಗುವಷ್ಟು ಸಮರ್ಥಗೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದು ಇನ್ನೂ ಉತ್ತರೋತ್ತರವಾದ ಎತ್ತರಗಳನ್ನು ತಲುಪುವುದರಲ್ಲಿ ಅನುಮಾನವಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಧರ್ಮದರ್ಶಿ ಮಂಡಳಿಯ ಕಾರ್ಯದರ್ಶಿ ಶಿವದೇವ ದೇಸಾಯಿಸ್ವಾಮಿ, ಎಂ.ಬಿ. ತೋರಣಗಟ್ಟಿ, ವಿ.ಎಂ. ಹಳ್ಳಿ, ಸಿದ್ಧರಾಮ ಗಾಣಗೊಂಡ, ಬಸವರಾಜ ಶೆಟ್ಟರ, ಶಂಕರ ಕಾವಲವಾಡ, ಸಂತೋಷ ಹುಂಡೇಕರ, ಅಪ್ಪು ಚರಂತಿಮಠ, ಮಲ್ಲು ವಾಲಿ, ರವಿ ತೋರಣಗಟ್ಟಿ, ಸುನೀಲ ಹಿರೇಮಠ, ಗುರುಸಿದ್ದಪ್ಪಾ ಪಟ್ಟಣಶೆಟ್ಟಿ, ಸುಮಿತ್ರಾ ಓಶೀಮಠ, ಶೈಲಾ ಉಪ್ಪಿನ, ಪ್ರಕಾಶ ಕಿತ್ತೂರ ಇದ್ದರು.
ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜನರ ಮನ ರಂಜಿಸಿದವು ಅಲ್ಲದೇ ಮಕ್ಕಳೊಂದಿಗೆ ಪಾಲಕರು ಸಹ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಸೃಷ್ಟಿ ಶಿವದೇವ ದೇಸಾಯಿಸ್ವಾಮಿ, ಮಹಾಂತೇಶ ದೇಸಾಯಿಸ್ವಾಮಿ ಮತ್ತು ವಿ.ಎಂ.ಹಳ್ಳಿ ನಿರ್ವಹಿಸಿದರು.

Leave a Comment