

ಹಳಿಯಾಳ:- ವಿವಿಧ ಸಂಘ-ಸಂಸ್ಥೆಗಳೊಂದಿಗೆ ಪಟ್ಟಣದ ವನಶ್ರೀ ಲಾಡ್ಜ ಮೇಲೆ ದಾಳಿ ನಡೆಸಿ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಮ್ಯಾನೇಜರ ಸೇರಿದಂತೆ ನಾಲ್ವರು ಪುರುಷರನ್ನು ಬಂಧಿಸಲಾಗಿದ್ದು ಇನ್ನು ಇರ್ವರು ಪರಾರಿಯಾಗಿದ್ದಾರೆಂದು ಹಳಿಯಾಳ ಸಿಪಿಐ ಮಾಹಿತಿ ನೀಡಿದರು.
ಬಸ್ ಸ್ಟ್ಯಾಂಡ್ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವನಶ್ರೀ ಸರ್ಕಲ್‍ನಲ್ಲಿಯ ವನಶ್ರೀ ಡಿಲಕ್ಸ್ ಲಾಡ್ಜ್ ಮೇಲೆ ಮಂಗಳವಾರ ಸಂಜೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಕರ್ನಾಟಕ ಇಂಟಿಗ್ರೇಟೆಡ್ ಡೆವಲಂಪಮೆಂಟ್ ಸರ್ವಿಸ್ ಧಾರವಾಡ ಸಂಸ್ಥೆಯವರು ಸ್ಥಳೀಯ ಪೋಲಿಸ್ ಇಲಾಖೆಯ ನೆರವಿನಲ್ಲಿ ದಾಳಿ ನಡೆಸಿದ್ದರು.
ಈ ಕುರಿತು ಬುಧವಾರ ಮಾಹಿತಿ ನೀಡಿದ ಹಳಿಯಾಳ ಪೋಲಿಸರು ವೈಷ್ಯಾವಾಟಿಕೆಗೆ ಬಂದ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ ಹಾಗೂ ವೈಷ್ಯಾವಾಟಿಕೆ ದಂದೆಯನ್ನು ನಡೆಸುತ್ತಿದ್ದ ಮಂಗಳೂರಿನ ಪವನ ಆಚಾರಿ, ಹಾವೇರಿಯ ಬಸವರಾಜ ಮುತ್ತಪ್ಪನವರ, ಬಾದಾಮಿಯ ನಾಗರಾಜ ಬಸವಂತಪ್ಪ ಸಂಕದಾಳ, ಕಿತ್ತೂರಿನ ಅಡಿವೆಪ್ಪ ನರಗುಂದ ಬಂದಿತ ಆರೋಪಿಗಳಾಗಿದ್ದಾರೆ. ಲಾಡ್ಜ್ ಮಾಲಿಕ ದಿನೇಶ ಶೆಟ್ಟಿ ಮತ್ತು ನಾಗರಾಜ ಪರಾರಿಯಾಗಿದ್ದಾರೆಂದು ತಿಳಿಸಿದರು.

ಇನ್ನೂ ರಕ್ಷಿಸಲಾದ ಹೆಣ್ಣು ಮಕ್ಕಳು ಮಂಡ್ಯ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಧಾರವಾಡ ಮೂಲದವರಾಗಿದ್ದು ಇವರನ್ನು ಕಾರವಾರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಆರೋಪಿ ಯುವಕರನ್ನು ಹಳಿಯಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮಾರ್ಚ ದಿ.23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ ಎಂದು ಸಿಪಿಐ ಮಾಹಿತಿ ನೀಡಿದರು.


ಸುದ್ದಿಗೊಷ್ಠಿಯಲ್ಲಿ ಪಿಎಸ್‍ಐ ಯಲ್ಲಾಲಿಂಗ ಕೂನ್ನುರ, ಕ್ರೈಂ ಪಿಎಸ್‍ಐ ರಾಜಕುಮಾರ ಇದ್ದರು.
ಇನ್ನೂ ದಾಳಿ ನಡೆಸಿದಾಗ ಎರಡೂವರೆ ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಬಳಿಕ ಲಾಡ್ಜನ ರೂಮಿನ ಬಳಿಯಿರುವ ಕಪಾಟ ಕೆಳಗಡೆ ಕಳ್ಳಮಾರ್ಗವೊಂದು ಪತ್ತೆಯಾಯಿತು. ಅಲ್ಲಿ ಹೆಣ್ಮಕ್ಕಳನ್ನು ಅವಿತಿಟ್ಟುರುವುದು ಕಂಡು ಬಂದಿದೆ. ಲಾಡ್ಜ್‍ನಲ್ಲಿ ಆರೋಗ್ಯ ಇಲಾಖೆಯ ನಿರೋಧದ ಕಾಂಡಮಗಳ ಸುಮಾರು ಹತ್ತಕ್ಕೂ ಹೆಚ್ಚು ಬಾಕ್ಸಗಳು ಪತ್ತೆಯಾಗಿವೆ ಎಂದು ದಾಳಿಯ ಮುಂದಾಳತ್ವ ವಹಿಸಿದ್ದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟೇನ್ಲಿ ತಿಳಿಸಿದ್ದಾರೆ.
ಗ್ರಾಹಕರ ಸೊಗಿನಲ್ಲಿ ಬಂದ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ವನಶ್ರೀ ಲಾಡ್ಜ್‍ನಲ್ಲಿ ರೂಮ ಬಾಡಿಗೆ ಪಡೆದು ಹೆಣ್ಮಕ್ಕಳನ್ನು ಕೇಳಿದ್ದಾರೆ, ಇವರನ್ನು ಗುರುತಿಸಿದ ಪವನ ಆಚಾರಿ ತಕ್ಷಣ ರೂಮಿನಲ್ಲಿ ಕೂಡಿ ಹಾಕಿ ಲಾಡ್ಜನಲ್ಲಿದ್ದ ಹೆಣ್ಮಕ್ಕಳನ್ನು ಪರಾರಿ ಮಾಡಲು ಯತ್ನಿಸಿದ್ದನು, ತಕ್ಷಣ ಲಾಡ್ಜ್‍ಗೆ ಲಗ್ಗೆಯಿಟ್ಟ ಸ್ವಯಂ ಸೇವಾ ಸಂಸ್ಥೆಯ ತಂಡದವವರು ಲಾಡ್ಜ್‍ನ್ನು ತಮ್ಮ ವಶದಲ್ಲಿ ಪಡೆದು ಕೊಂಡು ಪರಿಶೀಲನೆಯನ್ನು ನಡೆಸಿದ್ದರು.
ದಾಳಿಯಲ್ಲಿ ಒಡನಾಡಿ ಸಂಸ್ಥೆಯ ಪ್ರದೀಪ, ಪ್ರಥ್ವಿ, ದೀಕ್ಷಿತ, ಹಾಗೂ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸಯರಾದ ಪರಶುರಾಮ ಎಮ್.ಎಲ್. ಶಂಕರಪ್ಪ ಡಿ, ಅಶೋಕ ಯರಗಟ್ಟಿ, ಸಿಪಿಐ ಲೋಕಾಪುರ ಹಾಗೂ ಪಿಎಸ್‍ಐ ಯಲ್ಲಾಲಿಂಗ ಕುನ್ನೂರ ಇದ್ದರು.

Leave a Comment