
ಜೋಯಿಡಾ;
ತಾಲೂಕಿನ ಡಿಗ್ಗಿ ಗುಡ್ಡದ ಮೇಲಿರುವ ಹುತ್ತಿನ ದೇವತೆ ತಾಯಿ ಗವಳಾ ದೇವಿ ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಹೊಸ ಸೀರೆ ತೊಟ್ಟು ಭಕ್ತರಿಗೆ ಆಶಿರ್ವದಿಸಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ದೇವಿಯ ಕ್ರಪೆಗೆ ಪಾತ್ತರಾಧರು.
ರವಿವಾರ ಡಿಗ್ಗಿಯಲ್ಲಿರುವ ಗವಳಾ ದೇವಿಯ ವಾರ್ಷಿಕ ಹೋಳಿ ನಮಿತ್ತ ಜಾತ್ರಾ ಮಹೋತ್ಸವ ನಡೆಯಿತು. ಕಣ್ಣ, ಮಾಯರೆ, ಸೋಲಿಯೆ, ಡಿಗ್ಗಿ, ಬೊಂಡೇಲಿ ಪಂಚಮಿರಾಶಿಗಳು ಬೆಳಿಗ್ಗೆಯಿಂದಲೇ ದೇವಿಯ ಪೂಜೆಯಲ್ಲಿ ತೊಡಗಿದ್ದರು. ಮಧ್ಯಾಹ್ನವಾಗುತ್ತಿದ್ದಂತೆ ಭಕ್ತರ ಸಮಕ್ಷಕ ಪಂಚಮಿರಾಶಿಗಳಿಂದ ಗೌಳಾದೇವಿಗೆ ಇಷ್ಟವಾದ ರೇಷ್ಮೆ ಸೀರೆಯನ್ನು ತೊಡಿಸಿ ಶೃಂಗರಿಸಲಾಯಿತು. ಸೇರಿದ ಸಾವಿರಾರು ಭಕ್ತರು ದೇವಿಯ ಗುಣಗಾನ ಮಾಡುತ್ತಲೇ ದರ್ಶನಕ್ಕೆ ಕಾಯುತ್ತಿರುವುದು ಕಂಡುಬಂತು.
ದೇವಿಯ ದರ್ಶನಕ್ಕೆ ಏಳು ಸುತ್ತಿನ ಸರದಿಯಲ್ಲಿ ಸಾವಿರಾರು ಜನ ನಿಂತಿದ್ದರು. ಈ ಸರದಿಯಲ್ಲಿ ಹೆಚ್ಚಾಗಿ ಮಹಿಳೆಯರೇ ದರ್ಶನಕ್ಕೆ ಕಾಯುತ್ತಿದ್ದರು. ರವಿವಾರ ಮಹಿಳಾ ದಿನಾಚಾರಣೆಯಾಗಿದ್ದರಿಂದ ಹೆಚ್ಚು ಮಹಿಳೆಯರು ದೇವಿಶ ದರ್ಶನಕ್ಕೆ ಬಂದಿರುವಂತೆ ಕಂಡುಬಂತು.

ಶ್ರೀ ಗವಳಾದೇವಿ ಟ್ರಸ್ಟ ಕಮಿಟಿಯಿಂದ ಮಧ್ಯಾಹ್ನ 2 ಗಂ.ಯಿಂದ ರಾತ್ರಿ 10 ಗಂ. ತನಕ ಉಚಿತವಾಗಿ ಅನ್ನದಾಸೋಹ ಬಂದ ಎಲ್ಲ ಭಕ್ತರಿಗೆ ನೀಡಲಾಯಿತು. ಭಕ್ತರಿಗೆ ದೇವಿಯ ದರ್ಶನಕ್ಕೆ ಮತ್ತು ಊಟಕ್ಕೆ ಸರದಿ ಪ್ರಕಾರ ನಿಂತು ದರ್ಶನ ಪಡೆಯಲೆಂದು ಕಮಿಟಿಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿತ್ತು.
ಕೊರೊನಾ ಭೀತಿ ಇಲ್ಲ; ಗೋವಾ ರಾಜ್ಯದ ಗಡಿಯಲ್ಲಿ ಈ ಶಕ್ತಿದೇವತೆ ಗವಳಾದೇವಿ ವಿರಾಜಮಾನರಾಗಿರುವುದರಿಂದ ಗೋವಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಜೋಯಿಡಾ ತಾಲೂಕ ಖಾನಾಪೂರ, ಬೆಳಗಾಂವ, ಮಹಾರಾಷ್ಟದಿಂದಲೂ ಭಕ್ತರು ಬಂದರೂ ಯಾರೂ ಕೂಡ ಮಾಸ್ ಧರಿಸಿದ್ದು ಕಂಡುಬಂದಿಲ್ಲ. ಭಕ್ತರ ಸಂಖ್ಯೆ ಈ ವರ್ಷ ಹೆಚ್ಚಾಗಿತ್ತೆಂದು ಹೇಳಲಾಗುತ್ತದೆ.
ವ್ಯಾಪಾರ ಭರಪೂರ; ತಾಲೂಕ ಅಷ್ಟೇ ಅಲ್ಲದೇ ಗೋವಾ, ಖಾನಾಪೂರ, ಬೆಳಗಾಂವ, ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಬಂದ ವ್ಯಾಪಾರಸ್ಥರು ಬಲು ಜೋರಾಗಿಯೇ ಇತ್ತು. ಈ ಜಾತ್ರೆಯ ವಿಶಿಷ್ಟವಾದ ಖಾಜೆ ಪ್ರಸಾದ, ಚಹಾ ಊಟದ ಅಂಗಡಿಗಳಲ್ಲಿ ಹೆಚ್ಚಿನ ಜನರಿರುವುದು ಕಂಡುಬಂತು.
ಉಪಸ್ಥಿತಿ; ಜಿ.ಪಂ.ಸ ಸಂಜಯ ಹಣಬರ, ಮಾಜಿ ಶಾಸಕ ಸುನಿಲ್ ಹೆಗಡೆ, ಮಧ್ಯಾಹ್ನದ ಹೊತ್ತಿಗೆ ದರ್ಶನ ಪಡೆದರು.


Leave a Comment