
ಜೋಯಿಡಾ ;
ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ ಮತು ನೇತುರ್ಗಾ ಗ್ರಾಮಗಳಿಗೆ ಹೆಬ್ಬಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ, ಖಾಯಂ ಶಿಕ್ಷಕರ ನೇಮಕ, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಸ್ಪಂದಿಸದಿದ್ದರೆ ಮತದಾನ ಭಹಿಷ್ಕರಿಸುವುದಾಗಿ ಎಚ್ಚರಿಸಿರುತ್ತಾರೆ.
ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ ಹಾಗೂ ನೆತುರ್ಗಾ ಗ್ರಾಮ ಉಳವಿಯಿಂದ 5 ರಿಂದ 8ಕಿ.ಮೀ. ದೂರವಿದೆ. ಈ ಎರಡೂ ಗ್ರಾಮದಲ್ಲಿ ಒಟ್ಟು 180 ಕ್ಕೂ ಹೆಚ್ಚು ಮತದಾರರಿದ್ದು, ಈ ಗ್ರಾಮದ ವಯಸ್ಕ ಮತದಾರರು ಚುನಾವಣೆಯಂದು ದೂರದ ಉಳವಿ ಮತಗಟ್ಟೆಗೆ ಗುಡ್ಡವನ್ನು ಏರಿಹೋಗಲು ಸಾಧ್ಯವಾಗದೆ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಕಳೆದ 2014 ರಲ್ಲಿ ಜಿಲ್ಲಾಡಳಿತಕ್ಕೆ ಮನವಿಮಾಡಿ ಹೆಬ್ಬಾಳ ಶಾಲೆಯಲ್ಲಿ ಪ್ರತ್ಯೇಕ ಮತದಾನ ಕೇಂದ್ರವನ್ನು ಸ್ಥಾಪಿಸುವಂತೆ ಮನವಿಮಾಡಿಕೊಂಡಿದ್ದು, ಚುನಾವಣಾ ಭಹಿಸ್ಕಾರಮಾಡುವ ನಿರ್ಧಾರ ಕೈಗೊಂಡಾಗ ಅಂದಿನ ತಾಲೂಕಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮುಂದಿನ ಚುನಾವಣೆಯ ಪೂರ್ವದಲ್ಲಿ ಹೆಬ್ಬಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸುವ ಬರವಸೆ ನೀಡಿದ್ದರು. ಆದರೆ ಈ ಬರವಸೆ ಇಂದಿಗೂ ಈಡೇರದೆ ಇದ್ದು, ಕೂಡಲೆ ಮತಗಟ್ಟೆ ಸ್ಥಾಪಿಸಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಉಳವಿಯಿಂದ ಗದ್ದೆಮನೆ ಗ್ರಾಮದವರೆಗೆ ಮಂಜೂರಾದ ರಸ್ತೆ ಕಾಮಗಾರಿ ಅರ್ದಕ್ಕೆ ನಿಂತಿದ್ದರಿಂದ ಹಾಳಾದ ಧೂಳು ತುಂಬಿದ ರಸ್ತೆಯಲ್ಲಿ ಹಾಗೂ ಅರ್ದಮರ್ದಗೊಂಡ ರಸ್ತೆಗಳ ಜೆಲ್ಲಿಕಲ್ಲುಗಳ ನಡುವೆ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಓಡಾಡಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆ ದುರಸ್ಥಿಕಾರ್ಯ ಕೂಡಲೆ ಆರಂಬಿಸಬೇಕು, ಹೆಬ್ಬಾಳ ಶಾಲೆಗೆ ಖಾಯಂ ಶಿಕ್ಷಕರಿಲ್ಲದೆ ಮಕ್ಕಳು ಶಿಕ್ಷಣದಿಂದ ತೊಂದರೆ ಪಡುವಂತಾಗಿದೆ. ನಮ್ಮ ಖುಗ್ರಾಮದ ಮಕ್ಕಳ ಶಿಕ್ಷಣ ದೃಷ್ಟಿಯಿಂದ ತ್ವರಿತವಾಗಿ ಒಂದು ಖಾಯಂ ಶಿಕ್ಷರನ್ನು ನೇಮಿಸಬೇಕು ಹಾಗೂ ವಿದ್ಯುತ್ ಸಂಪರ್ಕವಿಲ್ಲದ ಗದ್ದೆಮನೆ ಗ್ರಾಮದ ಎರಡು ಮನೆಗಳಿಗೆ ಕೂಡಲೆ ವಿದ್ಯುತ್ ಸಂಪರ್ಕ ನೀಡುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಸಹಾಯಕ ಆಯುಕ್ತೆ ಪ್ರೀಯಾಂಗಾ ರವರಿಗೆ ಜೋಯಿಡಾ ತಹಶೀಲ್ದಾರ ಕಚೇರಿಯಲ್ಲಿ ಈ ಬಗ್ಗೆ ಮನವಿ ನೀಡಿದ್ದು, ಕೂಡಲೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.
ಹೆಬ್ಬಾಳ ಹಾಗೂ ನೆತುರ್ಗಾ ಗ್ರಾಮದ ಪ್ರಮುಖರಾದ ಗ್ರಾ.ಪ ಅಧ್ಯಕ್ಕಷ ಮಂಜುನಾಥ ಮೋಕಾಶಿ, ನರಸಿಂಹ ತಮ್ಮು ಗೌಡಾ, ಗಣೆಶ ಜಿ.ಗೌಡಾ, ಗೋಪಳ ಭಟ್ಟ ಶಿವಪೂರ, ಡಿ.ಆರ್.ಗೌಡಾ, ಶಂಕರ ರ. ಗೌಡಾ, ವಿ.ಜಿ. ಮಿರಾಶಿ, ಕಾಅವೇರಿ ಗೌಡ, ಲಕ್ಷ್ಮಣ ಗೌಡಾ, ವೆಂಕಣ್ಣ ಎನ್.ಗೌಡಾ, ವಾಸುದೇವ ಗೌಡಾ ಮುಂತಾದವರು ಬರುವ 26 ಒಳಗಾಗಿ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾರ್ಚ 27 ರಿಂದಲ್ಲೇ ಅನಿರ್ದಿಷ್ಟಾವಧಿ ಹೋರಾಟ ಹಾಗೂ ಚುನಾವಣಾ ಭಹಿಸ್ಕಾರ ಮಾಡುವುದಾಗಿ ಜಿಲಾಡಳಿತಕ್ಕೆ ಎಚ್ಚರಿಕೆ ನೀಡಿರುತ್ತಾರೆ.

Leave a Comment