
ಹಳಿಯಾಳ:- ಲಾಕ್‍ಡೌನ್ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಟ್ಟಣದ 2 ಮಸಿದಿಗಳಲ್ಲಿ ಗುಂಪಾಗಿ ಸೇರಿದ ಸಂದರ್ಭದಲ್ಲಿ ತಿಳುವಳಿಕೆ ಹೇಳಲು ಹೊದ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 20 ಮಂದಿಯನ್ನು ಬಂಧಿಸಿರುವ ಹಳಿಯಾಳ ಪೋಲಿಸರು ನಿಷೇಧಾಜ್ಞೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಷೇಧಾಜ್ಞೆ 144 ಕಲಂ ಜಾರಿಯಲ್ಲಿದೇ ಅಲ್ಲದೇ ಕೊರೊನ ಸೊಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಯಾವ ಸಂದರ್ಭದಲ್ಲೂ ಮನೆಯಿಂದ ಹೊರಗೆ ಬರದಂತೆ ಆದೇಶವಿದ್ದರು ಸಹಿತ ಆದೇಶವನ್ನು ಉಲ್ಲಂಘಿಸಿ ನಮಾಜ್ ಮಾಡುವ ಉದ್ದೇಶದಿಂದ ಗುಂಪು ಗುಂಪಾಗಿ ಮಸೀದಿಗಳಲ್ಲಿ ಸೇರಿದ್ದು ಪೋಲಿಸರ ದಾಳಿಯಿಂದ ತಿಳಿದು ಬಂದಿದೆ.
ಈ ಸಂಬಂಧ ಪಟ್ಟಣದ ಚೌವ್ಹಾನ ಪ್ಲಾಟ್ ಹತ್ತಿರದ ಸ್ಲಂ ಏರಿಯಾದ ಮಸ್ಜಿದ್ ಎ ಕುಬಾ ಮಸಿದಿಯಲ್ಲಿ ಗುಂಪಾಗಿ ಸೇರಿದ್ದಾಗ ಅಲ್ಲಿಗೆ ತೆರಳಿದ ಪೋಲಿಸರು ತಿಳುವಳಿಕೆ ಹೇಳಿದಾಗ ಪೋಲಿಸರ ವಿರುದ್ದ ಅವ್ಯಾಚ್ಯವಾಗಿ ಬೈಯ್ದು, ಜೀವ ಬೇದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಮಸೀದಿ ಅಧ್ಯಕ್ಷ ಸುಲೇಮಾನ್ ಕಿತ್ತೂರ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಿದ್ದು ಇನ್ನುಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪಟ್ಟಣದ ಹೊಸುರ ಗಲ್ಲಿಯ ನೂರಾನಿ ಮಸಿದಿಯಲ್ಲಿ ಗುಂಪಾಗಿ ಸೇರಿದ್ದವರ ಮೇಲೂ ಇದೇ ರೀತಿಯ ಪ್ರಕರಣ ದಾಖಲಾಗಿದ್ದು ಒಟ್ಟೂ 20 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಕೆಲವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪರಾರಿಯಾದವರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.
Leave a Comment