ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊರ್ವನನ್ನು ಕೊಲೆಗೈದ ಆರೋಪಿಯನ್ನು ಕೇವಲ ನಾಲ್ಕೂ ದಿನಗಳಲ್ಲಿ ಪತ್ತೆ ಹಚ್ಚುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು, ಹೆಣ್ಣಿಗಾಗಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾತ ಅವರು ಬೆಳವಟಗಿಯ 31 ವರ್ಷದ ಯುವಕ ನಾಗರಾಜ ಕೊಳದಾರನನ್ನು ದಿ.4 ರಂದು ಬೆಳವಟಗಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಲಾಗಿತ್ತು ಆದರೇ ಪ್ರಕರಣ ದಿ.7 ರಂದು ಬೆಳಕಿಗೆ ಬಂದಿತ್ತು.

ಲಾಕ್‍ಡೌನ್ ಸಂದರ್ಭದಲ್ಲಿ ನಿಗೂಢವಾಗಿ ನಡೆದಿದ್ದ ಈ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿತ್ತು ಆದರೇ ಹಳಿಯಾಳ ಸಿಪಿಐ ಬಿಎಸ್ ಲೋಕಾಪುರ, ಪಿಎಸ್‍ಐಗಳಾದ ಯಲ್ಲಾಲಿಂಗ ಕುನ್ನೂರ, ರಾಜಕುಮಾರ ಅವರು ತಮ್ಮ ಹಾಗೂ ಎಸ್ಪಿ ಶಿವಪ್ರಕಾಶ ದೇವರಾಜು ಅವರ ಅವರ ಮಾರ್ಗದರ್ಶನದಲ್ಲಿ ಮೂರು ದಿನಗಳಲ್ಲೇ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳವಟಗಿ ಗ್ರಾಮದ ಮಾರುತಿ ಶಂಭಾಜಿ ಮಾದಪ್ಪಗೌಡ್ರನನ್ನು ಕೊಲೆ ಆರೋಪಿಯಾಗಿದ್ದು ತೀವೃ ಸಂಶಯದ ಮೇಲೆ ಇತನನ್ನು ಬಂಧಿಸಿ ತೀವೃವಾಗಿ ವಿಚಾರಣೆಗೆ ಒಳಪಡಿಸಿದಾಗ ಆತ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೊಲೆಯಾದ ನಾಗರಾಜನ ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಿಂದ ನಾಗರಾಜ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಆತನನ್ನು ದಿ.4 ರಂದು ರಾತ್ರಿ ಸಮಯದಲ್ಲಿ ಕಟ್ಟಿಗೆ ತರೊಣವೆಂದು ಕರೆದುಕೊಂಡು ಹೋಗಿ ಹಿಂದುಗಡೆಯಿಂದ ಕೊಡಲಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿರುವುದಾಗಿ ಕೊಲೆ ರಹಸ್ಯವನ್ನು ಆರೋಪಿ ಬಾಯಿಬಿಟ್ಟಿದ್ದಾನೆಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಎಎಸ್‍ಐಗಳಾದ ಪಿಎಮ್ ಸೊಲ್ಲಾಪುರಿ, ಪ್ರಕಾಶ ಮುಳೆ, ಹೆಡ್ ಕಾನ್ಸ್ಟೇಬಲ್‍ಗಳಾದ ಅಶೋಕ ಹುಬ್ಬಳ್ಳಿ, ಜಗದೀಶ ಕುಂಬಾರ, ಎಮ್.ಎಮ್.ಮುಲ್ಲಾ, ದೇವಿದಾಸ ಉದ್ದಂಡಿ, ಸಿಬ್ಬಂದಿಗಳಾದ ಶ್ರೀಶೈಲ್ ಮಂಗಾನವರ, ಬಸವರಾಜ, ಗುರುರಾಜ ಬಿಷ್ಟಪ್ಪನವರ, ಶಂಕರಲಿಂಗ ಕ್ಷತ್ರಿ, ನೇತಾಜಿ ಕೊರವಾರ, ದುರ್ಗಪ್ಪ ಮೂಲಿಮನಿ, ನಿಂಗಪ್ಪಾ ಬಳ್ಳಾರಿ ಇತರರು ಭಾಗವಹಿಸಿದ್ದರು.

Leave a Comment