ಕಾರವಾರ: ನಾಗರ ಹಾವೊಂದು ತನ್ನದೇ ಗಾತ್ರದ ಇನ್ನೊಂದು ನಾಗರಹಾವನ್ನು ನುಂಗಿರುವ ಘಟನೆ, ಅಂಕೋಲಾ ತಾಲೂಕಿನ ಹೊನ್ನೆಬೈಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಕ್ರುಗೌಡ ಎಂಬುವವರ ಮನೆಯ ಬಳಿ ಎರಡು ಹಾವುಗಳು ಕಚ್ಚಾಡುತ್ತಿರುವುದನ್ನು ಮನೆಯವರು ಗಮನಿಸಿದ್ದರು. ಇದರಿಂದ ಭಯಗೊಂಡ ಮನೆಯವರು ತಕ್ಷಣ ಉರಗ ಪ್ರೇಮಿ ಮಹೇಶ್ ನಾಯ್ಕ ಅವರ ಗಮನಕ್ಕೆ ತಂದಿದ್ದರು.
ಆದರೆ ಮಹೇಶ್ ನಾಯ್ಕ ಅವರು ಬರುವಷ್ಟರಲ್ಲೇ ಒಂದು ಹಾವು ಇನ್ನೊಂದು ಹಾವನ್ನು ಕೊಂದು ನುಂಗಿ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೇ ಸ್ವಲ್ಪ ಹೊತ್ತಿನಲ್ಲಿ ಸಂಪೂರ್ಣ ನುಂಗಲಾಗದೇ, ನುಂಗಿದ ಹಾವನ್ನು ಹೊರ ಹಾಕಿದೆ. ನಂತರ ಜೀವಂತ ಹಾವನ್ನು ಮಹೇಶ್ ನಾಯ್ಕ ಹಿಡಿದಿದ್ದು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.
Leave a Comment