
ಜೋಯಿಡಾ –
ವಿಶ್ವವೇ ಕರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ , ವಿಶ್ವಕ್ಕೆ ಹೋಲಿಸಿದರೆ ಭಾರತ ಕರೋನಾ ವೈರಸ್ ವಿರುದ್ದ ಹೋರಾಡಿ ಗೆಲ್ಲುತ್ತಿದೆ, ಸದ್ಯದಲ್ಲೇ ಕರೋನಾ ವಿರುದ್ದದ ನಮ್ಮ ಹೋರಾಟ ಯಶಸ್ವಿಯಾಗುತ್ತದೆ ಎಂದು ಜೋಯಿಡಾ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಜೋಯಿಡಾದ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಪೋಲಿಸ್ ಹೋಮ ಗಾರ್ಡ ಹಾಗೂ ಮಹಿಳೆಯರಿಗೆ ಮಾಸ್ಕ ಹಾಗೂ ಕಿಟ್ ವಿತರಣೆ ಹಾಗೂ ರೈತರಿಗೆ ಭತ್ತದ ಬೀಜ ವಿತರಣೆ ಮಾಡಿ ಮಾತನಾಡುತ್ತಿದ್ದರು. ನನ್ನ ಕ್ಷೇತ್ರದಲ್ಲಿ ೩೫ ಸಾವಿರ ಮಾಸ್ಕ ವಿತರಣೆ ಮಾಡಿದ್ದೇನೆ . ಕರೋನಾ ವಿರುದ್ದವಾಗಿ ಜೋಯಿಡಾ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ತಾಲೂಕು ಪಂಚಾಯತ್ ಮೂಲಕ ಎಲ್ಲಾ ಪಂಚಾಯತ್ ಗೆ ಮಾಸ್ಕ ನೀಡುತ್ತಿದ್ದೇನೆ. ನನ್ನ ದ್ಯೇಯ ಒಂದೇ ಕಷ್ಟದಲ್ಲಿ ಇರುವವರಿಗೆ ಸಹಾಯ ಆಗಬೇಕು. ಎಲ್ಲರೂ ಸಾಮಾಜಿಕ ಅಂತರ ಕಾದುಕೊಳ್ಳುವ ಮೂಲಕ ಕರೋನಾ ರೋಗದ ವಿರುದ್ದ ಜಯ ಸಾಧಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣುಕೆ, ಜಿ.ಪಂ.ಸದಸ್ಯರಾದ ರಮೇಶ ನಾಯ್ಕ ,ಸಂಜಯ ಹಣಬರ, ತಾ.ಪಂ.ಅದ್ಯಕ್ಷೆ ನರ್ಮದಾ ಪಾಟ್ನೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ತಹಶೀಲ್ದಾರ ಸಂಜಯ ಕಾಂಬಳೆ, ಇ.ಓ. ಆನಂದ ಬಡಕುಂದ್ರಿ ಇತರರು ಉಪಸ್ಥಿತರಿದ್ದರು.

Leave a Comment