
ಜೋಯಿಡಾ – ತಾಲೂಕಿನಲ್ಲಿ ಎಲ್ಲಿಯೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಆಗಬಾರದು, ಕುಡಿಯುವ ನೀರಿನ ಕೆಲಸ ಕಾಮಗಾರಿಗಳು ನಿಧಾನ ಗತಿಯಲ್ಲಿ ಆಗುತ್ತಿವೆ, ಸುಮ್ಮನೆ ತಲೆ ಬಿಸಿ ಮಾಡಬೇಡಿ ಕುಂಟು ನೆಪ ಹೇಳುವುದು ಬಿಟ್ಟು ಕೆಲಸ ಸರಿಯಾಗಿ ಮಾಡಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಕುಡಿಯುವ ನೀರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಅವರು ಜೋಯಿಡಾ ತಾಲೂಕಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡಸಿ ಮಾತನಾಡುತ್ತಿದ್ದರು. ಜೋಯಿಡಾ ತಾಲೂಕಿನ ಯಾವ ಪಂಚಾಯತ್ ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು, ನೀರಿನ ಸಮಸ್ಯೆ ಇದ್ದರೇ ಟ್ಯಾಂಕರಗಳಲ್ಲಿ ವ್ಯವಸ್ಥೆ ಮಾಡಿ, ತಾಲೂಕಿನ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು .
ಜೋಯಿಡಾ ತಾಲೂಕಿನಲ್ಲಿರುವ ಮಣ್ಣಿನ ಗೋಡೆಯ ಶಾಲೆಗಳನ್ನು ಕೂಡಲೇ ದುರಸ್ತಿ ಮಾಡಿ, ಹೊಸ ಕಟ್ಟಡ ಕಟ್ಟುವ ವ್ಯವಸ್ಥೆ ಮಾಡಿ ಎಂದು ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಜೋಯಿಡಾ ತಾಲೂಕಿನ ಡಿಗ್ಗಿ ಮತ್ತು ಕ್ಯಾಸಲರಾಕ್ ಆಸ್ಪತ್ರೆಗಳಲ್ಲಿ ವೈಧ್ಯರ ಕೊರತೆ ಇದ್ದು ಕೂಡಲೇ ಅಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ , ಮೆಡಿಕಲ್ ಅವರು ಮೊದಲಿನಂತೆ ಅಂಗಡಿಗಳನ್ನು ತೆರೆಯಿರಿ ,ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ .ಬೇರೆ ಜಿಲ್ಲೆ ಅಥವಾ ರಾಜ್ಯ ದಿಂದ ಬಂದತವರನ್ನು ಮೂಲಬೂತ ಸೌಕರ್ಯ ಇರುವ ಕಡೆಗಳಲ್ಲಿ ಕ್ವಾರಂಟೆನ್ ಮಾಡಿ ,ಹಾಟ್ ಸ್ಪಾಟ್ ಇರುವ ಕಡೆ ಬಿಟ್ಟು ಬೇರೆ ಕಡೆಗಳಿಂದ ಬಂದವರನ್ನು ಹೋಮ ಕ್ವಾರಂಟೆನ್ ಮಾಡಿ ಎಂದರು.
ಎಲ್ಲರೂ ಸಾಮಾಜಿಕ ಅಂತರ ಕಾದುಕೊಳ್ಳುವ ಮೂಲಕ ಕರೋನಾ ಓಡಿಸಬಹುದಾಗಿದೆ, ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ಕರೋನಾ ಮಟ್ಟಹಾಕಬಹುದು,
ಜೋಯಿಡಾ ತಾಲೂಕಿನ ಜನರು ಪ್ರವಾಸೋದ್ಯಮವನ್ನೇ ಬದುಕಾಗಿಸಿಕೊಂಡಿದ್ದರು, ಅಂಥವರು ಹೆದರುವ ಅವಶ್ಯಕತೆ ಇಲ್ಲ ಸದ್ಯದಲ್ಲೇ ಎಲ್ಲವೂ ಸರಿ ಹೋಗಲಿದೆ ಎಂದರು.
ಲೋಕೋಪಯೋಗಿ ಇಲಾಕೆ,ಹೆಸ್ಕಾಂ, ಕೃಷಿ ಇಲಾಕೆ, ತೋಟಗಾರಿಕಾ ಇಲಾಕೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣುಕೆ, ಜಿ.ಪಂ.ಸದಸ್ಯರಾದ ರಮೇಶ ನಾಯ್ಕ ,ಸಂಜಯ ಹಣಬರ, ತಾ.ಪಂ.ಅದ್ಯಕ್ಷೆ ನರ್ಮದಾ ಪಾಟ್ನೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ತಹಶೀಲ್ದಾರ ಸಂಜಯ ಕಾಂಬಳೆ, ಇ.ಓ. ಆನಂದ ಬಡಕುಂದ್ರಿ ಇತರರು ಉಪಸ್ಥಿತರಿದ್ದರು.
Leave a Comment