
ಹಳಿಯಾಳ/ದಾಂಡೇಲಿ :- ಭಟ್ಕಳಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಜಿಲ್ಲೆಯ ಇತರ ತಾಲೂಕುಗಳಿಗೂ ಲಗ್ಗೆ ಇಡಲು ಆರಂಭಿಸಿದ್ದು ಈಗ #ದಾಂಡೇಲಿಯ_ಓರ್ವ_ಚಾಲಕನಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಆರೊಗ್ಯ ಇಲಾಖೆಯ #ಮಧ್ಯಾಹ್ನದ_ಬುಲೆಟಿನ್ ನಲ್ಲಿ ಈ ಬಗ್ಗೆ #ಖಚಿತ_ಪಡಬೇಕಿದೆ.
ಈ ಚಾಲಕನ ಟ್ರಾವೇಲ್ ಹಿಸ್ಟರಿ ಕೆಳಿದರೇ ಹಳಿಯಾಳ- ದಾಂಡೇಲಿ ಜನರೇ ಬೆಚ್ಚಿಬಿಳಲಿದ್ದಾರೆ. ಲಾರಿ ಚಾಲಕ ಗುಜರಾತ್ ಗೆ ತೆರಳಿದ್ದ ಈತ ಬಳಿಕ ಹಳಿಯಾಳಕ್ಕೂ ಬಂದು ಹೋಗಿದ್ದ ಎಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದ್ದು ಈಗ ಮಹಾರಾಷ್ಟ್ರ, ಮುಂಬೈನಿಂದ ಬಂದಿರುವವರು ಜಿಲ್ಲೆಗೆ ಕಂಕಟವಾಗುತ್ತಿದ್ದಾರೆ.
ಸೋಮವಾರಷ್ಟೇ ಜಿಲ್ಲೆಯ ಹೊನ್ನಾವರ-4, ಕಾರವಾರ-1 ಮತ್ತು ಮುಂಡಗೋಡದಲ್ಲಿ-2,ಭಟ್ಕಳ-2
ಒಟ್ಟೂ 9 ಪ್ರಕರಣಗಳು ದೃಢಪಟ್ಟಿದ್ದವು..
ಮೊದಲು ಭಟ್ಕಳಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಸೊಂಕು ಮಹಾರಾಷ್ಟ್ರ, ಮುಂಬೈನಿಂದ ಬರುತ್ತಿರುವ ಜನರಿಂದ ಜಿಲ್ಲೆಯ ಇತರ ತಾಲೂಕುಗಳಿಗೂ ಹಬ್ಬುತ್ತಿರುವುದು ಜನರಲ್ಲಿ ಆತಂಕ ಮೂಡಿಸುತ್ತಿದೆ.
Leave a Comment