
ಕಾರವಾರ: ತಾಲೂಕಿನ ತೋಡೂರು ಗ್ರಾಮದ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕರುಣಾ ನಾಯ್ಕ, ಉಪಾಧ್ಯಕ್ಷರಾದ ಚಂದ್ರಕಾಂತ್ ಚಿಂಚಣಕರ, ಸದಸ್ಯರಾದ ಜನಾರ್ಧನ ನಾಯ್ಕ, ಗಜಾನನ ಬನಾರೆ ಹಾಗೂ ಊರಿನ ಹಿರಿಯರಾದ ದಮ್ಮು ಗೌಡ, ಗಿರಿಧರ್ ನಾಯ್ಕ, ಉದಯ ನಾಯ್ಕ ಹಾಗೂ ಶ್ರೀ ಸಣ್ಣಮ್ಮ ಯುವಕ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Leave a Comment