ಹಳಿಯಾಳ:- ಹೋಂ ಕ್ವಾರಂಟೈನ್ ಇದ್ದು, ಕೊವಿಡ್-೧೯ ರೋಗ ಪತ್ತೆ ಪರೀಕ್ಷೆಗಾಗಿ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ನೀಡಿ ಮನೆಯಲ್ಲಿಯೇ ಇರದೆ ಹೊರಗೆ ಸುತ್ತಾಡಿ ನಿಯಮ ಉಲ್ಲಂಘಿಸಿದ ಗ್ರಾಮಾಂತರ ಭಾಗದ 5 ಜನರ ಮೇಲೆ ತಾಲೂಕಾಡಳಿತ ಹಳಿಯಾಳ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.
Tahsildar Vidyadhar Gulgule
ಗ್ರಾಮೀಣ ಭಾಗದ ಐವರ ಮೇಲೆ ಎಫ್‌ಐಆರ್
ಕೊರೊನಾ ಮಹಾಮಾರಿ ದೇಶದಲ್ಲೇಡೆ ವೇಗವಾಗಿ ಹರಡುತ್ತಿದೇ ಮಾತ್ರವಲ್ಲದೇ ರಾಜ್ಯದಲ್ಲಿ ಮತ್ತು ಹಳಿಯಾಳ ತಾಲೂಕಿನಲ್ಲಿಯೂ ಉಲ್ಬಣಗೊಳ್ಳುತ್ತಿದೆ. ವೈರಸ್ ದಾಳಿ ನಿಯಂತ್ರಿಸಲು ಸರ್ಕಾರಗಳು, ಕೊರೊನಾ ವಾರಿರ‍್ಸ್ಗಳು ಪಡಬಾರದ ಶ್ರಮ ಪಡುತ್ತಿದ್ದಾರೆ ಆದರೇ ಕ್ವಾರಂಟೈನ್ ಅಲ್ಲಿರುವವರು ಮಾತ್ರ ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಸುತ್ತಾಡುತ್ತಿದ್ದು ಇಂತಹವರ ಮೇಲೆ ತಾಲೂಕಾಡಳಿತ ಈಗ ರಾಷ್ಟಿçÃಯ ವಿಪತ್ತು ಸುರಕ್ಷತಾ ಕಾಯ್ದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದೆ.
ತಾಲೂಕಿನ ಯಡೋಗಾ ಗ್ರಾಮದ ಇಬ್ಬರು ಯುವಕರು, ಬೆಳವಟಗಿ, ತತ್ವಣಗಿ ಹಾಗೂ ಮುಂಡವಾಡ ಗ್ರಾಮದ ತಲಾ ಓರ್ವರ ಮೇಲೆ ಒಟ್ಟೂ ಐವರ ಮೇಲೆ ಹೋಂ ಕ್ವಾರಂಟೈನ್ ಉಲ್ಲಂಘಿಸಿ ಹೊರಗೆ ಸುತ್ತಾಡಿದ್ದಕ್ಕೆ ರಾಷ್ಟಿಯ ವಿಪತ್ತು ಸುರಕ್ಷತಾ ಕಾಯ್ದೆ ಅಡಿ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ನಿರ್ದಾಕ್ಷೀಣ್ಯ ಕ್ರಮ ತಹಶೀಲ್ದಾರ್ ಎಚ್ಚರಿಕೆ
ಈ ಕುರಿತು ಮಾತನಾಡಿದ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಹೋಂ ಕ್ವಾರಂಟೈನ್ ನಲ್ಲಿರುವವರ ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿರುತ್ತೇ ಮಾತ್ರವಲ್ಲದೇ ಇವರ ಮೊಬೈಲ್ ಲೊಕೆಷನ್ ಕೂಡ ಜಿಲ್ಲಾಡಳಿತ ಟ್ರೇಸ್ ಮಾಡುತ್ತಿರುತ್ತದೆ. ಇವರು ಕ್ವಾರಂಟೈನ್ ಪ್ರದೇಶದಿಂದ ಹೊರ ಬಂದರೇ ತಕ್ಷಣ ತಾಲೂಕಾಡಳಿತಕ್ಕೆ ಮಾಹಿತಿ ಬಂದು ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗುತ್ತದೆ ಮತ್ತೇ ಪದೆ ಪದೆ ಅದೇ ತಪ್ಪು ಮಾಡುವವರ ಮೇಲೆ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರಿಂದ ಸದ್ಯ ಹಳಿಯಾಳದ ಗ್ರಾಮಾಂತರ ಭಾಗದ ೫ ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೂ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು. canrabuzz.com
ಸದ್ಯ 190ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ ನಲ್ಲಿದ್ದು ಇವರಲ್ಲಿ ಯಾರಾದರೂ, ಸೀಲ್‌ಡೌನ್ ಪ್ರದೇಶದಲ್ಲಿನ ಪ್ರಾಥಮಿಕ, ದ್ವಿತಿಯ ಸಂಪರ್ಕದ ಜನರು ನಿಯಮ ಉಲ್ಲಂಘಿಸಿದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹೀಗಾಗಿ ಜನರು ಸಹಕರಿಸಬೇಕು. ಕೊರೊನಾ ವಿರುದ್ದದ ಹೊರಾಟಕ್ಕೆ ಕೈ ಜೋಡಿಸಬೇಕೆಂದು ತಹಶೀಲ್ದಾರ್ ಗುಳಗುಳೆ ಮನವಿ ಮಾಡಿದರು. canarabuzz.com
canarabuzz.com
Leave a Comment