
ಹಳಿಯಾಳ :- ತಾಲೂಕಿಗೆ ಬೆಂಬಿಡದೆ_ಕಾಡುತ್ತಿರುವ ಕೊರೊನಾ ಪೆಡಂಭೂತ ಮಂಗಳವಾರ ಮತ್ತೇ 16 ಜನಕ್ಕೆ ಒಕ್ಕರಿಸಿರುವುದು ಖಾತ್ರಿ ಆಗಿದೆ.
ಸೋಮವಾರದ ವರೆಗೆ 78 ಪ್ರಕರಣಗಳಿದ್ದ ಹಳಿಯಾಳಕ್ಕೆ ಮಂಗಳವಾರದ 16 ಪ್ರಕರಣ ಸೇರಿ ಒಟ್ಟೂ_94_ಸೊಂಕಿತ ಪ್ರಕರಣಗಳು ಇಲ್ಲಿ ದಾಖಲಾಗಿವೆ.
ಮಂಗಳವಾರ ಹಳಿಯಾಳ ಪಟ್ಟಣದ ಮೇದಾರಗಲ್ಲಿ ಯುವಕ-30 ವರ್ಷ, ಆನೆಗುಂದಿ_ಬಡಾವಣೆ ಯುವಕ-43 ವರ್ಷ, ದುರ್ಗಾನಗರದ ಯುವಕ 28 ವರ್ಷ ಕುವೈತನಿಂದ ಹಿಂದಿರುಗಿರುವ ವ್ಯಕ್ತಿಗೆ ಸೊಂಕು ದೃಢವಾಗಿದೆ.

ಇನ್ನೂ ಗ್ರಾಮಾಂತರ ಭಾಗದ ಬಿಕೆ_ಹಳ್ಳಿ ಗ್ರಾಮದಲ್ಲಿ ಪುರುಷ-32 ವರ್ಷ, ಬೆಳವಟಗಿ ಗ್ರಾಮ ಯುವಕ-21ವರ್ಷ, ಕೆಕೆ_ಹಳ್ಳಿ – ಪುರುಷ-34 ವರ್ಷ, ಹುನ್ಸವಾಡ ಗ್ರಾಮದಲ್ಲಿ ಪುರುಷ-45 ವರ್ಷ ಹಾಗೂ 13, 16 ವರ್ಷದ ಯುವಕರು ಮತ್ತು 85 ವರ್ಷದ ವೃದ್ದೆಯಲ್ಲಿ ವೈರಸ್ ಪತ್ತೆ.
ಕಾಮತಿಕೊಪ್ಪ ಗ್ರಾಮದ 23 ವರ್ಷದ ಯುವಕ,
ತೇರಗಾಂವನ– ಯುವತಿ-18 ವರ್ಷ, ದೊಡ್ಡಕೊಪ್ಪ– ಪುರುಷ-32 ವರ್ಷ, ಯಡೋಗಾ ಗ್ರಾಮ ಯುವಕ 20 ವರ್ಷ, ಮುರ್ಕವಾಡ ಗ್ರಾಮ ಯುವಕ 28 ವರ್ಷ ಹಾಗೂ ಮುಂಡವಾಡ ಗ್ರಾಮದ ಯುವಕ 26 ವರ್ಷ ಇವರಲ್ಲಿ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ.
ಎಲ್ಲರನ್ನೂ ಬಾಣಸಗೇರಿಯ ಕೊವಿಡ್ ಕೇರ್ ಸೆಂಟರಗೆ ದಾಖಲಿಸಲಾಗಿದೆ.


Leave a Comment